ಜಿಲ್ಲಾ ಸುದ್ದಿ

ದೇವೇಗೌಡರ ಮೊಮ್ಮಗ ಕುನಾಲ್ ಗೆ ಕೂಡಿ ಬಂದ ಕಂಕಣಭಾಗ್ಯ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ ಕುನಾಲ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಉಧ್ಯಮಿ ಜಯಪ್ರಕಾಶ್ ಅವರ ಪುತ್ರಿ ಶುಭದ...

ದೇವೇಗೌಡರ ಮೊಮ್ಮಗ ಕುನಾಲ್ ಗೆ ಕೂಡಿ ಬಂದ ಕಂಕಣಭಾಗ್ಯ
ವಿವಾಹ ಆಹ್ವಾನ ಪತ್ರಿಕೆ
Published On :

ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ ಕುನಾಲ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಉದ್ಯಮಿ ಜಯಪ್ರಕಾಶ್ ಅವರ ಪುತ್ರಿ ಶುಭದ ಅವರನ್ನು ವರಿಸಿದ್ದಾರೆ.

ಎಚ್ ಡಿ ದೇವೇಗೌಡ ಪುತ್ರ ಬಾಲಕೃಷ್ಣೇಗೌಡ-ಕವಿತಾ ಅವರ ಪುತ್ರರಾಗಿರುವ ಕುನಾಲ್ ಅವರು, ಉದ್ಯಮಿ ಟಿ.ವಿ.ಜಯಪ್ರಕಾಶ್ ಮತ್ತು ತಾರಾಮಣಿ ಅವರ ಪುತ್ರಿ ಶುಭದ ಅವರನ್ನು ವರಿಸಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ಜ್ಞಾನ ಸ್ವೀಕಾರ್ ಪಬ್ಲಿಕ್ ಶಾಲೆಯಲ್ಲಿ ಕುನಾಲ್-ಶುಭದ ಅವರ ವಿವಾಹ ಸಮಾರಂಭ ನಡೆದಿದ್ದು, ಕುಟುಂಬದ ಕೆಲವೇ ಬಹುಮುಖ್ಯ ಸ್ನೇಹಿತರು-ಬಂಧುಮಿತ್ರರ ಉಪಸ್ಥಿತಿಯಲ್ಲಿ ಸರಳವಾಗಿ ವಿವಾಹ ನೆರವೇರಿದೆ.

ಇದೇ ಏಪ್ರಿಲ್ 25ರಂದು ಬೆಂಗಳೂರಿನ ಅರಮನೆ ಮೈದಾನದ ಬೆಂಗಳೂರು ಮೇನ್ ಪ್ಯಾಲೆಸ್ (ವಸಂತನಗರ ಮುಖ್ಯದ್ವಾರ)ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ. ಕುಮಾರ ಸ್ವಾಮಿ, ರೇವಣ್ಣ ಸೇರಿದಂತೆ ದೇವೇಗೌಡರ ಕುಟುಂಬಸ್ಥರು ಪಾಲ್ಗೊಳ್ಳುತ್ತಿದ್ದು, ದೇಶದ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.