ಅಕ್ಷಯ ದಿನದಂದು ಮರಣ ಮೃದಂಗ
ಅಕ್ಷಯ ತೃತೀಯಾ ದಿನ ರಾಜ್ಯದಲ್ಲಿ ಯಮರಾಯ ಅಟ್ಟಹಾಸ ಮೆರೆದಿದ್ದಾನೆ. ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 13 ಜನ ಮೃತಪಟ್ಟಿದ್ದಾರೆ...

ಬೆಂಗಳೂರು: ಅಕ್ಷಯ ತೃತೀಯಾ ದಿನ ರಾಜ್ಯದಲ್ಲಿ ಯಮರಾಯ ಅಟ್ಟಹಾಸ ಮೆರೆದಿದ್ದಾನೆ. ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 13 ಜನ ಮೃತಪಟ್ಟಿದ್ದಾರೆ.
ಕಾರ್ಮಿಕ ಮಹಿಳೆಯರ ಸಾವು (ಹಾಸನ): ತಾಲೂಕಿನ ಮಡೆನೂರು ಗ್ರಾಮದ ಸಮೀಪದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನೋವಾ ಕಾರು ಡಿಕ್ಕಿ ಹೊಡೆದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ಕಾರ್ಮಿಕ ಮಹಿಳೆಯರು ಮೃತಪಟ್ಟಿದ್ದಾರೆ.
ಮಡೆನೂರು ಗ್ರಾಮದ ಜಯಮ್ಮ, ಗಿಡ್ಡಮ್ಮ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಶಾರದಮ್ಮ ಮತ್ತು ಕಾಳಮ್ಮ ಹಾಸನ ನಗರದ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಸಂಜೆ 6. 40ರಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದರು. ಆಗ ಎದುರಿನಿಂದ ವೇಗವಾಗಿ ಬೆಂಗಳೂರು ಕಡೆಯಿಂದ ಬಂದ ಇನೋವಾ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಅತಿ ವೇಗದಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಮಳೆಯಲ್ಲೇ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಕುಟುಂಬವೇ ನಿರ್ನಾಮ (ಯಮಕನಮರಡಿ): ಹಿಂದಿನಿಂದ ರಭಸವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್‍ನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹುಕ್ಕೇರಿ ತಾಲೂಕಿನ ಕಾಟಾಬಳಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ನಂ. 4ರಲ್ಲಿ ಅಪಘಾತ ನಡೆದಿದೆ. ಚಿಕ್ಕೋಡಿ ತಾಲೂಕಿನ ಮಾಂಗೂರ ಗ್ರಾಮದ ನಂದಕುಮಾರ ಶ್ರೀನಾಥ ಚೌಗಲಾ (35), ಆತನ ಪತ್ನಿ ನಂದಿನಿ (28), ಮಕ್ಕಳಾದ ಸುಪ್ರಿಯ (8), ಸಾವಿತ್ರಿ (4) ಮೃತರು. ಇವರು ಬೈಕ್ ಮೇಲೆ ಚಿಕ್ಕೋಡಿಯಿಂದ ಬೆಳಗಾವಿ ಕಡೆಗೆ ಹೊರಟಿದ್ದರು.
ಮದುಮಗಳು ಸಾವು (ಮೂಡಿಗೆರೆ): ವಿವಾಹದ ಸಿದಟಛಿತೆಗಾಗಿ ಬೆಂಗಳೂರಿಗೆ ಹೋಗಿ ಮರಳುತ್ತಿದ್ದವರ ಕಾರು ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಮುಖಾಮುಖಿಯಲ್ಲಿ ಮದುಮಗಳು ಸೇರಿದಂತೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಗೋಣೀಬೀಡು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಬಣಕಲ್ ಹೋಬಳಿ ಬೆಟ್ಟಗೆರೆಯ ಬಿ.ಕೆ. ಕೃಷ್ಣ(60), ಪತ್ನಿ ಶಾರದಾ (45), ಪುತ್ರಿ ಲಾವಣ್ಯ (26) ಮೃತರು. ಲಾವಣ್ಯಾಳಿಗೆ ಹಾಸನ ಜಿಲ್ಲೆಯ ಹೇಮಂತ ಕುಮಾರ್ ಎಂಬುವರೊಂದಿಗೆ ಮೇ 15ರಂದು ವಿವಾಹ ನಿಶ್ಚಯವಾಗಿತ್ತು. ವಿವಾಹ ತಯಾರಿಯಲ್ಲಿ ತೊಡಗಿದ್ದ ಹೆಣ್ಣಿನ ಮನೆಯವರು ಕುಟುಂಬ ಸಹಿತ ಕಾರಿನಲ್ಲಿ ಬೆಂಗಳೂರಿಗೆ ತೆರಳಿ ಜವಳಿ ಮತ್ತು ಲಗ್ನಪತ್ರಿಕೆಯೊಂದಿಗೆ ಗೋಣಿಬೀಡು ಮಾರ್ಗವಾಗಿ ಬೆಟ್ಟಗೆರೆಗೆ ಮಂಗಳವಾರದ ಬೆಳಗಿನ ಜಾವ ಹಿಂದಿರುಗುತ್ತಿದ್ದರು. ಚಾಲಕ ಸಂದೇಶ, ಅಕ್ಷತಾ ಮತ್ತು ಚೈತ್ರಾ ಎಂಬುವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಡಗಿಗಳ ದುರ್ಮರಣ (ಹೊಸಕೋಟೆ): ತಾಲೂಕಿನ ಚಿಂತಾಮಣಿ ರಸ್ತೆ ಸೊನ್ನದೇನಹಳ್ಳಿ ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಅಶೋಕ್ (26), ಶೌಕತ್ ಆಲಿ ಖಾನ್ (25) ಮೃತಪಟ್ಟಿದ್ದಾರೆ. ಇಬ್ಬರೂ ಬಡಗಿ ಕೆಲಸ ಮಾಡುತ್ತಿದ್ದು ಬೈಕಿನಲ್ಲಿ ಸೊನ್ನದೇನಹಳ್ಳಿಗೆ ಹೋಗಲು ತಿರುವು ತೆಗೆದುಕೊಳ್ಳಲು ಕಾಯುತ್ತಿದ್ದಾಗ ಎದುರುಗಡೆಯಿಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಸ್ಥಳೀಯರು ಲಾರಿ ಗಾಜುಗಳನ್ನು ಒಡೆದು, ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


