ಜಿಲ್ಲಾ ಸುದ್ದಿ

ಪೊಲೀಸ್ ಆಯುಕ್ತರ ಟ್ವಿಟರ್ ಅಕೌಂಟಿಗೆ ಲಕ್ಷ ಹಿಂಬಾಲಕರು!

ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಇಲಾಖೆ ಮತ್ತೊಂದು ಮೈಲಿಗಲ್ಲು ತಲುಪಿದ್ದು ನಗರ ಪೊಲೀಸ್ ಆಯುಕ್ತರ ಟ್ವಿಟರ್ ಅಕೌಂಟ್‍ಗೆ (ಸಿಪಿಬಿಎಲ್‍ಆರ್) 1ಲಕ್ಷ ಫಾಲೋವರ್ ಗಳಾಗಿದ್ದಾರೆ...

ಪೊಲೀಸ್ ಆಯುಕ್ತರ ಟ್ವಿಟರ್ ಅಕೌಂಟಿಗೆ ಲಕ್ಷ ಹಿಂಬಾಲಕರು!
ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ
Published On :

ಬೆಂಗಳೂರು: ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಇಲಾಖೆ ಮತ್ತೊಂದು ಮೈಲಿಗಲ್ಲು ತಲುಪಿದ್ದು ನಗರ ಪೊಲೀಸ್ ಆಯುಕ್ತರ ಟ್ವಿಟರ್ ಅಕೌಂಟ್‍ಗೆ (ಸಿಪಿಬಿಎಲ್‍ಆರ್) 1ಲಕ್ಷ ಫಾಲೋವರ್ ಗಳಾಗಿದ್ದಾರೆ.

2014ರ ಜುಲೈ ತಿಂಗಳಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಎಂ.ಎನ್.ರೆಡ್ಡಿ ಅವರು ಟ್ವಿಟರ್ ಖಾತೆ ತೆರೆದಿದ್ದರು. ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಲು ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿ ಹಾಗೂ ಸೂಕ್ತ ಮಾರ್ಗ ಎನ್ನುವುದನ್ನು ಅರಿತಿದ್ದ ಎಂ.ಎನ್.ರೆಡ್ಡಿ, ಕಮಿಷನರ್ ಅಕೌಂಟ್ ಮಾತ್ರವಲ್ಲದೇ, ನಗರದ ಎಲ್ಲಾ ಡಿಸಿಪಿಗಳು, ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ಸಿಸಿಬಿ ಹೆಸರಿನಲ್ಲೂ ಟ್ವಿಟರ್ ಅಕೌಂಟ್ ತೆರೆದಿದ್ದು ಜನಪ್ರಿಯವಾಗಿವೆ. ಆದರೆ, ಪೊಲೀಸ್ ಆಯುಕ್ತರ ಅಕೌಂಟ್‍ವೊಂದಕ್ಕೆ ಕೇವಲ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ 1ಲಕ್ಷ ಫಾಲೋವರ್‍ಗಳಾಗಿದ್ದಾರೆ. ಅಲ್ಲದೇ ಸೋಮವಾರ ಒಂದೇ ದಿನ 1 ಸಾವಿರಕ್ಕೂ ಅಧಿಕ ಜನ ಕಮಿಷನರ್ ಅಕೌಂಟ್ ಫಾಲೋ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದುವುದರಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರದ ಬಗ್ಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

1 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿರುವುದಕ್ಕೆ ಗಣ್ಯರು ಹಾಗೂ ಸಾರ್ವಜನಿಕರು ಅಬಿನಂದಿಸಿದ್ದಾರೆ. ಟ್ವಿಟರ್ ಅಕೌಂಟ್ 1 ಲಕ್ಷ ಪಾಲೋವರ್ಸ್‍ಗಳನ್ನು ಹೊಂದಿರುವುದಕ್ಕೆ ಆಯುಕ್ತ ಎಂ.ಎನ್.ರೆಡ್ಡಿ ಸಾರ್ವಜನಿಕರನ್ನು ಅಭಿನಂದಿಸಿದ್ದಾರೆ. ಹಲವು ಏರಿಳಿತಗಳ ನಡುವೆ ನಿರ್ಧಿಷ್ಟ ಗುರಿಯನ್ನು ಇರಿಸಿಕೊಡು ಮುಂದೆ ಸಾಗುತ್ತಿದ್ದೇವೆ.

ನಿಮ್ಮದೇ ಆದ ಪೊಲೀಸ್ ಹಾದಿಯಲ್ಲಿ ಇದು ಹೊಸ ಮೈಲಿಗಲ್ಲಾಗಿದ್ದು ನಾವು ಸಮಾಜದ ಪೊಲೀಸ್ ಆಗಲು ಹೊರಟಿದ್ದೇವೆ. ಈ ಸಂತೋಷದ ಸಂದರ್ಭದಲ್ಲಿ ನಗರ ಪೊಲೀಸ್ ಘಟಕ ಹಾಗೂ ಟ್ವಿಟರ್ ಖಾತೆಗಳನ್ನು ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗೆ ಉತ್ತಮವವಾಗಿ ಕಾರ್ಯ ನಿರ್ವಹಿಸುತ್ತಿರುವ ಸೋಶಿಯಲ್ ಮೀಡಿಯಾ ತಂಡ, ಟ್ವಿಟರ್ ಇಂಡಿಯಾಕ್ಕೂ ಅಭಿನಂದನೆ ಹಾಗೂ ಶುಭಾಶಯಗಳು ಎಂದು ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.