ಕೆಪಿಎಸ್ ಸಿ: ರಾಷ್ಟ್ರಪತಿಗೆ ಮನವಿ
ಕೆಎಎಸ್ 2011ನೇ ಸಾಲಿನ ಪರೀ ಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಕೆಪಿಎಸ್‍ಸಿಯ 8 ಸದಸ್ಯರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ...

ಬೆಂಗಳೂರು: ಕೆಎಎಸ್ 2011ನೇ ಸಾಲಿನ ಪರೀ ಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಕೆಪಿಎಸ್‍ಸಿಯ 8 ಸದಸ್ಯರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಅಕ್ರಮಗಳಲ್ಲಿ ಭಾಗಿಯಾಗಿರುವ 3 ನಿವೃತ್ತ ಹಾಗೂ 5 ಹಾಲಿ ಕೆಪಿಎಸ್‍ಸಿ ಸದಸ್ಯರ ಮೇಲೆ ಕ್ರಮ ಕೈಗೊಳ್ಳಲು ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ನೇಮಕ ಅವ್ಯವಹಾರ ಸ್ಪಷ್ಟವಾಗಿದ್ದರೂ, ಸರ್ಕಾರ ಇದುವರೆಗೂ ಅಧಿಕಾರಿಗಳ ಮೇಲೆ ತನಿಖೆಗೆ ಮುಂದಾಗಿರಲಿಲ್ಲ. ಇದೀಗ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಸತ್ಯಾಂಶ ಬಹಿರಂಗಕ್ಕೆ ಸಂಪುಟ ನಿರ್ಧರಿಸಿದೆ.
ಯಾರ್ ಯಾರ ಮೇಲೆ ಕ್ರಮ? ನಿವೃತ್ತ ಸದಸ್ಯರಾದ ಡಾ.ಬಿ.ಎಸ್ ಕೃಷ್ಣಪ್ರಸಾದ್, ಕನ್ನಿ ರಾಮ್, ಎಲ್.ಎನ್.ರಾಮಕೃಷ್ಣ, ಹಾಲಿ ಸದಸ್ಯ ರಾದ ಎಸ್.ಆರ್.ರಂಗಮೂರ್ತಿ, ಡಾ.ಎನ್.ಮಹದೇವ್, ಡಾ.ಎಚ್.ವಿ.ಪಾಶ್ರ್ವನಾಥ್, ದಯಾಶಂಕರ್, ಡಾ.ಎಚ್.ಡಿ. ಪಾಟೀಲ್ ಅವರನ್ನು ವಿಚಾರಣೆಗೊಳಪಡಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ. ಜೊತೆಗೆ ಸದಸ್ಯೆ ಮಂಗಳಾ ಶ್ರೀಧರ್ ಹಾಗೂ ಅಂದಿನ ಕೆಪಿಎಸ್‍ಸಿಯ ಕಾರ್ಯದರ್ಶಿಗಳನ್ನು ವಿಚಾರಣೆಗೊಳಪಡಿಸಲು ಕೋರಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


