ಆಟೋ ಚಾಲಕ ಸೆರೆ
ದೆಹಲಿ ಮೂಲದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾರ್ವಜನಿಕರ ಎದುರಿನಲ್ಲೇ ಹಲ್ಲೆ ನಡೆಸಿ, ಆಟೋದಿಂದ ಹೊರಗೆಳೆದು...

ಬೆಂಗಳೂರು: ದೆಹಲಿ ಮೂಲದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾರ್ವಜನಿಕರ ಎದುರಿನಲ್ಲೇ ಹಲ್ಲೆ ನಡೆಸಿ, ಆಟೋದಿಂದ ಹೊರಗೆಳೆದು ಅಮಾನವೀಯವಾಗಿ ವರ್ತಿ ಸಿದ್ದ ಓಲಾ ಆಟೋ ಚಾಲಕನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ಸಿಂಗಸಂದ್ರ ಸಮೀಪದ ಸುಭಾಷ್ ನಗರ ನಿವಾಸಿ ರಿಜ್ವಾನ್ ಬಾಷಾ (40) ಬಂಧಿತ. ಹಲ್ಲೆಗೊಳಗಾದ ದಿವ್ಯಾ ಶರ್ಮಾ, ಆಕೆ ಪತಿ ವಿಪುಲ್ ಸಿರೋಹಿ ನೀಡಿದ ದೂರಿನ ಮೇರೆಗೆ ರಿಜ್ವಾನ್‍ನನ್ನು ಬಂಧಿಸಿ, ಕೋರ್ಟ್‍ಗೆ ಹಾಜರುಪಡಿಸಲಾಗಿದೆ.
ಬುಧವಾರ ಹಲ್ಲೆ ಘಟನೆ ನಡೆದಿತ್ತು. ಘಟನೆ ಬಗ್ಗೆ ದಿವ್ಯಾ ಶರ್ಮಾ ಫೇಸ್ ಬುಕ್ ನಲ್ಲಿ ತಮಗಾದ ನೋವನ್ನು ಹೇಳಿಕೊಂಡಿದ್ದರು. ಗಂಭೀರ ಪ್ರಕರಣವಾಗಿದ್ದರಿಂದ ಹಲ್ಲೆಗೊಳಗಾದ ಮಹಿಳೆ ವಿಳಾಸ ಪತ್ತೆಹಚ್ಚಿ ಪೊಲೀಸರು ಸಂಪರ್ಕ ಮಾಡಿದ್ದರು. ಮೊದಲು ಅಧಿಕೃತವಾಗಿ ದೂರು ನೀಡಲು ನಿರಾಕರಿಸಿದರು. ಮನವೊಲಿಕೆ ನಂತರ ದೂರು ನೀಡಿದರು.
ಆಟೋ ಚಾಲಕನ ಸ್ವವಿವರಗಳ ಡಿಸ್ಲೇ ಕಾರ್ಡ್‍ನ್ನು ಮೊಬೈಲ್ ನಲ್ಲಿ ಫೋಟೋ ತೆಗೆದು ಹಾಕಿದ್ದರಿಂದ ಆರೋಪಿ ವಿಳಾಸ ಪತ್ತೆಹಚ್ಚಲು ಕಷ್ಟವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


