ಜಿಲ್ಲಾ ಸುದ್ದಿ

ನರೇಗಾ ಕೂಲಿ ಪ್ರತಿದಿನ ರು.204

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರ ಕೂಲಿ ಹೆಚ್ಚಳವಾಗಿದೆ. ಈ ಸಂಬಂಧ ಖಾತ್ರಿ ಕಾಯ್ದೆ ಎಂಜಿಎನ್ ಆರ್ ಇಜಿಎ 2005 (42-2005)ಗೆ ತಿದ್ದುಪಡಿ ಮಾಡಲಾಗಿದ್ದು ಪರಿಷ್ಕತ ಕೂಲಿ ದರಗಳು ಏ.1ರಿಂದಲೇ ಜಾರಿಗೆ ಬರಲಿದೆ...

ನರೇಗಾ ಕೂಲಿ ಪ್ರತಿದಿನ ರು.204
ಸಾಂದರ್ಭಿಕ ಚಿತ್ರ
Published On :

ಬಾಗಲಕೋಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರ ಕೂಲಿ ಹೆಚ್ಚಳವಾಗಿದೆ. ಈ ಸಂಬಂಧ ಖಾತ್ರಿ ಕಾಯ್ದೆ ಎಂಜಿಎನ್ ಆರ್ ಇಜಿಎ 2005 (42-2005)ಗೆ ತಿದ್ದುಪಡಿ ಮಾಡಲಾಗಿದ್ದು ಪರಿಷ್ಕತ ಕೂಲಿ ದರಗಳು ಏ.1ರಿಂದಲೇ ಜಾರಿಗೆ ಬರಲಿದೆ.

ಹೀಗಾಗಿ ಕರ್ನಾಟಕದಲ್ಲಿ ಕೂಲಿ ದರ ರು. 200ರ ಗಡಿ ದಾಟಿದೆ. ಇದು ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರಿಗೆ ಕನಿಷ್ಠ ನೂರು ದಿನದ ಉದ್ಯೋಗ ಕೊಡುವ ಸಂಬಂಧ ಜಾರಿಗೆ ತರಲಾದ ನರೇಗಾ ಒಂದರ್ಥದಲ್ಲಿ ಉದ್ಯೋಗದ ಹಕ್ಕು ಪ್ರತಿಪಾದಿಸಿದೆ ಯಾದರೂ ವಾಸ್ತವದಲ್ಲಿ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಕೂಲಿ ಪ್ರಮಾಣ ದುಬಾರಿಯಾಗಿದ್ದರಿಂದ ಲಾಭಾಂಶವೂ ಕಡಿಮೆಯಾಗಿತ್ತು. ಇದೀಗ ಖಾತ್ರಿ ಕೂಲಿ ಮತ್ತೆ ಜಾಸ್ತಿಯಾಗಿರುವುದರಿಂದ ಕೃಷಿ ಕ್ಷೇತ್ರ ಎದುರಿಸುವ ಸಮಸ್ಯೆಗಳು ತಕ್ಷಣಕ್ಕೆ ಪರಿಗಣನೆಗೆಬಾರದು. ನರೇಗಾ ಕಾಯ್ದೆ ತಿದ್ದುಪಡಿ ಅನ್ವಯ ಜಾರಿಗೆ ಬಂದ ಹೊಸ ಕೂಲಿ ದರ ಅತಿ ಹೆಚ್ಚು ಅಂದರೆ ಸುಮಾರು ರು.251 ಹರ್ಯಾಣ ರಾಜ್ಯದಲ್ಲಿ ನಿಗದಿಪಡಿ ಸಲಾಗಿದೆ. ಕರ್ನಾಟಕದಲ್ಲಿ ರು.192 ಇದ್ದ ಕೂಲಿ ರು.204ಕ್ಕೆ ಹೆಚ್ಚಳ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.