ದೇಶದ ಐಕಾನ್ ಆಗಲಿದೆ ಇಸ್ಕಾನ್ ದೇಗುಲ
ಈ ಕಟ್ಟಡದ ಎತ್ತರ 210 ಮೀಟರ್. ಅಂದರೆ ಸುಮಾರು 700 ಅಡಿಗಳು. 70 ಅಂತಸ್ತುಗಳು. ಐದು ಎಕರೆಯ ವಿಶಾಲವ್ಯಾಪ್ತಿಯಲ್ಲಿ ಇದರ ನಿರ್ಮಾಣ. ದೇಶದ...

ಬೆಂಗಳೂರು: ಈ ಕಟ್ಟಡದ ಎತ್ತರ 210 ಮೀಟರ್. ಅಂದರೆ ಸುಮಾರು 700 ಅಡಿಗಳು. 70 ಅಂತಸ್ತುಗಳು. ಐದು ಎಕರೆಯ ವಿಶಾಲವ್ಯಾಪ್ತಿಯಲ್ಲಿ ಇದರ ನಿರ್ಮಾಣ. ದೇಶದ `ಐಕಾನ್' ಕಟ್ಟಡವಾಗಲಿದೆ ಈ `ಕೃಷ್ಣಲೀಲೆ'. ಇದು `ದ ಗ್ರ್ಯಾಂಡ್ ಟೆಂಪಲ್'- ಬೃಂದಾವನ ಚಂದ್ರೋದಯ ಮಂದಿರ. ಪ್ರಪಂಚದ ಸಾಂಪ್ರದಾಯಿಕ, ಐತಿಹಾಸಿಕ ಕಟ್ಟಡಗಳೆಂದಾಕ್ಷಣ ಈಜಿಪ್ಟ್‍ನ ಪಿರಮಿಡ್, ರೋಮ್ ನ ಕೊಲೊಸ್ಸೀಮ್ , ಕಾಂಬೊಡಿಯಾದ ಅನ್‍ಗ್ಕೋರ್ ವಾಟ್, ದಿಲ್ಲಿಯ ಕುತುಬ್‍ಮಿನಾರ್, ಮಧುರೈನ ಮೀನಾಕ್ಷಿ ದೇವಸ್ಥಾನ, ಆಗ್ರಾದ ತಾಜ್‍ಮಹಲ್, ಲಾಸಾದ ಪೋಟಾಲಾ ಪ್ಯಾಲೇಸ್, ವಾಷಿಂಗ್ಟನ್ ಡಿಸಿ ಕಟ್ಟಡ, ದಿಲ್ಲಿಯ ಅಕ್ಷರ ಧಾಮ... ಹೀಗೆ ಹಲವು ಚಿತ್ರಣ ಕಣ್ಣ ಮುಂದೆ ಬರುತ್ತದೆ.
ಅಂತಹದ್ದೇ ಸಾಲಿಗೆ ಈಗ ಮತ್ತೊಂದು ಸೇರ್ಪಡೆ ಶ್ರೀ ಕೃಷ್ಣನ ಈ`ಬೃಂದಾವನ ಚಂದ್ರೋದಯ ಮಂದಿರ'. ದೇಶದ `ಮೇರುಶ್ರೇಣಿ'ಯಲ್ಲಿ ಖಂಡಿತಾ ಈ ಮಂದಿರ ನಿಲ್ಲಲಿದೆ. ಏಕೆಂದರೆ ಇಷ್ಟೂ ಕಟ್ಟಡಗಳಿಗಿಂತ ಅತಿ ಎತ್ತರವಾಗಿ ಸಮ ಕಾಲೀನ ವಾಸ್ತುಶಿಲ್ಪದೊಂದಿಗೆ ಶ್ರೀಕೃಷ್ಣನ `ಮಂದಿರ' ನಿರ್ಮಾಣಕ್ಕೆ ಮುಂದಾಗಿದೆ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಕೇಂದ್ರ- ಇಸ್ಕಾನ್. ಉತ್ತರಪ್ರದೇಶದ ಆಗ್ರಾ -ಮಥುರಾ ಹೆದ್ದಾರಿ ಮಾರ್ಗದಲ್ಲಿರುವ ಬೃಂದಾವನದಲ್ಲಿ ಮಂದಿರ ನಿರ್ಮಾ ಣವಾಗಲಿದೆ.
ಈಜಿಪ್ಟ್‍ನಲ್ಲಿರುವ ಪಿರಮಿಡ್‍ನ ಎತ್ತರ 138.8 ಮೀಟರ್. ಅದನ್ನೂ ಮೀರಿಸಿ ಬರೋಬ್ಬರಿ 210ಮೀ ಎತ್ತರಕ್ಕೆ ಈ ಮಂದಿರ ತಲೆ ಎತ್ತಲಿದೆ.
ಈ ಮೂಲಕ ಪ್ರಪಂಚದ ಸಾಂಪ್ರದಾಯಿಕ, ಧಾರ್ಮಿಕ ಕಟ್ಟಡಗಳ ಸಾಲಿನಲ್ಲಿ ಅಗ್ರಸ್ಥಾನಕ್ಕೇರುವ ದಾಖಲೆ ನಿರ್ಮಿಸಲು ಮುಂದಾಗಿದೆ. ಒಟ್ಟಾರೆ 5 ಎಕರೆ ಪ್ರದೇಶದಲ್ಲಿ
ನಿರ್ಮಾಣವಾಗುತ್ತಿರುವ ಈ ದೇವಸ್ಥಾನ 70 ಮಹಡಿಯ ಗಗನಚುಂಬಿ ಕಟ್ಟಡದ ಎತ್ತರಕ್ಕೆ ಸಮಾನ. ಬೃಂದಾವನ ಚಂದ್ರೋದಯ ಮಂದಿರ ಅಧ್ಯಾತ್ಮಿಕ ಜ್ಞಾನ ಸಂಪಾದನೆಯ ಕೇಂದ್ರವಾಗಿ ಪರಿಣಮಿಸಲಿದೆ. ಆಧುನಿಕ ವಾಸ್ತುಶಿಲ್ಪಿ ಶೈಲಿಯಲ್ಲಿ ಈ ಕಟ್ಟಡದ ನಕ್ಷೆ ತಯಾರಾಗಿದೆ.
ಹಿಂದಿನ ರುವಾರಿಗಳು:
ಯೋಜನೆ: ಮಧು ಪಂಡಿತ ದಾಸ- ಚೇರ್‍ಮನ್ ಹಾಗೂ ಚಂಚಲಪತಿದಾಸ- ಅಧ್ಯಕ್ಷ
ಪರಿಕಲ್ಪನೆ ವಿನ್ಯಾಸ ನಿರ್ದೇಶನ ಮತ್ತು ಅಭಿವೃದ್ಧಿ: ಮಧು ಪಂಡಿತ ದಾಸ ಮತ್ತು ಭಕ್ತಿಲತ ಡಿಡಿ
ಪರಿಕಲ್ಪನೆ ವಾಸ್ತುಶಿಲ್ಪಿ: ಪ್ರಶಾಂತ್ ಕಡ್ಕೋಲ್
ವಿನ್ಯಾಸ ಸಲಹೆಗಾರರು- ಇಂಜಿನಿ ಯಸ್ ಸ್ಟುಡಿಯೋ ಪ್ರೈ.ಲಿ., ಗುರ್ಗಾಂವ್.
ಒಳಪ್ರದೇಶದ ವಿನ್ಯಾಸ ಸಲಹೆ ಗಾರರು-ಕ್ವಿನ್ಟೆಸೆನ್ಸ್ ಡಿಸೈನ್
ಸ್ಟುಡಿಯೋ , ನೋಯ್ಡಾ .ಎಸಿ ಹಾಗೂ ವೆಂಟಿಲೇಶನ್(ಎಚ್ವಿಎಸಿ) ಸಲಹೆಗಾರರು- ಗುಪ್ತಾ
ಕನ್ಸಲ್ಟೆನ್ಸಿ, ನವ ದೆಹಲಿ.ಕಟ್ಟಡ ತಾಂತ್ರಿಕ,
ಸ್ಟ್ರಕ್ಚ್‍ರಲ್ ಸಲಹೆ ಗಾರರು- ಟಿಆರ್‍ಸಿ ವಲ್ರ್ಡ್‍ವೈಡ್ ಎಂಜಿನಿಯರಿಂಗ್, ಬೆಂಗಳೂರು.
ಎಲಿಕ್ಟ್ರಿಕಲ್ ಸಲಹೆಗಾರರು-ಡಬ್ಲೂಬಿಜಿ ಸಂಸ್ಥೆ, ನವ ದೆಹಲಿ
ಅಗ್ನಿ ಸಲಹೆಗಾರರು- ಬೆಹಿರಾ ಮತ್ತು ಅಸೋಸಿಯೇಟ್ಸ್, ನವ
ದೆಹಲಿ.
ಕೃಷ್ಣ ಲೀಲಾ ಥೀಮ್ ಪಾರ್ಕ್
ಬೃಂದಾವನದ 12 ವನಗಳ ಮರುಸೃಷ್ಟಿ (ದ್ವಾದಶ ಕಾನನ), ಯಮುನಾ ಕೊಲ್ಲಿ, ವ್ರಜ ಮಂಡಲ ಪರಿಕರ್ಮ ಪ್ರದರ್ಶನ, ಸಂಕೀರ್ತನ ಭಜನಾ
ಮಂದಿರ, ಕಥೆ ಹೇಳುವ ಪ್ರದೇಶ, ಲೈಟ್ ಶೋ, ಗೋಶಾಲಾ, ಮ್ಯೂಸಿಕಲ್ ಫೌಟೇನ್, ವ್ರಜ ಪಾರಂಪರಿಕ ಹಳ್ಳಿ, ಆಂಪಿಥೇಟರ್ ಮತ್ತು ಲೇಸರ್ ಶೋ.
ಉದ್ದೇಶವೇನು?
ಶ್ರೀ ಚೈತನ್ಯ ಮಹಾಪ್ರಭು ಅವರು ಮೊದಲ ಬಾರಿಗೆ ಶ್ರೀಕೃಷ್ಣ ಬೃಂದಾವನದಲ್ಲಿದ್ದ ಕುರುಹುಗಳನ್ನು ಪತ್ತೆ ಹಚ್ಚಿದ್ದರು. ಅವರ ಮಾರ್ಗ ಅನುಸರಿಸಿದ್ದ ಇಸ್ಕಾನ್‍ನ ಸಂಸ್ಥಾಪಕರಾದ ಭಕ್ತಿವೇದಾಂತ ಸ್ವಾಮಿ ಶ್ರೀಲಾ ಪ್ರಭುಪಾದರು 1960 ಮತ್ತು 70ರ ದಶಕದಲ್ಲಿ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತಾ ಹಾಗೂ ಬೃಂದಾವನ ಕುರಿತಾದ ಮಾಹಿತಿಯನ್ನು ಪ್ರಪಂಚಾದ್ಯಂತ ಹರಡುವ ಕಾರ್ಯಕ್ಕೆ ಮುಂದಾಗಿದ್ದರು. ಇಂದು ಅದರ ಫಲವಾಗಿ ಕೃಷ್ಣನ ಭಕ್ತರ ಆಶಯದಂತೆ ಬಹು ನಿರೀಕ್ಷಿತ ಹಾಗೂ ಐತಿಹಾಸಿಕ ಬೃಂದಾವನ
ಚಂದ್ರೋದಯ ಮಂದಿರ ನಿರ್ಮಾ ಣಕ್ಕೆ ಇಸ್ಕಾನ್ ಸಂಸ್ಥೆ ಮುಂದಾಗಿದೆ. ಐದು ಎಕರೆಯ ವಿಶಾಲ ಪ್ರದೇಶದಲ್ಲಿ ಕೃಷ್ಣ ಲೀಲಾ ಥೀಮ್ ಪಾರ್ಕ್ ಸಹ ನಿರ್ಮಾಣವಾಗಲಿದ್ದು, ಚಂದ್ರೋದಯ ಮಂದಿರ ಇದರ ಭಾಗ. ಇದರ ಸುತ್ತ ದ್ವಾದಶ ಕಾನನಗಳು ಸೇರಿದಂತೆ ಶ್ರೀಕೃಷ್ಣನ ಇತಿಹಾಸ ಹಾಗೂ ಬೃಂದಾವನ-ಮಥುರಾದ ವಿವರ ನೀಡುವ ಸೌಲಭ್ಯಗಳಿರಲಿವೆ.
ಮಂದಿರದ ವೈಶಿಷ್ಟ್ಯ
12-ವನಗಳು
210 ಮೀಟರ್ ಎತ್ತರದಲ್ಲಿ ಬೃಂದಾವನದ ದರ್ಶನಶ್ರೀರಾಧಾ ವೃಂದಾವನಚಂದ್ರ ಮಂದಿರ,
ಶ್ರೀ ಚೈತನ್ಯ ಮಂದಿರ
ಶ್ರೀಲಾ ಪ್ರಭುಪಾದ ಮಂದಿರ
ಉತ್ಸವ ಸಭಾಂಗಣಗಳು, ಗೋಲೋಕ ಕೃಷ್ಣನ ಇತಿಹಾಸ ಸಂಗ್ರಹಾಲಯ
ಶ್ರೀ ಚೈತನ್ಯ ಎಕ್ಸ್ಪೋ
ಶ್ರೀಲಾ ಪ್ರಭುಪಾದ ಎಕ್ಸ್ಪೋ
ಶ್ರೀಕೃಷ್ಣ ಬಾಲ್ಯದ ದಿನಗಳನ್ನು ಕಳೆದ ಎನ್ನಲಾದ 12 ವನಗಳ ಮರುಸೃಷ್ಟಿ ಇಲ್ಲಾಗಲಿದೆ. ಕುಮುದವನ, ಖದಿರವನ, ಬೃಂದಾವನ, ಭಂದಿರವನ, ತಲಾವನ, ಮಧುವನ, ಮಹಾವನ, ಭದ್ರಾವನ, ಬಹುಳಾವನ, ಕಾವ್ಯಾವನ, ಬಿಲ್ವಾವನ ಮತ್ತು ಲೋಹವನ ಹೆಸರಲ್ಲಿ ವನಗಳು ಮರುಸೃಷ್ಟಿಯಾಗಲಿದೆ.
ಬೃಂದಾವನ ಶತಮಾನಗಳಿಂದಲೂ ಆಧ್ಯಾತ್ಮಿಕ ಜ್ಞಾನವನ್ನು ಜಗತ್ತಿಗೆ ಹಂಚುತ್ತ ಬಂದಿದೆ. ಶ್ರೀ ಚೈತನ್ಯ ಮಹಾಪ್ರಭುಗಳು ಮತ್ತು ಅವರ ಅನುಯಾಯಿಗಳು
ಶ್ರೀಕೃಷ್ಣನ ಭೋದನೆಗಳನ್ನು ಎಲ್ಲೆಡೆ ಪಸರಿಸಿದರು ಮತ್ತು ಬೃಂದಾವನವನ್ನು ಕೇಂದ್ರವಾಗಿಟ್ಟು ಕೊಂಡು ಭವ್ಯ ಮಂದಿರಗಳನ್ನು ನಿರ್ಮಿ ಸಿದರು. ಶ್ರೀ ಪ್ರಭುಪಾದರೂ ಅದನ್ನೇ ಮುಂದುವರಿಸಿದರು. ಜಗತ್ತಿನ ಅತಿ ಎತ್ತರದ ದೇಗುಲ ವಾಗಲಿರುವ ಬೃಂದಾವನ ಚಂದ್ರೋದಯ ಮಂದಿರ ದ ಮೂಲಕ ಬೃಂದಾವನವನ್ನು ಜಗತ್ತಿನ ಪ್ರಮುಖ ಯಾತ್ರಾ
ಸ್ಥಳವಾಗಿ ರೂಪಿಸುವುದು ನಮ್ಮ ಗುರಿ. ಈ ಅದ್ಭುತ ಕೇಂದ್ರದ ಮೂಲಕ ಆಧ್ಯಾತ್ಮಿಕ ಪರಿವರ್ತನೆ ತರುವುದು ನಮ್ಮ ಕನಸು.
ಶ್ರೀ ಮಧು ಪಂಡಿತ ದಾಸ ಚೇರಮನ್,
ಬೃಂದಾವನ ಚಂದ್ರೋದಯ ಮಂದಿರ ಬೃಂದಾವನದ ಆರಾಧನೆಯೇ ಶ್ರೀಕೃಷ್ಣನ ಆರಾಧನೆ. ಈ ಅದ್ಭುತ ಮಂದಿರದ ಮೂಲಕ ಶ್ರೀಮಂತ ಪರಂಪರೆಯನ್ನು ಮತ್ತೊಮ್ಮೆ ನೆನಪು ಮಾಡಿಕೊಡುವ ಪ್ರಯತ್ನವಿದೆ.
- ಶ್ರೀ ಚಂಚಲಪತಿ ದಾಸ ಪ್ರೆಸಿಡೆಂಟ್,
ಬೃಂದಾವನ ಚಂದ್ರೋದಯ ಮಂದಿರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


