ಡಾ. ಸಾ.ಶಿ. ಮರುಳಯ್ಯ ಸೇರಿ 91 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ಸಾ.ಶಿ. ಮರುಳಯ್ಯ, ಜಿ.ಎಸ್. ಸಿದ್ದಲಿಂಗಯ್ಯ ಹಾಗೂ ಎಸ್.ಜಿ. ಮಾಲತಿ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 91 ಗಣ್ಯರಿಗೆ 2015ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲಾಗಿದೆ.
ನಾಳೆ ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂದು ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ಏ.4ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಹಿಂದೆ ಎರಡು ದಿನಗಳ ಕಾಲ ನಡೆಯುತ್ತಿದ್ದ ಕೆಂಪೇಗೌಡ ಜಯಂತಿಯನ್ನು ಈ ಬಾರಿ ಪಾಲಿಕೆ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಒಂದು ದಿನಕ್ಕೆ ಇಳಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ವಾರ್ಡ್ ಮಟ್ಟದಲ್ಲಿ ಕೆಂಪೇಗೌಡ ಜಯಂತಿ ಆಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ನಾಳೆ ಬೆಳಗ್ಗೆ 8 ಗಂಟೆಗೆ ಮೇಯರ್ ಎನ್.ಶಾಂತಕುಮಾರಿ ಅವರು ಎನ್.ಆರ್.ಚೌಕದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ವಿಜೇತರು: ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ: ವೇದ ವಿ. ಭಟ್, ಕೆ. ಚೆನ್ನಯ್ಯ, ಟಿ. ರಾಜಾರಾಮ್, ಡಾ. ವಸುಧಾ ಶ್ರೀನಿವಾಸ್, ಕುಮಾರಿ ಸ್ಫೂರ್ತಿ, ಆನಂದ ಮೂದಲಗೆರೆ, ಶ್ರೀಕಾಂತ ನಾಗೇಂದ್ರ ಶಾಸ್ತ್ರಿ. ಸಮಾಜ ಸೇವೆಗಾಗಿ ಹೆಚ್.ಬಿ. ರಾಜೇಗೌಡ, ಬಿ.ಎಂ. ನಾರಾಯಣ ಸ್ವಾಮಿ, ಡಿ. ದಾಸಪ್ಪ ಗೌಡ, ಭಾರ್ಗವಿ. ಎಂ.ಎಸ್. ರೇಣುಕಾಪ್ರಸಾದ್, ಡಾ. ರಿತಿಕಾ ಮಂಜುಳಾ, ಎ.ಬಿ. ಶಿವಕುಮಾರ್, ಎಂ. ಸಿದ್ದಪ್ಪ ನೇಗಲಾಲ, ಶ್ರೀನಿವಾಸನ್, ವಿ. ನಾಗರಾಜ. ರಂಗಭೂಮಿ ಸೇವೆಗಾಗಿ, ಕೆ.ಜಿ. ವೆಂಕಟೇಶ್, ಭಾಗ್ಯಶ್ರೀ, ಟಿ.ವಿ. ಗುರುಮೂರ್ತಿ, ವೆಂಕಟೇಶಯ್ಯ, ಲಕ್ಷ್ಮೀ ಶ್ರೀನಿವಾಸ್, ಟಿ.ಎಲ್. ರಮೇಶ್, ಎಸ್. ಗಂಗಪ್ಪ, ಪಿ. ಹುಚ್ಚಪ್ಪ, ವಿಜಯ್ ಕುಮಾರ್ ಜೀತೂರಿ. ಚಲನಚಿತ್ರ : ನಟ, ನಿರ್ಮಾಪಕ ರವಿಶಂಕರ್, ನಾಗತಿಹಳ್ಳಿ ರಮೇಶ್, ಕೆ.ಎಸ್. ಶ್ರೀನಿವಾಸ ಕುಮಾರ್, ಆರ್.ಟಿ. ರಮಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


