ರಾಜ್ ಕುಮಾರ್ ಆಟೋಗ್ರಾಫ್ ಬಳಿಕ ಯಾರ ಆಟೋಗ್ರಾಫ್ ಪಡೆದಿಲ್ಲ: ರಜನಿ
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ ದಿವಂಗತ ಡಾ. ರಾಜ್ ಕುಮಾರ್ ಅವರ ಬಳಿ ಕಷ್ಟಪಟ್ಟು

ಬೆಂಗಳೂರು: ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ ದಿವಂಗತ ಡಾ. ರಾಜ್ ಕುಮಾರ್ ಅವರ ಬಳಿ ಕಷ್ಟಪಟ್ಟು ಆಟೋಗ್ರಾಫ್‌ವೊಂದನ್ನು ಪಡೆದೆ, ಆನಂತರ ನನ್ನ ಜೀವಮಾನದಲ್ಲಿ ಯಾರ ಬಳಿಯು ಆಟೋಗ್ರಾಫ್ ಪಡೆದಿಲ್ಲ ಎಂದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.
ವರನಟ ಡಾ. ರಾಜ್ ಕುಮಾರ್ ಅವರ ಸ್ಮಾರಕವನ್ನು ಲೋಕಾರ್ಪಣೆ ಬಳಿಕ ಮಾತನಾಡಿದ ರಜನಿಕಾಂತ್ ಅವರು ರಾಜ್‌ಕುಮಾರ ಗುಣಗಾನ ಮಾಡಿದರು. 1954ರಲ್ಲಿ ಬೇಡರಕಣ್ಣಪ್ಪ ಚಿತ್ರದ ಮೂಲಕ ರಾಜ್‌ಕುಮಾರ್ ಅವರ ತಮ್ಮ ಚಿತ್ರ ಬದುಕಿನ ನಾಗಲೋಟ ಶುರು ಮಾಡಿದರು. ಅಂದು ಶುರುವಾದ ಅಶ್ವಮೇಧಯಾಗ ನಿರಂತರವಾಗಿ ಪ್ರಜ್ವಲಿಸಿತು. ರಾಜ್ ಕುಮಾರ್ ಕಾಲಿಟ್ಟ ಕಡೆಗಳಲ್ಲ ಜಯದ ಮಾಲೆ ಧರಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿ ವಿರಾಜಿಸಿದರು.
ಅವರ ಬದುಕು ಎಲ್ಲರಿಗೂ ಆದರ್ಶಪ್ರಾಯ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಬದುಕಿದ ಧೀಮಂತ ವ್ಯಕ್ತಿ. ಅವರಿಗೆ ಎಲ್ಲರು ನಮಸ್ಕರಿಸುತ್ತಾರೆ. ಆ ಅಭಿಮಾನಿಗಳ ಗೌರವ ನನಗಲ್ಲ ನನ್ನಲ್ಲಿ ನೆಲೆಸಿರುವ ತಾಯಿ ಸರಸ್ವತಿಗೆ ಎಂದ ಮಹಾನ್ ನಟ ರಾಜ್ ಕುಮಾರ್ ಎಂದು ರಜನಿಕಾಂತ್ ಬರ್ಣ್ಣಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


