ಐಟಿ ಸೋಗಲ್ಲಿ ಚಿನ್ನ ಸುಲಿಗೆ: ಐವರ ಸೆರೆ

ಬೆಂಗಳೂರು: ಆದಾಯತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂಗಾರದ ವರ್ತಕರನ್ನು ಬೆದರಿಸಿ ಚಿನ್ನದ ಗಟ್ಟಿ ಸುಲಿಗೆ ಮಾಡಿದ್ದ ಐವರು ಅಂತಾರಾಜ್ಯ ಕಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊಲ್ಹಾಪುರ ಕಾಮವಾಡಿಯ ಸರ್ಫಾಸ್ ಖಾನ್, ಜುನಬುದವಾರ್‌ಪೇಟೆ ಶಲಾಲ್(27), ಸಿಂಗ್ಲಿ ಜಿಲ್ಲೆಯ ಸಂತೋಷ್(20), ಕೊಲ್ಹಾಪುರದ ಜಾವೇದ್ ರಾಮ್‌ಜಿ ಚೌಸ್(25) ಬಂಧಿತರು. ಇವರ ಪೈಕಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ನಡೆಸಿದ್ದಾರೆ.
ಆರೋಪಿಗಳು ಕೇರಳದ ಆನಂದ್ ಮತ್ತು ಮಹೇಶ್ ಎಂಬುವವರನ್ನು ಬೆದರಿಸಿ 4 ಕೆ.ಜಿ. ಬಂಗಾರದ ಗಟ್ಟಿಗಳನ್ನು ದೋಚಿದ್ದರು. ಬಂಧಿತರಿಂದ 4 ಕೆ.ಜಿ ಬಂಗಾರದ ಗಟ್ಟಿ, ನಗದು, ಎಸ್ಕವೇಟರ್ ಮಷಿನ್ ಸೇರಿ ಒಟ್ಟು ರು. 1.76 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಡಿ. 3 ರವರೆಗೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ತಲಶ್ಯೇರಿಯವರಾದ ಆನಂದ್ ಮತ್ತು ಮಹೇಶ್ ಮಾಣಿಕ್ ಕದಂ ಮತ್ತು ವಿಕಾಸ್ ಕದಂ ಅವರ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಬೆಂಗಳೂರು ನಗರದ ನಗರತ್‌ಪೇಟೆಗೆ ಬಂದ ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅದೇ ರೀತಿ ಕಳೆದ 6 ರಂದು ಅವರು ಬೆಂಗಳೂರಿಗೆ ಬಂದಿದ್ದರು. ವಿಷಯ ತಿಳಿದ ಆರೋಪಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಚಿನ್ನ ದೋಚಲು ಸಂಚು ರೂಪಿಸಿದ್ದರು.
ಚಿನ್ನದ ಗಟ್ಟಿ ತೆಗೆದುಕೊಂಡು ಹೋಗುತ್ತಿದ್ದ ಇಬ್ಬರನ್ನೂ ತಪಾಸಣೆ ನೆಪದಲ್ಲಿ ಮಡಿವಾಳದ ಬಳಿ ಕೆಳಗಿಳಿಸಿ ಜೆ.ಪಿ ನಗರ ಸಮೀಪ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. 4 ಕೆ.ಜಿ ಚಿನ್ನದ ಗಟ್ಟಿಯನ್ನು ಬಲವಂತವಾಗಿ ಪಡೆದು ಹಣ, ಮೊಬೈಲ್, ಆಭರಣ ದೋಚಿ ಅಲ್ಲಿಂದ ಪರಾರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


