ಜಿಲ್ಲಾ ಸುದ್ದಿ

ಬ್ಯಾಡ್ ಟೀಚರ್ ಇರೋ ಶಾಲೆಗೆ ಹೋಗಲ್ಲ

ಇಂದಿರಾನಗರ ಕೇಂಬ್ರಿಡ್ಜ್ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಬಾಲಕಿ...

ಬ್ಯಾಡ್ ಟೀಚರ್ ಇರೋ ಶಾಲೆಗೆ ಹೋಗಲ್ಲ
Cambridge school, bengaluru
Published On :

ಬೆಂಗಳೂರು: ಬ್ಯಾಡ್ ಟೀಚರ್ ಇರುವ ಆ ಶಾಲೆಗೆ ನಾನು ಹೋಗಲ್ಲ..! ಇದು ಇಂದಿರಾನಗರ ಕೇಂಬ್ರಿಡ್ಜ್ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಬಾಲಕಿ ತನ್ನ ಪೋಷಕರ ಬಳಿ ಹೇಳಿಕೊಂಡಿರುವ ಮಾತುಗಳು.

ಬುದಧವಾರ ಕೇಂಬ್ರಿಡ್ಜ್ ಶಾಲೆಯಲ್ಲಿ ಪಾಲಕರ ಸಭೆ ಬಳಿಕ ಮಾತನಾಡಿದ ಬಲಕಿಯ ತಾಯಿ, ಮಗಳು ಮತ್ತೆ ಇದೇ ಶಾಲೆಗೆ ಬರಲು ಹೆದರುತ್ತಿದ್ದಾಳೆ. ಆದರೆ, ಶಾಲಾ ಆಡಳಿತ ಮಂಡಳಿ ಮಗಳ ಶಿಕ್ಷಣವನ್ನು ಇಲ್ಲೇ ಮುಂದುವರೆಸುವಂತೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.

ಮಗಳ ಮೇಲೆ ದೌರ್ಜನ್ಯ ನಡೆದ ಶಾಲೆಗೆ ಕಳುಹಿಸಲು ಇಷ್ಟವಿಲ್ಲ. ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇವೆ. ಇನ್ನು ಜೈಶಂಕರ್ ಅಸಭ್ಯ ವರ್ತನೆ ಬಗ್ಗೆ ಮಗಳು ಶಾಲೆಗೆ ಉಪ ಪ್ರಾಂಶುಪಲರಿಗೆ ಹಿಂದೆಯೇ ಮಾಹಿತಿ ನೀಡಿದ್ದರೂ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆಗಲೇ ಶಿಕ್ಷಕನನ್ನು ಕರೆಸಿ ವಿಚಾರಿಸಿದ್ದರೆ ಇಂಥಹ ಘಟನೆ ನಡೆಯುತ್ತಿರಲಿಲ್ಲ. ಈ ಬಗ್ಗೆ ಉಪ ಪ್ರಾಂಶುಪಾಲರನ್ನು ಭೇಟಿ ಮಾಡಿ ಕೇಳಬೇಕೆಂದಿದ್ದೇನೆ ಎಂದು ಬಾಲಕಿ ತಾಯಿ ಆಕ್ರೋಶ ವ್ಯಕ್ತಪಡಿಸಿದರು.

ತಂಡ ವಾಪಸ್: ಜೈಶಂಕರ್‌ನ ಹಿನ್ನಲೆ ಬಗ್ಗೆ ಮಾಹಿತಿ ಸಂಗ್ರಹಿಸಲು ತಮಿಳುನಾಡಿನ ತಿರುವಣ್ಣಾಮಲೈಗೆ ತೆರಳಿದ್ದ ಪೊಲೀಸರ ವಿಶೇಷ ತಂಡ ವಾಪಾಸಾಗಿದೆ. ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ಜೈಶಂಕರ್ ಮಾವ ಮತ್ತು ಕುಟುಂಬ ಸದಸ್ಯರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ನೆರೆ ಮನೆಯವರಿಗೂ ತಿಳಿದಿಲ್ಲ.

ಇನ್ನೂ ಜೈಶಂಕರ್ ವಿರುದ್ದ ಹಳೇ ಪ್ರಕರಣಗಳಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ವಿಚಾರಿಸಿದ್ದಾರೆ. ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತನಿಖಾಧಿಕಾರಿ ತಿಳಿಸಿದರು. ಆರೋಪಿ ಜೈಶಂಕರ್ ಒಂದೊಂದು ಬಾರಿ ಒಂದೊಂದು ರೀತಿಯ ಹೇಳಿಕೆ ಕೊಡುತ್ತಾನೆ. ಆದರೆ ಬಾಲಕಿ ಗುರುತು ಹಿಡಿದಿರುವ ಪ್ರಕಾರ ಜೈಶಂಕರ್ ಆರೋಪಿ.

ಅ.28 ಮತ್ತು 29ರಂದು ಶಾಲೆ ಆವರಣದ ಶೌಚಾಲಯಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.