ಜಿಲ್ಲಾ ಸುದ್ದಿ

ಒಎಲ್‌ಎಕ್ಸ್‌ನಲ್ಲಿ ಬಿಎಂಟಿಸಿ ಬಸ್ ಬಿಕರಿಗೆ!

ಬಿಎಂಟಿಸಿ ಬಸ್ ಬಿಕರಿಗಿದೆ...! ಹೌದು, ಅದುಕೇವಲ ರು.5 ಲಕ್ಷಕ್ಕೆ...

ಒಎಲ್‌ಎಕ್ಸ್‌ನಲ್ಲಿ ಬಿಎಂಟಿಸಿ ಬಸ್ ಬಿಕರಿಗೆ!
ಬಿಎಂಟಿಸಿ ಬಸ್ (ಕೆಎ01 ಎಫ್ 3701) ಫೋಟೋವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿ ಒಎಲ್‌ಎಕ್ಸ್. ಇನ್‌ನಲ್ಲಿ ಮಾರಾಟಕ್ಕೆ ಹಾಕಿರುವ ಚಿತ್ರ.
Published On :

ಬೆಂಗಳೂರು: ಬಿಎಂಟಿಸಿ ಬಸ್ ಬಿಕರಿಗಿದೆ...! ಹೌದು, ಅದುಕೇವಲ ರು.5 ಲಕ್ಷಕ್ಕೆ. ತಮಾಷೆ ಆದರೂ ಸತ್ಯ! ಅದು 'ಮಾರಿಬಿಡಿ' ಎಂಬ ಅಡಿಬರಹದಿಂದ ಖ್ಯಾತವಾಗಿರುವ ಆನ್‌ಲೈನ್ ಮಾರಾಟ ಸಂಸ್ಥೆ ಒಎಲ್‌ಎಕ್ಸ್. ಇನ್(olx.in)ನಲ್ಲಿ.

ಫೋಟೋ ಕ್ಲಿಕ್ಕಿಸಿ, ಅಪ್‌ಲೋಡ್ ಮಾಡಿ, ಒಎಲ್‌ಎಕ್ಸ್‌ನಲ್ಲಿ ಮಾರಿಬಿಡಿ ಎಂಬ ಜಾಹೀರಾತನ್ನು ಕಂಡ ವ್ಯಕ್ತಿಯೊಬ್ಬ ಇತ್ತೀಚೆಗೆ ಗೀಜಗದ ಹಕ್ಕಿಗಳನ್ನು ಒಎಲ್‌ಎಕ್ಸ್. ಇನ್‌ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಅತಿಥಿಯಾಗಿದ್ದ.

ಈಗ ಮೊನೀಷ್ ಎಂಬ ವ್ಯಕ್ತಿ ಸೆ.22ರಂದು ಬಿಎಂಟಿಸಿ ಬಸ್ (ಕೆಎ01 ಎಫ್ 3701) ಫೋಟೋವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿ ಒಎಲ್‌ಎಕ್ಸ್. ಇನ್‌ನಲ್ಲಿ ಮಾರಾಟಕ್ಕೆ ಹಾಕಿದ್ದಾನೆ ಹಾಗೂ ಸಂಪರ್ಕಕ್ಕೆ ದೂ.ಸಂ.9964484066 ನೀಡಿದ್ದಾನೆ.

2015ರ ಮಾಡೆಲ್‌ನ ಬಿಎಂಟಿಸಿ ಬಸ್ ಗಂಟೆಗೆ 780 ಕಿ.ಮೀ ವೇಗದಲ್ಲಿ ಸಂಚರಿಸಲಿದೆ ಎಂದು ಹೇಳುವ ಮೂಲಕ ಸಂಸ್ಥೆಯನ್ನು ಹೀಯಾಳಿಸಿ ಅಪಹಾಸ್ಯ ಮಾಡಿದ್ದಾನೆ. ಆದರೆ ಇದು ಯಾವ ಅಧಿಕಾರಿಗಳ ಗಮನಕ್ಕೂ ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.