ಅಂಚೆ ಇಲಾಖೆಗೆ ರು. 9 ಸಾವಿರ ದಂಡ

ಮಂಡ್ಯ: ರಿಜಿಸ್ಟರ್ಡ್ ಪೋಸ್ಟ್ ಪತ್ರವನ್ನು 17 ದಿನ ತಡವಾಗಿ ಬಟವಾಡೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಹಕನಿಗೆ ರು. 9 ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಂಚೆ ಇಲಾಖೆಗೆ ಆದೇಶ ನೀಡಿದೆ.
ನಗರದ ನ್ಯಾಯವಾದಿ ಎನ್. ಚನ್ನಬಸಪ್ಪ ಅವರು ಪ್ರಕರಣವೊಂದರ ಅಂತಿಮ ಆದೇಶದ ದೃಢೀಕೃತ ನಕಲು ಪ್ರತಿ ಪಡೆಯಲು 2013 ಅ. 1ರಂದು ಮಂಡ್ಯದ ಮುಖ್ಯ ಅಂಚೆ ಕಚೇರಿಮೂಲಕ ಹೊಳೆನರಸೀಪುರದ ಜೆಎಂಎಫ್‌ಸಿ ನ್ಯಾಯಾಲಯದ ಬೆಂಚ್ ಕ್ಲರ್ಕ್‌ಗೆ ನೋಂದಾಯಿತ ಅಂಚೆ ಲಕೋಟೆ ಮೂಲಕ ಅರ್ಜಿ ಸಲ್ಲಿಸಿದ್ದರು.
ಆದರೆ, ಲಕೋಟೆ ತಮ್ಮನ್ನು ತಲುಪದ ಬಗ್ಗೆ ನ್ಯಾಯಾಲಯದ ಬೆಂಚ್ ಕ್ಲರ್ಕ್ ಮಹದೇವಸ್ವಾಮಿ ತಿಳಿಸಿದ ಹಿನ್ನೆಲೆಯಲ್ಲಿ ಆ ಬಗ್ಗೆ ಚನ್ನಬಸಪ್ಪ ಅವರು ಅಂಚೆ ಕಚೇರಿಯಲ್ಲಿ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ಸಬೂಬು ಹೇಳಿದ್ದಾರೆ. ಈ ಬ್ಗೆಗ ಪೋಸ್ಟ್ ಮಾಸ್ಟರ್‌ಗೆ ಅ. 15 ರಂದು ಲಿಖಿತ ದೂರು ನೀಡಿದ್ದರ ಮೇರೆಗೆ ಅ. 17ರಂದು ಲಕೋಟೆಯ ವಿಳಾಸದಾರರಿಗೆ ತಲುಪಿರುವುದಾಗಿ 19 ರಂದು ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ.
ತ್ವರಿತವಾಗಿ ವಿಲೇವಾರಿಯಾಗಬೇಕಿದ್ದ ನೋಂದಾಯಿತ ಅಂಚೆ ಪತ್ರದ ಲಕೋಟೆಯ ಸಂಬಂಧಿಸಿದ ವಿಳಾಸದಾರರನ್ನು ತಲುಪುವುದು ತಡವಾಗಿದ್ದರಿಂದ ಬೇಸತ್ತ ಚನ್ನಬಸಪ್ಪ ಅವರು ಅಂಚೆ ಕಚೇರಿಯ ಸಿಬ್ಬಂದಿ ಸೇವಾ ನ್ಯೂನತೆ 2014ರ ಮಾರ್ಚ್ 17 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು.
ಅಂಚೆ ಇಲಾಖೆಯ ಅಧೀಕ್ಷಕರು, ಪೋಸ್ಟ್ ಮಾಸ್ಟರ್, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಭಾರತೀಯ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಜನರಲ್ ಮತ್ತು ಹೊಳೆನರಸೀಪುರ ನ್ಯಾಯಾಲಯಗಳ ಪ್ರದೇಶದ ಅಂಚೆ ಪೇದಯನ್ನು ದೂರಿನಲ್ಲಿ ಎದುರುದಾರರನ್ನಾಗಿ ಮಾಡಲಾಗಿತ್ತು. ಅದರಂತೆ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷ ವಿ.ಎಂ ಆರಾಧ್ಯ ಅವಲರ ಅಂಚೆ ಇಲಾಖೆಯು ದಂಡದ ರೂಪದಲ್ಲಿ ಗ್ರಾಹಕನಿಗೆ ನೀಡುವಂತೆ ಡಿ. 16ರಂದು ಆದೇಶಿಸಿದೆ.
ಗ್ರಾಹಕರಿಗೆ ಉಂಟಾದ ಆರ್ಥಿಕ ನಷ್ಟ ಪರಿಹಾರವಾಗಿ ರು. 2 ಸಾವಿರ, ಮಾನಸಿಕ ಮತ್ತು ದೈಹಿಕ ಯಾತನೆಯ ಪರಿಹಾರವಾಗಿ ರು. 5 ಸಾವಿರ ಹಾಗೂ ಪ್ರಕರಣದ ಖರ್ಚು ರು. 2 ಸಾವಿರ ರು. ಸೇರಿದಂತೆ ಒಟ್ಟು ರು. 9 ಸಾವಿರ ಒಂದು ತಿಂಗಳಲ್ಲಿ ನಾಲ್ಕು ಎದುರುದಾರರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ನೀಡಬೇಕು . ಇಲ್ಲವೇ ಆದೇಶದ ದಿನದಿಂದ ಪೂರ್ಣ ಹಣ ಪಾವತಿಯಾಗುವವರೆವಿಗೂ ವಾರ್ಷಿಕ ಶೇ. 10 ಬಡ್ಡಿ ಪಾವತಿಸಬೇಕು. ಆದೇಶ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ ಹೂಡಲು ಗ್ರಾಹಕರಿಗೆ ಅವಕಾಶವಿರುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


