ಕ್ರಿಕೆಟ್

IPL 2026: ಇದೇನಿದು.. ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಬಗ್ಗೆ ಕಾವ್ಯ ಮಾರನ್ ಕಿಡಿ! Video ವೈರಲ್

ಪಂದ್ಯ ಮುಗಿದ ನಂತರವೂ ಕೊಹ್ಲಿ, ಟ್ರಾವಿಸ್ ಹೆಡ್ ಗೆ ಹ್ಯಾಂಡ್ ಶೇಕ್ ಮಾಡದೆ ತೆರಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರವಾಗಿದೆ.

IPL 2026: ಇದೇನಿದು.. ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಬಗ್ಗೆ ಕಾವ್ಯ ಮಾರನ್ ಕಿಡಿ! Video ವೈರಲ್
ಕಾವ್ಯ ಮಾರನ್
Published On :

ಹೈದರಾಬಾದ್: ಶುಕ್ರವಾರ ಸಂಜೆ ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಹೈವೋಲ್ಟೇಜ್ ಪಂದ್ಯ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿ ಗಮನ ಸೆಳೆಯಿತು.

ಪಂದ್ಯ ಮುಗಿದ ನಂತರವೂ ಕೊಹ್ಲಿ, ಟ್ರಾವಿಸ್ ಹೆಡ್ ಗೆ ಹ್ಯಾಂಡ್ ಶೇಕ್ ಮಾಡದೆ ತೆರಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರವಾಗಿದೆ.

ಈ ಮಧ್ಯೆ ಆರ್ ಸಿಬಿ ಬೌಲರ್ ಕೃನಾಲ್ ಪಾಂಡ್ಯ ನಿತೀಶ್ ಕುಮಾರ್ ರೆಡ್ಡಿಗೆ ಎಸೆದ ಬೌನ್ಸರ್ ಬಗ್ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯ ಮಾರನ್ ಕಿಡಿಕಾರಿದ್ದಾರೆ. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ, 17 ನೇ ಓವರ್‌ನಲ್ಲಿ ಕೃನಾಲ್ ರೆಡ್ಡಿ ಬೌನ್ಸರ್ ನೋಡಿ, ಇದೇನಿದು ಎಂದು ಕಾವ್ಯ ಮಾರನ್ ಮುಖವನೆಲ್ಲಾ ಒಂದು ರೀತಿಯಲ್ಲಿ ಮಾಡಿಕೊಂಡು ಸಿಟ್ಟಾಗಿದ್ದಾರೆ. ಅಂಪೈರ್ ಕೂಡಾ ಅದನ್ನು ವೈಡ್ ಅಂತಾ ಹೇಳಿದ್ದಾರೆ. ಘಟನೆಯ ನಂತರ ಕ್ಯಾಮೆರಾ ಸ್ಟ್ಯಾಂಡ್‌ಗಳ ಕಡೆಗೆ ತಿರುಗಿದಾಗ, ಮಾರನ್ ಬೌನ್ಸರ್‌ಗಳ ಬಗ್ಗೆ ಆಘಾತಕ್ಕಿಂತ ಹೆಚ್ಚಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವಂತೆ ಕಂಡುಬಂದಿತು.

ಕೃನಾಲ್ ಪಾಂಡ್ಯ ಬೌಲಿಂಗ್ ಬಗ್ಗೆ ಹತ್ತಿರದಲ್ಲಿದ್ದ ಜನರೊಂದಿಗೆ ಕಾವ್ಯ ಮಾರಾನ್ ಚರ್ಚಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದು ಕ್ರುನಾಲ್‌ಗೆ ಹೊಸದೇನಲ್ಲ ಮತ್ತು ಐಪಿಎಲ್ 2026 ರ ಅವಧಿಯಲ್ಲಿಯೂ ಬ್ಯಾಟರ್ ಔಟ್ ಮಾಡಲು ಆಗ್ಗಾಗೆ ಬೌನ್ಸರ್ ಬಳಸುತ್ತಿದದ್ದು ವರದಿಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.