'ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದ ನಂತರವೂ ಸಾಬೀತುಪಡಿಸುವ ಅಗತ್ಯವಿಲ್ಲ': ಕೊಹ್ಲಿ ಮಾತಿಗೆ ಆರ್ ಅಶ್ವಿನ್ ಬೆಂಬಲ!
2024ರ ಕೊನೆಯಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅಶ್ವಿನ್, ಕೊಹ್ಲಿಯವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ತಮ್ಮ ಮಾಜಿ ತಂಡದ ಸಹ ಆಟಗಾರನನ್ನು ಬೆಂಬಲಿಸಿದರು.

ಟೆಸ್ಟ್ ಕ್ರಿಕೆಟ್‌ನಿಂದ ಹಠಾತ್ ನಿವೃತ್ತಿ ಹೊಂದಿದ ಬಗ್ಗೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ನೀಡಿದ್ದ ಹೇಳಿಕೆಗಳಿಗೆ ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ನಂತರ ದೀರ್ಘಾವಧಿಯ ಸ್ವರೂಪಕ್ಕೆ ನಿವೃತ್ತಿ ಘೋಷಿಸಿದ ತಮ್ಮ ನಿರ್ಧಾರದ ಕುರಿತು ಮಾತನಾಡಿದ ಕೊಹ್ಲಿ, ನಿರ್ದಿಷ್ಟವಾಗಿ ಪ್ರತಿಯೊಂದು ಪಂದ್ಯದ ನಂತರವೂ ತನ್ನ ಮೌಲ್ಯ ಏನೆಂಬುದನ್ನು ಸಾಬೀತುಪಡಿಸುವಂತೆ ನಿರಂತರವಾಗಿ ಹೇಳಲಾಗುತ್ತಿತ್ತು. ಅಂತಹ ಸ್ಥಳ ನನಗಲ್ಲ ಎಂದು ಭಾವಿಸಿದೆ ಎಂದು ಅವರು ಹೇಳಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಾಡ್‌ಕಾಸ್ಟ್‌ನಲ್ಲಿ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಕೊಹ್ಲಿ ಈ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.
2024ರ ಕೊನೆಯಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅಶ್ವಿನ್, ಕೊಹ್ಲಿಯವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ತಮ್ಮ ಮಾಜಿ ತಂಡದ ಸಹ ಆಟಗಾರನನ್ನು ಬೆಂಬಲಿಸಿದರು.
'ವಿರಾಟ್, 'ನಾನು ನನ್ನ ಕೆಲಸವನ್ನು ಯಾರಿಗೂ ಸಾಬೀತುಪಡಿಸಬೇಕಾಗಿಲ್ಲ' ಎಂದು ಹೇಳಿದರು ಮತ್ತು ಅದು ಸಂಪೂರ್ಣವಾಗಿ ಸರಿ. ಏಕೆಂದರೆ, ನನಗೂ ಹಾಗೆಯೇ ಅನಿಸಿತು. ಸಾಬೀತುಪಡಿಸಲು ಏನೂ ಉಳಿದಿಲ್ಲ. ಇಷ್ಟು ವರ್ಷಗಳ ಕಾಲ ಆಡಿದ ಮತ್ತು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದ ನಂತರವೂ ಅವರು ಯಾರಿಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕು?' ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
'ಜನರು ಹೊರಗಿನಿಂದ ನೋಡಿ ಏನು ಬೇಕಾದರು ಹೇಳುವುದು ಅವರ ಕೆಲಸ. ನೀವು ಚಿಕ್ಕವರಿದ್ದಾಗ, 'ನಿಮ್ಮ ತಪ್ಪುಗಳನ್ನು ತಿದ್ದುವ ಅಥವಾ ಸಾಬೀತುಪಡಿಸುವ' ಅಗತ್ಯವಿರುತ್ತದೆ. ಆದರೆ, ಯುದ್ಧವು ಬೇರೆಯವರೊಂದಿಗೆ ಅಲ್ಲ ನಿಮ್ಮೊಂದಿಗೆ ಎಂದು ನೀವು ಅರಿತುಕೊಂಡಾಗ ಪ್ರಬುದ್ಧತೆ ಮತ್ತು ಬುದ್ಧಿವಂತಿಕೆ ತಾನಾಗಿಯೇ ಬರುತ್ತದೆ. ನೀವು ಆ ಅರಿವನ್ನು ಪಡೆದ ಕ್ಷಣ, ಜೀವನವು ತುಂಬಾ ಸುಲಭವಾಗುತ್ತದೆ. ವಿರಾಟ್ ಆ ಹಂತವನ್ನು ತಲುಪಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಿಷಾದವನ್ನು ಬಿಟ್ಟುಬಿಡುವುದು ಸುಲಭವಲ್ಲ' ಎಂದು ಅವರು ಹೇಳಿದರು.
ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಹರಡಿರುವ ಊಹಾಪೋಹಗಳಿಗೆ ಕೂಡ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯಿಸಿದ್ದಾರೆ.
'ಮೊದಲ ದಿನವೇ ನಾನು ಸಾಕಷ್ಟು ಒಳ್ಳೆಯವನಲ್ಲ ಅಥವಾ ನಾನು ಅಗತ್ಯವಿಲ್ಲ ಎಂದು ಹೇಳಿ. ಆದರೆ, ನನ್ನ ಸಾಮರ್ಥ್ಯ ಮತ್ತು ಮೌಲ್ಯವನ್ನು ನಿರಂತರವಾಗಿ ಸಾಬೀತುಪಡಿಸಬೇಕು ಎಂದು ನನಗೆ ಅನಿಸಿದರೆ, ನಾನು ಆ ಜಾಗದಲ್ಲಿ ಇರುವುದಿಲ್ಲ' ಎಂದು ಪಾಡ್‌ಕಾಸ್ಟ್‌ನಲ್ಲಿ ಕೊಹ್ಲಿ ಮಾಡಿದ ಹೇಳಿಕೆಗಳು, ವಿಶೇಷವಾಗಿ ತಮ್ಮ ವೃತ್ತಿಜೀವನದ ಈ ಹಂತದಲ್ಲಿ ತಮ್ಮನ್ನು ತಾವು ಮತ್ತೆ ಸಾಬೀತುಪಡಿಸುವ ಅಗತ್ಯವಿಲ್ಲ ಅಥವಾ ಮನಸ್ಥಿತಿಯಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಒತ್ತಡ ಹೇರಿದರೆ, ಅವರು 'ಈ ಜಾಗ'ದಿಂದ ಮುಂದುವರಿಯುವ ಸುಳಿವು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


