IPL 2026: CSK ಮತ್ತೊಂದು ಸೋಲು; ಪ್ಲೇಆಫ್ ಹಾದಿ ಕಠಿಣ; LSG ಗೆ 7 ವಿಕೆಟ್ ಭರ್ಜರಿ ಜಯ
ಚೆನ್ನೈ ನೀಡಿದ್ದ 188 ರನ್ ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಲಖ್ನೋ ಸೂಪರ್ ಜೈಂಟ್ಸ್ ಕೇವಲ 15.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಗೆಲುವು ದಾಖಲಿಸಿತು.

ಲಖನೌ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಶುಕ್ರವಾರ ಲಖ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026 ಪಂದ್ಯದಲ್ಲಿ ಲಖ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಚೆನ್ನೈ ನೀಡಿದ್ದ 188 ರನ್ ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಲಖ್ನೋ ಸೂಪರ್ ಜೈಂಟ್ಸ್ ಕೇವಲ 15.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಗೆಲುವು ದಾಖಲಿಸಿತು.
ಮಿಚೆಲ್ ಮಾರ್ಷ್ ಮತ್ತು ಜೋಷ್ ಇಂಗ್ಲಿಸ್ ಅವರ ಸ್ಫೋಟಕ ಬ್ಯಾಟಿಂಗ್ ಲಕ್ನೋ ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.
ಇನ್ನು ಲಕ್ನೋ ತಂಡ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದ್ದರೂ ಇಂದಿನ ಜಯ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಅಂತೆಯೇ ಇಂದಿನ ಪಂದ್ಯದಲ್ಲಿ ಚೆನ್ನೈ ತಂಡದ ಬೌಲಿಂಗ್ ದೌರ್ಬಲ್ಯ ಮತ್ತೊಮ್ಮೆ ಬಹಿರಂಗವಾಗಿದೆ. ಲಕ್ನೋ ತಂಡಕ್ಕೆ ಇನ್ನಿಂಗ್ಸ್ ನ ಯಾವ ಹಂತದಲ್ಲಿಯೂ 188 ರನ್ ಗಳ ಸವಾಲು ಎನಿಸಲೇ ಇಲ್ಲ.
ಲಕ್ನೋ ಪರ ಮಿಚ್ ಮಾರ್ಶ್ 90 ರನ್ ಗಳಿಸಿದರೆ ಗೆಲುವಿನ ರೂವಾರಿಯಾದರೆ, ಅವರಿಗೆ ಜಾಶ್ ಇಂಗ್ಲಿಸ್ (36) ಮತ್ತು ನಿಕೋಲಸ್ ಪೂರನ್ (32) ಉತ್ತಮ ಸಾಥ್ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮಿಚೆಲ್ ಮಾರ್ಷ್ 90 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಪವರ್‌ಪ್ಲೇಯಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗೆಲುವಿನ ಭದ್ರ ಅಡಿಪಾಯ ಹಾಕಿದರು.
ಚೆನ್ನೈ ಬ್ಯಾಟಿಂಗ್
ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಕಾರ್ತಿಕ್ ಶರ್ಮಾ (71), ಡೆವಾಲ್ಡ್ ಬ್ರೆವಿಸ್ (25) ಮತ್ತು ಶಿವಂದುಬೆ (ಅಜೇಯ 32) ಉಪಯುಕ್ತ ಕೊಡುಗೆ ನೀಡಿದರು. ಆದರೆ ಈ ಮೊತ್ತ ಲಕ್ನೋ ಬ್ಯಾಟರ್‌ಗಳ ಅಬ್ಬರದ ಎದುರು ಸಾಕಾಗಲಿಲ್ಲ. 90 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ ಮಿಚೆಲ್ ಮಾರ್ಷ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಚೆನ್ನೈ ಪ್ಲೇಆಫ್ ಹಾದಿ ಕಠಿಣ
ಇನ್ನು ಇಂದಿನ ಸೋಲಿನ ಮೂಲಕ ಚೆನ್ನೈ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ. ಚೆನ್ನೈ ಈಗಾಗಲೇ 12 ಪಂದ್ಯಗಳನ್ನು ಆಡಿ 6 ಪಂದ್ಯಗಳಲ್ಲಿ ಗೆಲುವು ಮತ್ತು 6 ಪಂದ್ಯಗಳಲ್ಲಿ ಸೋಲು ಕಂಡಿದೆ. +0.027 ನೆಟ್ ರನ್ ರೇಟ್ ನೊಂದಿಗೆ 12 ಅಂಕಗಳಿಸಿದೆ.
ಚೆನ್ನೈ ಪಾಲಿಗೆ ಇನ್ನು ಕೇವಲ 2 ಲೀಗ್ ಪಂದ್ಯಗಳು ಮಾತ್ರ ಬಾಕಿ ಇದ್ದು ಎರಡೂ ಪಂದ್ಯಗಳಲ್ಲಿ ಜಯಿಸಿದರೂ ಬೇರೆ ತಂಡಗಳ ಫಲಿತಾಂಶದ ಮೇಲೆ ನಿಲ್ಲುವಂತಾಗಿದೆ. ಅಂತೆಯೇ ಬಾಕಿ ಇರುವ 2 ಪಂದ್ಯಗಳಲ್ಲಿ 1 ಪಂದ್ಯ ಸೋತರೂ ಪಂಜಾಬ್ ಅಥವಾ ರಾಜಸ್ತಾನ ತಂಡಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



