IPL 2026: ಫೈನಲ್ ಪಂದ್ಯ ಬೆಂಗಳೂರು ಬದಲು ಅಹಮದಾಬಾದ್ ಗೆ ಶಿಫ್ಟ್; ಬಿಸಿಸಿಐ ಪ್ರಕಟ
ಪ್ಲೇಆಫ್ ಹಾಗೂ ಫೈನಲ್ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಕ್ವಾಲಿಫೈಯರ್ 1 ಪಂದ್ಯ ಧರ್ಮಶಾಲಾದ ಹೆಚ್ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL final 2026) ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಇಂದು ದೃಢಪಡಿಸಿದೆ.
ಪ್ಲೇಆಫ್ ಹಾಗೂ ಫೈನಲ್ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಕ್ವಾಲಿಫೈಯರ್ 1 ಪಂದ್ಯ ಧರ್ಮಶಾಲಾದ ಹೆಚ್ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ವಾಲಿಫೈಯರ್ 2 ಹಾಗೂ ಎಲಿಮಿನೇಟರ್ ಪಂದ್ಯಗಳನ್ನು ನ್ಯೂ ಚಂಡೀಗಢದ ನ್ಯೂ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಸಲಾಗುತ್ತದೆ.
ಈ ಮೊದಲು ಫೈನಲ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆಯ್ಕೆಯಾಗಿತ್ತು. ಆದರೆ ಸ್ಥಳೀಯ ಸಂಘಟನೆ ಹಾಗೂ ಅಧಿಕಾರಿಗಳ ಕೆಲವು ಬೇಡಿಕೆಗಳು ಬಿಸಿಸಿಐ ಮಾರ್ಗಸೂಚಿಗಳಿಗೆ ಹೊರತಾಗಿದ್ದರಿಂದ ಫೈನಲ್ ಪಂದ್ಯದ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಇದು ಸತತ ಎರಡನೇ ವರ್ಷ ಹಾಗೂ ಒಟ್ಟು ನಾಲ್ಕನೇ ಬಾರಿ ಅಹಮದಾಬಾದ್ ಐಪಿಎಲ್ ಫೈನಲ್ ಆತಿಥ್ಯ ವಹಿಸುತ್ತಿರುವುದು. ಇದಕ್ಕೂ ಮೊದಲು 2022 ಮತ್ತು 2023ರಲ್ಲಿಯೂ ಇಲ್ಲಿ ಫೈನಲ್ ಪಂದ್ಯಗಳು ನಡೆದಿದ್ದವು.
ಒಟ್ಟು 70 ಲೀಗ್ ಹಂತದ ಪಂದ್ಯಗಳ ಬಳಿಕ ಈಗ ಟೂರ್ನಿ ನಿರ್ಣಾಯಕ ಹಂತಕ್ಕೆ ಪ್ರವೇಶಿಸಿದೆ. ಮೇ 26ರಂದು ನಡೆಯುವ ಕ್ವಾಲಿಫೈಯರ್ 1ರಲ್ಲಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ತಂಡಗಳು ಮುಖಾಮುಖಿಯಾಗಲಿವೆ ಮತ್ತು ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಮೇ 27ರಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಆಡಲಿದ್ದು, ಅಲ್ಲಿ ವಿಜೇತ ತಂಡ ಮೇ 29ರಂದು ನಡೆಯುವ ಕ್ವಾಲಿಫೈಯರ್ 2ರಲ್ಲಿ ಕ್ವಾಲಿಫೈಯರ್ 1 ಸೋತ ತಂಡದ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಎರಡನೇ ತಂಡವಾಗಿ ಪ್ರವೇಶಿಸಲಿದೆ.
ಮೇ 31ರಂದು ಜಗತ್ತಿನ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಸೀಸನ್ ಅಂತ್ಯಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



