IPL 2026: ನಿಯಮ ಉಲ್ಲಂಘಿಸುವ ತಂಡಗಳ ವಿರುದ್ಧ ಬಿಸಿಸಿಐ ಕ್ರಮ- ದೇವಜಿತ್ ಸೈಕಿಯಾ
ಮೊದಲನೇಯದಾಗಿ ತಂಡದ ವ್ಯವಸ್ಥಾಪಕ ರವೀಂದರ್ ಸಿಂಗ್ ಭಿಂದರ್ ಪಂದ್ಯದ ಸಮಯದಲ್ಲಿ ಡಗೌಟ್‌ನಲ್ಲಿ ತಮ್ಮ ಫೋನ್ ಬಳಸುತ್ತಿರುವುದು ಕಂಡುಬಂದಿತು.

ಮುಂಬೈ: 2026 ರ ಐಪಿಎಲ್‌ನಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ತಂಡಗಳ ವಿರುದ್ಧ" ಬಿಸಿಸಿಐ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶನಿವಾರ ತಿಳಿಸಿದ್ದಾರೆ. ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಎರಡು ಬಾರಿ, ರಾಜಸ್ಥಾನ ರಾಯಲ್ಸ್ ತಪ್ಪು ಕಾರಣಗಳಿಗಾಗಿ ಸುದ್ದಿಗೆ ಗ್ರಾಸವಾಯಿತು.
ಮೊದಲನೇಯದಾಗಿ ತಂಡದ ವ್ಯವಸ್ಥಾಪಕ ರವೀಂದರ್ ಸಿಂಗ್ ಭಿಂದರ್ ಪಂದ್ಯದ ಸಮಯದಲ್ಲಿ ಡಗೌಟ್‌ನಲ್ಲಿ ತಮ್ಮ ಫೋನ್ ಬಳಸುತ್ತಿರುವುದು ಕಂಡುಬಂದಿತು. ಮತ್ತೊಂದು ಪಂದ್ಯದ ಸಮಯದಲ್ಲಿ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ಕೊಠಡಿಯಲ್ಲಿ ವೇಪಿಂಗ್(ಇ-ಸಿಗರೇಟ್) ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭಿಂದರ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಆದರೆ ಪರಾಗ್‌ಗೆ ಅವರ ಪಂದ್ಯ ಶುಲ್ಕದ ಶೇ. 25 ರಷ್ಟು ಕಡಿತಗೊಳಿಸಲಾಗಿದೆ ಮತ್ತು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಐಪಿಎಲ್ ನಿಯಮ ಉಲ್ಲಂಘಿಸುತ್ತಿರುವ ತಂಡಗಳ ಕುರಿತು ಪ್ರತಿಕ್ರಿಯಿಸಿದ ಸೈಕಿಯಾ, ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ತಂಡಗಳು ಹೇಗೆ ವರ್ತಿಸುತ್ತವೆ ಎಂಬುದರ ಕುರಿತು ಐಪಿಎಲ್‌ನ ವಿವಿಧ ನಿಯಮಗಳು ಮತ್ತು ಷರತ್ತುಗಳು ಮತ್ತು ಪ್ರೋಟೋಕಾಲ್‌ಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದರು.
ಅಜಾಗರೂಕತೆಯಿಂದ ಉಲ್ಲಂಘನೆಯಾಗಿದೆ ಎಂದು ಭಿಂದರ್ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ತಿಳಿಸಿದ್ದರು ಮತ್ತು ದಂಡ ವಿಧಿಸುವ ಮೊದಲು ಕ್ಷಮೆಯಾಚಿಸಿದ್ದರು.
"ಇದು ಕೇವಲ ಆಟಗಾರರು ಅಥವಾ ಅಧಿಕಾರಿಗಳ ವಿಷಯವಲ್ಲ. ಒಂದು ತಂಡವಾಗಿ ಅವರು ಐಪಿಎಲ್‌ನ ಇಮೇಜ್‌ಗೆ ಎಂದಿಗೂ ಪ್ರತಿಕೂಲ ಪರಿಣಾಮ ಬೀರದಂತೆ ಕೆಲವು ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು. ನಾವು ಕೆಲವೊಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಭಾರತದಲ್ಲಿ ಇ-ಸಿಗರೇಟ್‌ಗಳ ಖರೀದಿ, ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿರುವುದರಿಂದ ಪರಾಗ್ ಘಟನೆಗೆ ಕಾನೂನು ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೈಕಿಯಾ, ನ್ಯೂ ಚಂಡೀಗಢದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪರಾಗ್ ಘಟನೆ ನಡೆದಾಗಿನಿಂದ, ಪಂಜಾಬ್ ಪೊಲೀಸರು ಬಿಸಿಸಿಐಯನ್ನು ಸಂಪರ್ಕಿಸಿಲ್ಲ ಎಂದು ಸೈಕಿಯಾ ಹೇಳಿದರು.
ಆರ್‌ಆರ್ ಮುಖ್ಯ ತರಬೇತುದಾರ ಕುಮಾರ್ ಸಂಗಕ್ಕಾರ ಇತ್ತೀಚೆಗೆ ಆ ಎರಡೂ ವಿವಾದಗಳನ್ನು ಬಿಸಿಸಿಐ ಮತ್ತು ಫ್ರಾಂಚೈಸಿ ಪರಿಹರಿಸಿದೆ. ಅವರು ತಂಡದಲ್ಲಿ "ಯಾವಾಗಲೂ ತುಂಬಾ ಸಕಾರಾತ್ಮಕ ಆರೋಗ್ಯಕರ ಸಂಸ್ಕೃತಿಯನ್ನು ಹೊಂದಲು ಪ್ರಯತ್ನಿಸುತ್ತಾರೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



