IPL 2026: RCB ಅಭ್ಯಾಸದ ವೇಳೆ ಜರ್ಸಿಯಲ್ಲಿ 11 ನಂಬರ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಸೀಟುಗಳು ಸದಾ ಖಾಲಿ!
ಮೃತಪಟ್ಟ 11 ಅಭಿಮಾನಿಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಗಣದಲ್ಲಿ 11 ಆಸನಗಳನ್ನು ರಿಸರ್ವ್ ಮಾಡಿದ್ದು, ಇವು ಸದಾ ಖಾಲಿಯಾಗಿರುತ್ತವೆ.

ಬೆಂಗಳೂರು: ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ ನಾಲ್ಕು ದಿನ ಬಾಕಿಯಿದೆ. ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಶ್ರದ್ದಾಂಜಲಿ ಸಲ್ಲಿಸಲು ಆರ್‌ಸಿಬಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.
ಇದಕ್ಕಾಗಿ ಆರ್‌ಸಿಬಿ ಆಟಗಾರರು ಅಭ್ಯಾಸದ ವೇಳೆ 11 ನಂಬರ್ ಜರ್ಸಿ ಧರಿಸಲಿದ್ದಾರೆ. ಅಲ್ಲದೇ, ಮೃತಪಟ್ಟ 11 ಅಭಿಮಾನಿಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಗಣದಲ್ಲಿ 11 ಆಸನಗಳನ್ನು ರಿಸರ್ವ್ ಮಾಡಿದ್ದು, ಇವು ಸದಾ ಖಾಲಿಯಾಗಿರುತ್ತವೆ.
ಆರ್‌ಸಿಬಿ ಆಟಗಾರರು ಅಭ್ಯಾಸದ ಸಂದರ್ಭದಲ್ಲಿ 11 ನಂಬರ್ ನ ಜರ್ಸಿ ಧರಿಸಲಿದ್ದಾರೆ. ಜೊತೆಗೆ ಎಲ್ಲಾ ಪಂದ್ಯಗಳಲ್ಲಿಯೂ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಟವಾಡಲಿದ್ದಾರೆ ಎಂದು ಆರ್‌ಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಮೆನನ್ ತಿಳಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಎಲ್ಲಾ ಪಂದ್ಯಗಳಲ್ಲಿ ಮೃತ 11 ಅಭಿಮಾನಿಗಳಿಗಾಗಿ 11 ಸೀಟುಗಳನ್ನು ರಿಸರ್ವ್ ಮಾಡಲಿದೆ. ಈ ಮೂಲಕ ಕೆಎಸ್‌ಸಿಎ ಮೃತ ಅಭಿಮಾನಿಗಳಿಗೆ ಗೌರವ ನೀಡಲು ಮುಂದಾಗಿದೆ.
ಪ್ರತಿ ಮ್ಯಾಚ್ ಗೂ ಈ 11 ಸೀಟ್‌ಗಳ ಟಿಕೆಟ್ ಮಾರಾಟ ಮಾಡುವುದಿಲ್ಲ.ಇಷ್ಟೇ ಅಲ್ಲ ಅಂತರರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಸಹ 11 ಸೀಟು ಗಳು ಮೃತರ ಹೆಸರಿನಲ್ಲಿ ಮೀಸಲಿಡುವುದಾಗಿ ಕೆಎಸ್‌ಸಿಎ ಘೋಷಣೆ ಮಾಡಿದೆ. ಬೋರ್ಡ್ ಅಳವಡಿಕೆ ಮಾಡಿ ಅದರಲ್ಲಿ ಮೃತರ ಹೆಸರನ್ನ ದಾಖಳಿಸಲಾಗುತ್ತದೆ. ಮುಖ್ಯ ದ್ವಾರದ ಭಾಗದಲ್ಲಿ ಹೆಸರಗಳನ್ನ ಕೆಎಸ್‌ಸಿಎ ಅಳವಡಿಕೆ ಮಾಡಲಿದೆ ಎಂದು ಅವರು ತಿಳಿಸಿದರು.
ಯಾವುದೇ ಅಹಿತರ ಘಟನೆ ನಡೆಯದಂತೆ ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಲ್ತುಳಿತದಿಂದ ಮೃತಪಟ್ಟ ಕುಟುಂಬಕ್ಕೆ ಮತ್ತಷ್ಟು ಸಹಕಾರ ನೀಡಲು ಚಿಂತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



