'ಈ ಐಪಿಎಲ್ ಆವೃತ್ತಿಯಲ್ಲಿ ತಂಡಕ್ಕೆ ಟ್ರೋಫಿ ಗೆಲ್ಲುವುದೇ ನನ್ನ ಗುರಿ: 14 ವರ್ಷದ ವೈಭವ್ ಸೂರ್ಯವಂಶಿ
2024ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವು ಆಗಿನ 13 ವರ್ಷದ ಬಾಲಕನನ್ನು ₹1.1 ಕೋಟಿಗೆ ಖರೀದಿಸಿದಾಗ ಸೂರ್ಯವಂಶಿ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ ಅತ್ಯಂತ ಕಿರಿಯ ಆಟಗಾರರಾದರು.

19 ವರ್ಷದೊಳಗಿನವರ ವಿಶ್ವಕಪ್ ವಿಜೇತ ವೈಭವ್ ಸೂರ್ಯವಂಶಿ ಇದೀಗ ಈಗ ಮುಂಬರುವ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಶಸ್ತಿಯನ್ನು ಗೆಲ್ಲುವತ್ತ ದೃಷ್ಟಿ ನೆಟ್ಟಿದ್ದಾರೆ. ಸೂಯವಂಶಿ ಐಪಿಎಲ್ 2025ರಲ್ಲಿ ಟೂರ್ನಿಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿ ಗಳಿಸಿದ್ದರು. ಈ ವರ್ಷದ ಆರಂಭದಲ್ಲಿ, ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ ಅವರು 80 ಎಸೆತಗಳಲ್ಲಿ 175 ರನ್ ಗಳಿಸುವ ಮೂಲಕ ಭಾರತವು ಹರಾರೆಯಲ್ಲಿ ದಾಖಲೆಯ ಆರನೇ ಅಂಡರ್-19 ವಿಶ್ವಕಪ್ ಪ್ರಶಸ್ತಿ ಗೆಲ್ಲಲು ನೆರವಾದರು. ಇದೀಗ ಅವರು ಐಪಿಎಲ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.
'ಈ ಐಪಿಎಲ್ ಆವೃತ್ತಿಯಲ್ಲಿ ತಂಡಕ್ಕೆ ಟ್ರೋಫಿ ಗೆಲ್ಲುವುದು ನನ್ನ ಗುರಿಯಾಗಿದೆ. ಏಕೆಂದರೆ, ಅದು ಬಹಳ ಮುಖ್ಯವಾದ ವಿಷಯ. ನಾನು ಉತ್ತಮವಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ ಮತ್ತು ನನ್ನ ಪ್ರದರ್ಶನವು ಇಡೀ ತಂಡಕ್ಕೆ ಸಹಾಯ ಮಾಡುತ್ತದೆ. ಆರ್‌ಆರ್ ಗೆಲುವಿಗೆ ಕೊಡುಗೆ ನೀಡುವುದು ಮತ್ತು ಫ್ರಾಂಚೈಸಿಗೆ ಟ್ರೋಫಿಯನ್ನು ಗೆಲ್ಲುವುದು ನನ್ನ ಗುರಿ' ಎಂದು ಸೂರ್ಯವಂಶಿ ಭಾನುವಾರ ಬಿಸಿಸಿಐ ನಮನ್ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಸೂರ್ಯವಂಶಿ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ವಿಶ್ವಕಪ್ ವಿಜೇತ ತಂಡದ ಆಟಗಾರರನ್ನು ಭೇಟಿಯಾದರು.
'ಇದು ನಿಜವಾಗಿಯೂ ಸಂತೋಷವಾಗಿದೆ. ವಿಶ್ವಕಪ್‌ನಲ್ಲಿ ಭಾರತಕ್ಕೂ ಟ್ರೋಫಿ ಗೆದ್ದುಕೊಟ್ಟೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಿಂದಾಗಿ, ನನ್ನ ತಂಡದ ಸದಸ್ಯರು ಮತ್ತು ತರಬೇತುದಾರರನ್ನು ಮತ್ತೆ ಇಲ್ಲಿ ಭೇಟಿಯಾಗಲು ಸಂತೋಷವಾಗುತ್ತಿದೆ' ಎಂದು ಹೇಳಿದರು.
2024ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವು ಆಗಿನ 13 ವರ್ಷದ ಬಾಲಕನನ್ನು ₹1.1 ಕೋಟಿಗೆ ಖರೀದಿಸಿದಾಗ ಸೂರ್ಯವಂಶಿ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ ಅತ್ಯಂತ ಕಿರಿಯ ಆಟಗಾರರಾದರು.
ಬಿಹಾರದ ಈ ಯುವ ಪ್ರತಿಭೆ ಆರ್‌ಆರ್ ಸ್ಕೌಟ್ಸ್‌ನೊಂದಿಗಿನ ತನ್ನ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.
'ನಾನು ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ, ದೇಶೀಯ ಮತ್ತು ಅಂಡರ್-19 ಪಂದ್ಯಗಳ ಸಮಯದಲ್ಲಿ ಆರ್‌ಆರ್ ನನ್ನ ಮೇಲೆ ಕಣ್ಣಿಟ್ಟಿತ್ತು. ಅವರ ಸ್ಕೌಟಿಂಗ್ ತಂಡವು ಬಹಳ ಸಮಯದಿಂದ ನನ್ನ ಮೇಲೆ ಕಣ್ಣಿಟ್ಟಿತ್ತು. ಅವರೊಂದಿಗೆ ನನ್ನ ಟ್ರಯಲ್ ಚೆನ್ನಾಗಿ ನಡೆದಿದ್ದರಿಂದ ನಾನು ಆರ್‌ಆರ್‌ಗೆ ಹೋಗಬಹುದೆಂದು ನನಗೆ ಅನಿಸಿತು' ಎಂದು ಅವರು ಹೇಳಿದರು.
'ನಾನು ಆರ್‌ಆರ್ ಜೊತೆಗಿರುವುದು ಸಂತೋಷ ತಂದಿದೆ. ಏಕೆಂದರೆ, ಅವರ ಪರ ಆಡುವಾಗ ನನ್ನ ಜೀವನದಲ್ಲೂ ಸಾಕಷ್ಟು ಸುಧಾರಣೆ ಕಂಡಿದ್ದೇನೆ. ದಂತಕಥೆ ರಾಹುಲ್ ದ್ರಾವಿಡ್ ಮತ್ತು ತಂಡದ ಇತರ ಹಿರಿಯ ಆಟಗಾರರಿಂದ ಬಹಳಷ್ಟು ಕಲಿತಿದ್ದೇನೆ. ಯಾವುದೇ ಯುವ ಪ್ರತಿಭೆಗೆ, ಮೊದಲ ಐಪಿಎಲ್ ಶಿಬಿರವು ಯಾವಾಗಲೂ ಆಸಕ್ತಿದಾಯಕವಾಗಿರುತ್ತದೆ ಮತ್ತು ನನಗೂ ಸಹ ಅದೇ ಆಗಿತ್ತು' ಎಂದು ಹೇಳಿದರು.
'ಆ ಸಮಯದಲ್ಲಿ ರಾಹುಲ್ ದ್ರಾವಿಡ್ ಸರ್ ಅಲ್ಲಿದ್ದರು. ಆದ್ದರಿಂದ ನಾನು ಅವರಿಂದ ಬಹಳಷ್ಟು ಕಲಿಯಲು ಸಾಧ್ಯವಾಯಿತು. ತಂಡದಲ್ಲಿ ಬಹಳಷ್ಟು ಹಿರಿಯ ಆಟಗಾರರಿದ್ದರು. ಮತ್ತು ಮೊದಲ ಶಿಬಿರ ಮತ್ತು ಮೊದಲ ಐಪಿಎಲ್‌ನಲ್ಲಿ ನನಗೆ ಉತ್ತಮ ಕಲಿಕೆಯ ಅನುಭವ ಸಿಕ್ಕಿತು' ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



