ಕ್ರಿಕೆಟ್

Cricket: ಪತ್ನಿಗೆ ವಿವಾಹ ವಾರ್ಷಿಕೋತ್ಸವ ಶುಭ ಕೋರಿದ Jasprit Bumrah; 'ಕಿಡ್ನಿಗೆ ಟಚ್ ಆಯ್ತು' ಎಂದ Sanjana Ganesan!

ಟೀಂ ಇಂಡಿಯಾ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿ ಸಂಜನಾ ಗಣೇಶನ್‌ಗೆ ಶುಭ ಕೋರಿದ್ದು, ಇದಕ್ಕೆ ಸಂಜನಾ ಗಣೇಶನ್ 'ಕಿಡ್ನಿ ಟಚ್ಚಿಂಗ್ ಕ್ಯಾಪ್ಷನ್' ಎಂದು ಪ್ರತಿಕ್ರಿಯಿಸಿದ್ದಾರೆ.

Cricket: ಪತ್ನಿಗೆ ವಿವಾಹ ವಾರ್ಷಿಕೋತ್ಸವ ಶುಭ ಕೋರಿದ Jasprit Bumrah; 'ಕಿಡ್ನಿಗೆ ಟಚ್ ಆಯ್ತು' ಎಂದ Sanjana Ganesan!
ಸಂಜನಾ ಮತ್ತು ಜಸ್ ಪ್ರೀತ್ ಬುಮ್ರಾ
Published On :

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ತಮ್ಮ ಪತ್ನಿ ಹಾಗೂ ನಿರೂಪಕಿ ಸಂಜನಾ ಗಣೇಶ್ ಅವರಿಗೆ ವಿವಾಹ ವಾರ್ಷಿಕೋತ್ಸವ ಶುಭ ಕೋರಿರುವ ಪುಟ್ಟ ಸಂದೇಶ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಅಭಿಮಾನಿಗಳ ನಗೆಗಡಲಲ್ಲಿ ತೇಲಿಸಿದೆ.

ಟೀಂ ಇಂಡಿಯಾ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿ ಸಂಜನಾ ಗಣೇಶನ್‌ಗೆ ಶುಭ ಕೋರಿದ್ದು, ಇದಕ್ಕೆ ಸಂಜನಾ ಗಣೇಶನ್ 'ಕಿಡ್ನಿ ಟಚ್ಚಿಂಗ್ ಕ್ಯಾಪ್ಷನ್' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲದೇ ಎರಡು ಪದಗಳಲ್ಲಿ ಶುಭಕೋರಿದ್ದನ್ನು ಸಂಜನಾ ಗಣೇಶನ್ ಟ್ರೋಲ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಜಸ್ಪ್ರೀತ್ ಬುಮ್ರಾ, ತಮ್ಮ ಪತ್ನಿಯ ಫೋಟೋ ಜತೆಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು (Happy anniversary) ಎಂದು ವಿಶ್ ಮಾಡಿದ್ದರು. ಬುಮ್ರಾ ಹಾರೈಕೆಗೆ ಪ್ರತಿಕ್ರಿಯಿಸಿರುವ ಸಂಜನಾ ಗಣೇಶನ್, 'ಕಿಡ್ನಿ ಟಚ್ಚಿಂಗ್ ಕ್ಯಾಪ್ಷನ್ ಯಾರ್' ಎಂದು ರಿಪ್ಲೆ ಮಾಡಿದ್ದಾರೆ.

ಅಂತೆಯೇ ಪತಿ ಬುಮ್ರಾ ಜೊತೆಗಿನ ಅಪರೂಪದ ಚಿತ್ರಗಳನ್ನು ಅಪ್ಲೋಡ್ ಮಾಡಿರುವ ಸಂಜನಾ, ಪತಿಗೆ ಭಾವನಾತ್ಮಕ ಪತ್ರ ಬರೆದು, 'ಜೀವನವು ನಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯ್ಯಲಿ, ಜಗತ್ತು ಎಷ್ಟೇ ಗದ್ದಲ ಎಬ್ಬಿಸಿದರೂ, ಯಾವಾಗಲೂ ನೀವು, ನಾನು ಮತ್ತು ಮನೆಯಂತೆ ಭಾಸವಾಗುವ ಅಪ್ಪುಗೆ ಇದು ಇರುತ್ತದೆ. ನನ್ನ ಆತ್ಮೀಯ ಸ್ನೇಹಿತನೊಂದಿಗೆ ಐದು ವರ್ಷಗಳ ಮದುವೆ. ನನ್ನ ನೆಚ್ಚಿನ ಕಥೆ, ಯಾವಾಗಲೂ ಮತ್ತು ಶಾಶ್ವತವಾಗಿಯೂ ಇರುತ್ತದೆ' ಎಂದು ಬರೆದುಕೊಂಡಿದ್ದಾರೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.