Cricket Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ Arjun Tendulkar; ಯಾರು ಸಾನಿಯಾ ಚಂದೋಕ್? Video
ಕಳೆದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ, ಮಾರ್ಚ್ 3 ರಂದು ಈ ಜೋಡಿಯ ಮೆಹಂದಿ ಸಮಾರಂಭ ನೆರವೇರಿತ್ತು. ತೀರ ಖಾಸಗಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಮುಂಬೈ: ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಸಾನಿಯಾ ಚಂದೋಕ್ ಅವರ ಕೈಹಿಡಿದಿದ್ದಾರೆ.
ಹೌದು.. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಾಂದೋಕ್ ಅವರನ್ನು ವಿವಾಹವಾಗಿದ್ದು, ಮುಂಬೈನಲ್ಲಿ ನಡೆದ ಈ ಅದ್ದೂರಿ ಸಮಾರಂಭದಲ್ಲಿ ಎಂ.ಎಸ್. ಧೋನಿ, ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು, ರಾಜಕೀಯ ಗಣ್ಯರು ಭಾಗವಹಿಸಿದ್ದರು.
ಕಳೆದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ, ಮಾರ್ಚ್ 3 ರಂದು ಈ ಜೋಡಿಯ ಮೆಹಂದಿ ಸಮಾರಂಭ ನೆರವೇರಿತ್ತು. ತೀರ ಖಾಸಗಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗೆಯೇ ಮಾರ್ಚ್ 3 ರಂದು ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ ಮೆಹಂದಿ ಸಮಾರಂಭವು ನಡೆದಿತ್ತು.
ಇಂದು ಮುಂಬೈನಲ್ಲಿ ಈ ಜೋಡಿ ಅದ್ಧೂರಿಯಾಗಿ ವಿವಾಹವಾಗಿದೆ. ಈ ವಿಶೇಷ ಮದುವೆಗೆ ಕ್ರಿಕೆಟ್ ಲೋಕದ ದಿಗ್ಗಜರು, ಬಾಲಿವುಡ್ ಗಣ್ಯಾತಿ ಗಣ್ಯ ನಟ-ನಟಿಯರು, ಮಹಾರಾಷ್ಟ್ರದ ಪ್ರಮುಖ ರಾಜಕಾರಣಿಗಳು ಹಾಜರಿದ್ದರು.
ಸಚಿನ್ ಅವರ ಆಪ್ತರಾದ ಐಸಿಸಿ ಮುಖ್ಯಸ್ಥ ಜಯ್ ಶಾ, ರವಿಶಾಸ್ತ್ರಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಅಜಿತ್ ಅಗರ್ಕರ್, ಟೀಂ ಇಂಡಿಯಾ ಹಾಲಿ ಪ್ರಧಾನ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಮದುವೆಗೆ ಅತಿಥಿಗಳ ಮಹಾಪೂರವೇ ಹರಿದುಬಂದಿತ್ತು.
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಸಾಕ್ಷಿ ಜೊತೆ ವಿವಾಹಕ್ಕೆ ಆಗಮಸಿದರೆ, ಮಾಜಿ ಕ್ರಿಕೆಟಿಗ ಮತ್ತು ಆಯ್ಕೆದಾರ ಅಜಿತ್ ಅಗರ್ಕರ್ ಕೂಡ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದರು.
ರಾಹುಲ್ ದ್ರಾವಿಡ್ ಅವರ ಪತ್ನಿ ವಿಜೇತಾ ಪೆಂಧಾರ್ಕರ್, ಕಿರಣ್ ಮೋರೆ, ಅನಿಲ್ ಕುಂಬ್ಳೆ, ಅಜಿಂಕ್ಯ ರಹಾನೆ, ಸುರೇಶ್ ರೈನಾ ಮತ್ತು ವೆಂಕಟೇಶ್ ಪ್ರಸಾದ್ (ಮಾಜಿ ಕ್ರಿಕೆಟಿಗ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ) ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಯಾರು ಈ ಸಾನಿಯಾ ಚಂದೋಕ್?
ಸಾನಿಯಾ, ಮುಂಬೈ ಮೂಲದ ಕೈಗಾರಿಕೋದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಸಾನಿಯಾ ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ ಎಲ್‌ಎಲ್‌ಪಿಯಲ್ಲಿ ನಿಯೋಜಿತ ಪಾಲುದಾರೆ ಮತ್ತು ನಿರ್ದೇಶಕಿಯೂ ಆಗಿದ್ದಾರೆ. ಹಾಗೆಯೇ ಅರ್ಜುನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳತಿಯೂ ಆಗಿರುವ ಸಾನಿಯಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



