"ನೀವು ವಾಸಿಸುವ ರಾಷ್ಟ್ರವನ್ನು ಬೆಂಬಲಿಸಿ ಅಥವಾ...": ಇರಾನ್-ಇಸ್ರೇಲ್ ಯುದ್ಧದ ಬೆನ್ನಲ್ಲೇ ಯಜುವೇಂದ್ರ ಚಹಾಲ್ ಪೋಸ್ಟ್ ವೈರಲ್
ಭಾರತದಲ್ಲಿ ಖಮೇನಿ ಹತ್ಯೆಯನ್ನು ಖಂಡಿಸಿ ನಡೆಸುವ ಪ್ರತಿಭಟನೆಗಳ ಮೇಲೆ ಕಣ್ಣಿರಿಸುವಂತೆ ಕೇಂದ್ರ ಗೃಹ ಸಚಿವಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಮಧ್ಯಪ್ರಾಚ್ಯ ಯುದ್ಧಗ್ರಸ್ತವಾಗಿದ್ದು, ಇರಾನ್ ನಲ್ಲಿ ಖಮೇನಿ ಹತ್ಯೆಗೆ ಭಾರತದಲ್ಲಿರುವ ಶಿಯಾ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸುತ್ತಿದೆ.
ಭಾರತದಲ್ಲಿ ಖಮೇನಿ ಹತ್ಯೆಯನ್ನು ಖಂಡಿಸಿ ನಡೆಸುವ ಪ್ರತಿಭಟನೆಗಳ ಮೇಲೆ ಕಣ್ಣಿರಿಸುವಂತೆ ಕೇಂದ್ರ ಗೃಹ ಸಚಿವಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ನಡುವೆ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಅವರ ಎಕ್ಸ್ ಪೋಸ್ಟ್ ಒಂದು ವ್ಯಾಪಕ ಚರ್ಚೆಯಾಗುತ್ತಿದೆ.
ವ್ಯಕ್ತಿಯೋರ್ವ "ನೀವು ವಾಸಿಸುವ ರಾಷ್ಟ್ರಕ್ಕೆ ಬೆಂಬಲ ನೀಡಿ ಅಥವಾ ನೀವು ಬೆಂಬಲಿಸುವ ರಾಷ್ಟ್ರಕ್ಕೆ ಹೋಗಿ ಬದುಕಿ" ಎಂಬ ಶಬ್ದಗಳಿರುವ ಟಿಶರ್ಟ್ ನ್ನು ಧರಿಸಿರುವ ಫೋಟೋವನ್ನು ಯಜುವೇಂದ್ರ ಚಹಾಲ್ ಹಾಕಿರುವುದು ಸಾಮಾಜಿಕ ಜಾಲತಾಣದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಇರಾನ್-ಇಸ್ರೇಲ್ ಯುದ್ಧದಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿಯನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಚಹಾಲ್ ಪೋಸ್ಟ್ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಚಹಾಲ್ ಪೋಸ್ಟ್ ಮಾಡಿರುವ ಚಿತ್ರದಲ್ಲಿರುವ ಟೀ ಶರ್ಟ್ ಮೇಲಿನ ಬರಹ ರಾಷ್ಟ್ರೀಯ ನಿಷ್ಠೆ ಹಾಗೂ ಧಾರ್ಮಿಕ, ಸೈದ್ಧಾಂತಿಕ ನಿಷ್ಠೆಯ ನಡುವೆ ಚರ್ಚೆಯನ್ನು ಹುಟ್ಟುಹಾಕುವಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


