T20 World Cup 2026: ಪಂದ್ಯಾವಳಿಯಿಂದ ಔಟ್; ಪಾಕಿಸ್ತಾನದ ಆಟಗಾರರಿಗೆ PCB ಶಾಕ್ ಟ್ರೀಟ್‌ಮೆಂಟ್!
ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತೇವೆ ಎಂದು ತಿಳಿದಿದ್ದ ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಮತ್ತಷ್ಟು ಉತ್ತಮವಾಗಿ ಆಡಬೇಕಿತ್ತು.

ಪಾಕಿಸ್ತಾನ ಟಿ20 ವಿಶ್ವಕಪ್ 2026ರಿಂದ ಹೊರಬಿದ್ದಿದ್ದು, ಆಟಗಾರರಿಗೆ ಇದೀಗ ಸಂಕಷ್ಟ ಎದುರಾಗಿದೆ. ಸೂಪರ್ 8ರ ನಿರ್ಗಮನದ ಒಂದು ದಿನದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ವಿಶ್ವಕಪ್‌ನಲ್ಲಿ ತಂಡದ ಪ್ರದರ್ಶನಕ್ಕಾಗಿ ಪ್ರತಿಯೊಬ್ಬ ಆಟಗಾರನಿಗೆ 5 ಮಿಲಿಯನ್ ಪಿಕೆಆರ್ (INR 16.2 ಲಕ್ಷ) ದಂಡ ವಿಧಿಸಲಾಗುವುದು ಎಂದು ತಂಡಕ್ಕೆ ತಿಳಿಸಿದೆ ಎಂದು ವರದಿಯಾಗಿದೆ. ಆಟಗಾರರು ಯಾವಾಗಲೂ ತಮ್ಮ ಕೈಲಾದಷ್ಟು ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಪಿಸಿಬಿ ಆಟಗಾರರ ಮೇಲೆ ನೇರ ದಂಡ ವಿಧಿಸಿದೆ. ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪ್ರಕಾರ, ಪಿಸಿಬಿ ಈ ಬಾರಿ ವಿಭಿನ್ನ ರೀತಿಯ 'ಶಸ್ತ್ರಚಿಕಿತ್ಸೆ'ಗೆ ಮುಂದಾಗಿದೆ.
ಪಾಕಿಸ್ತಾನದ ಅಭಿಯಾನ ಆರಂಭದಿಂದಲೂ ಗೊಂದಲಮಯವಾಗಿತ್ತು. ಅವರು ನೆದರ್ಲೆಂಡ್ ತಂಡವನ್ನು ಹಿಂದಿಕ್ಕಿದರು. ನಂತರ USA ತಂಡವನ್ನು ಸೋಲಿಸಿದರು. ನಂತರ ಭಾರತದ ವಿರುದ್ಧ 61 ರನ್‌ಗಳ ಹೀನಾಯ ಸೋಲು ಅನುಭವಿಸಿದರು. ಆದರೂ, ಗ್ರೂಪ್ ಎನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೂಪರ್ 8 ಹಂತಕ್ಕೆ ಪ್ರವೇಶಿಸಿದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಯಾವುದೇ ಫಲಿತಾಂಶ ಬರಲಿಲ್ಲ. ಬಳಿಕ ಇಂಗ್ಲೆಂಡ್ ವಿರುದ್ಧ ಸೋಲು ಕಂಡರು. ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದರೂ ಪಂದ್ಯಾವಳಿಯಿಂದಲೇ ಹೊರಬೀಳಬೇಕಾಯಿತು. ಈ ಮೂಲಕ ಮತ್ತೊಂದು ಐಸಿಸಿ ಈವೆಂಟ್, ಮತ್ತೊಂದು ಸೆಮಿಫೈನಲ್‌ನಿಂದ ಹೊರಬಿದ್ದಿತು. ಇದು ಸತತ ನಾಲ್ಕನೇ ಬಾರಿಯಾಗಿದೆ.
ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತೇವೆ ಎಂದು ತಿಳಿದಿದ್ದ ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಮತ್ತಷ್ಟು ಉತ್ತಮವಾಗಿ ಆಡಬೇಕಿತ್ತು.
ತಂಡದ ಪ್ರತಿ ಆಟಗಾರರಿಗೆ ದಂಡ
ಪಾಕಿಸ್ತಾನ ತಂಡದ ಪ್ರತಿ ಆಟಗಾರನಿಗೆ PKR 5 ಮಿಲಿಯನ್ ದಂಡ ವಿಧಿಸಲಾಗಿದೆ. ಇದು ತಂಡದಲ್ಲಿರುವ ಕೆಲವರಿಗೆ, ಅವರ ಸೆಂಟ್ರಲ್ ಒಪ್ಪಂದಗಳಿಂದ ಒಂದು ತಿಂಗಳಲ್ಲಿ ಗಳಿಸುವ ಮೊತ್ತಕ್ಕಿಂತ ಹೆಚ್ಚಿನದಾಗಿದೆ.
ಈ ನಿಯಮದ ಪ್ರಕಾರ, ಕಡಿಮೆ ಸಂಬಳ ಪಡೆಯುವ (ಸಿ ಅಥವಾ ಡಿ ದರ್ಜೆಯ) ಆಟಗಾರರಿಗೆ ದಂಡ ವಿಧಿಸಿರುವುದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಏಕೆಂದರೆ ಇದು ಅವರ ಗಳಿಕೆಯ ಗಮನಾರ್ಹ ಭಾಗವನ್ನು ತೆಗೆದುಕೊಳ್ಳುತ್ತದೆ.
ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಆರ್ಥಿಕ ಪ್ರತಿಫಲಗಳನ್ನು ಗಳಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಂಬುತ್ತದೆ. ವೇತನ ಮತ್ತು ಪ್ರಯೋಜನಗಳನ್ನು ನೇರವಾಗಿ ಫಲಿತಾಂಶಗಳಿಗೆ ಲಿಂಕ್ ಮಾಡುವ ಮಂಡಳಿಯ ಕಠಿಣ ನಿಲುವು ಹೊಸ ನೀತಿಯಲ್ಲ. ಈ ಹಿಂದೆಯೂ ಇದೇ ವಿಷಯವನ್ನು ಒತ್ತಿ ಹೇಳಿದೆ.
ಪಿಸಿಬಿ ವಾರ್ಷಿಕ ಒಪ್ಪಂದ
ಗ್ರೇಡ್ A- PKR 4.5 + 2.07 ಮಿ.
ಗ್ರೇಡ್ B- PKR 3 + 1.5525 ಮಿ.
ಗ್ರೇಡ್ C- PKR 1 + 1.035 ಮಿ.
ಗ್ರೇಡ್ D- PKR 0.75 + 0.517 ಮಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



