IPL 2027: Delhi Capitalsಗೆ ಮರಳಿದ ರಿಷಬ್ ಪಂತ್ಗೆ ಭಾರೀ ಪೇ-ಕಟ್; ಕುಲದೀಪ್ ಯಾದವ್ LSG ಪಾಲು
ಈ ಹಿಂದೆ ದಾಖಲೆಯ 27 ಕೋಟಿ ರೂ.ಗೆ ಖರೀದಿಸಲ್ಪಟ್ಟಿದ್ದ ರಿಷಭ್ ಪಂತ್ ಅವರು ಈಗ ತಮ್ಮ ಹಳೆಯ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಲು ಭಾರೀ ವೇತನ ಕಡಿತ ಅನುಭವಿಸಿದ್ದಾರೆ.

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಕಳೆದ ಎರಡು ಸೀಸನ್ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್(LSG) ತಂಡವನ್ನು ಮುನ್ನಡೆಸಿದ್ದ ಸ್ಟಾರ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ ಇದೀಗ ಟ್ರೇಡ್ ಡೀಲ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ.
ಈ ಹಿಂದೆ ದಾಖಲೆಯ 27 ಕೋಟಿ ರೂ.ಗೆ ಖರೀದಿಸಲ್ಪಟ್ಟಿದ್ದ ರಿಷಭ್ ಪಂತ್ ಅವರು ಈಗ ತಮ್ಮ ಹಳೆಯ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಲು ಭಾರೀ ವೇತನ ಕಡಿತ ಅನುಭವಿಸಿದ್ದಾರೆ. ಈಗ 15 ಕೋಟಿ ರೂ.ಗಳ ಮೊತ್ತಕ್ಕೆ ಪಂತ್ ಅವರನ್ನು ಡೆಲ್ಲಿ ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)2026ನ ನಿರಾಶಾದಾಯಕ ಅಭಿಯಾನದ ನಂತರ ಎಲ್ಎಸ್ಜಿ ನಾಯಕ ಸ್ಥಾನದಿಂದ ಕೆಳಗಿಳಿದ ಪಂತ್ ಮತ್ತು ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಇಬ್ಬರೂ ಡೆಲ್ಲಿ ಕ್ಯಾಪಿಟಲ್ಸ್ (DC) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳ ನಡುವೆ ಅದಲು-ಬದಲಾಗಿದ್ದಾರೆ.
2025ರ ಮೆಗಾ ಹರಾಜಿನಲ್ಲಿ ಲಕ್ನೋ ತಂಡ, 27 ಕೋಟಿ ರೂ. ನೀಡಿ ಪಂತ್ ಅವರನ್ನು ಖರೀದಿಸಿತ್ತು. ಆದರೆ ಈಗ ಪಂತ್ ತಮ್ಮ ವೇತನದಲ್ಲಿ12 ಕೋಟಿ ರೂ. ನಷ್ಟದೊಂದಿಗೆ ಡೆಲ್ಲಿ ತಂಡವನ್ನು ಸೇರುತ್ತಿರುವುದು ವಿಶೇಷ.
ಐಪಿಎಲ್ ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಪಂತ್ ಡೆಲ್ಲಿ ತಂಡದಲ್ಲಿ ಪ್ರತಿ ಸೀಸನ್ಗೆ 15 ಕೋಟಿ ರೂ. ಗಳಿಸುತ್ತಾರೆ.
ಮತ್ತೊಂದೆಡೆ ಈ ಹೈ-ಪ್ರೊಫೈಲ್ ಟ್ರೇಡಿಂಗ್ ಒಪ್ಪಂದದ ಭಾಗವಾಗಿ ಭಾರತ ತಂಡದ ಖ್ಯಾತ ಸ್ಪಿನ್ನರ್ ಕುಲದೀಪ್ ಯಾದವ್(Kuldeep Yadav) ಅವರು ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿದ್ದಾರೆ. ಹಳೆಯ ವೇತನವಾದ 13.5 ಕೋಟಿ ರೂ.ನೀಡಿ ಕುಲದೀಪ್ ಯಾದವ್ ಅವರನ್ನು ಲಕ್ನೋ ಫ್ರಾಂಚೈಸಿಯು ತನ್ನ ತಂಡಕ್ಕೆ ಬರಮಾಡಿಕೊಂಡಿದೆ. ಲಕ್ನೋ ತಂಡದ ಸ್ಪಿನ್ ವಿಭಾಗಕ್ಕೆ ಕುಲದೀಪ್ ಸೇರ್ಪಡೆಯಿಂದ ದೊಡ್ಡ ಬಲ ಬಂದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



