ಫೈನಲ್‌ಗೂ ಮುನ್ನವೇ ಎದುರಾಳಿ ತಂಡಕ್ಕೆ ಎಚ್ಚರಿಕೆ; 29 ಎಸೆತಗಳಲ್ಲಿ 96 ರನ್; ಶತಕದಿಂದ ವೈಭವ್ ಸೂರ್ಯವಂಶಿ ಜಸ್ಟ್ ಮಿಸ್!
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂಬರುವ T20I ಸರಣಿಗಾಗಿ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿರುವ 15 ವರ್ಷದ ವೈಭವ್ ಸೂರ್ಯವಂಶಿ, ಈಗಾಗಲೇ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಭಾನುವಾರ ಡಂಬುಲ್ಲಾದಲ್ಲಿ ನಡೆಯಲಿರುವ ತ್ರಿಕೋನ 'ಎ' ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ 'ಎ' ತಂಡವು ಶ್ರೀಲಂಕಾ 'ಎ' ತಂಡವನ್ನು ಎದುರಿಸುತ್ತಿದ್ದು, ವೈಭವ್ ಸೂರ್ಯವಂಶಿ ಮೇಲೆ ಬಹುತೇಕರ ಗಮನ ನೆಟ್ಟಿದೆ. ಅಪರೂಪಕ್ಕೆಂಬಂತೆ 'ಎ' ಸರಣಿ ಇಷ್ಟೊಂದು ಗಮನ ಸೆಳೆದಿದೆ. ಅದಕ್ಕೆ ತಕ್ಕಂತೆ 15 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 94 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಶತಕದಿಂದ ವಂಚಿತರಾದರೂ ವೈಭವ್ 324.14 ಸ್ಟ್ರೈಕ್‌ರೇಟ್‌ನಲ್ಲಿ ಶ್ರೀಲಂಕಾ ಎ ತಂಡದ ಬೌಲರ್‌ಗಳ ನೀರಿಳಿಸಿದ್ದಾರೆ. ಕಳೆದ ಪಂದ್ಯದ ಕೊನೆಯಲ್ಲಿ ಸೂರ್ಯವಂಶಿ ಶ್ರೀಲಂಕಾದ ವಿಶೆನ್ ಹಲಂಬಗೆ ಅವರೊಂದಿಗೆ ಮೈದಾನದಲ್ಲಿ ವಾಗ್ವಾದ ನಡೆಸಿದರು. ಈ ಕಾರಣಕ್ಕೆ ಈ ಪಂದ್ಯ ಸಾಕಷ್ಟು ಸುದ್ದಿಯಾಗಿತ್ತು.
ಸೂಪರ್ ಓವರ್‌ನಲ್ಲಿ ಸೋಲು ಕಂಡ ನಂತರ ಎರಡೂ ತಂಡಗಳು ಇದೀಗ ಮತ್ತೆ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಪಂದ್ಯಕ್ಕೆ ಕೆಲವು ಗಂಟೆಗಳ ಮೊದಲು, ವೈಭವ್ ಸೂರ್ಯವಂಶಿ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಎಚ್ಚರಿಕೆಯೊಂದನ್ನು ನೀಡಿದ್ದರು. ಅವರು 'ದಂಗಲ್' ಚಿತ್ರದ ಪ್ರಸಿದ್ಧ ಶೀರ್ಷಿಕೆ ಗೀತೆಯೊಂದಿಗೆ - 100 - ಎಂಬ ಸಂಖ್ಯೆಯನ್ನು ತಮ್ಮ ಫೋಟೊ ಮೇಲೆ ಬರೆದು ಪೋಸ್ಟ್ ಮಾಡಿದ್ದಾರೆ.
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ತಾವು ಶತಕ ಗಳಿಸಲು ಸಿದ್ಧ ಎಂಬ ಸಂದೇಶವನ್ನು ನೀಡಿದ್ದರು. ಆದರೆ, ಕೇವಲ ಆರು ರನ್‌ಗಳಿಂದ ಅವರು ಶತಕದಿಂದ ವಂಚಿತರಾಗಿದ್ದಾರೆ. ವೈಭವ್ ಸೂರ್ಯವಂಶಿ ಈ ಸರಣಿಯಲ್ಲಿ ಇದುವರೆಗೆ ಆಡಿರುವ ನಾಲ್ಕು ಇನಿಂಗ್ಸ್‌ಗಳಲ್ಲಿ 14, 44, 21 ಮತ್ತು 38 ರನ್ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ 94 ರನ್ ಗಳಿಸಿ ಮಿಂಚಿದ್ದಾರೆ.

ಶ್ರೀಲಂಕಾ ಎ ತಂಡವು ಡಂಬುಲ್ಲಾದಲ್ಲಿ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಎ ತಂಡವನ್ನು ಸೂಪರ್ ಓವರ್‌ನಲ್ಲಿ ಸೋಲಿಸಿದ ನಂತರ ಮೈದಾನದಲ್ಲಿಯೇ ಉಭಯ ತಂಡಗಳ ಆಟಗಾರರ ನಡುವೆ ಜಗಳ ನಡೆದಿತ್ತು.
50 ಓವರ್‌ಗಳ ಅಂತ್ಯದಲ್ಲಿ ಪಂದ್ಯ ಟೈ ಆದ ನಂತರ, ಶ್ರೀಲಂಕಾ ಎ ತಂಡವು ಸೂಪರ್ ಓವರ್‌ನಲ್ಲಿ 16 ರನ್ ಗಳಿಸಿತು ಮತ್ತು ನಂತರ ಭಾರತ ಎ ತಂಡವನ್ನು ಒಂಬತ್ತು ರನ್‌ಗಳಿಗೆ ಕಟ್ಟಿಹಾಕಿತು. ವೇಗಿ ಕುಗಥಾಸ್ ಮಥುಲನ್ ಅವರು ಸೂರ್ಯವಂಶಿ ಮತ್ತು ಸೂರ್ಯಾಂಶ್ ಶೆಡ್ಜ್ ಅವರನ್ನು ಕಟ್ಟಿಹಾಕಿದರು. ಈ ಮೂಲಕ ಶ್ರೀಲಂಕಾ ಎ ತಂಡವು ಗೆಲುವು ಸಾಧಿಸಿತು.
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂಬರುವ T20I ಸರಣಿಗಾಗಿ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿರುವ 15 ವರ್ಷದ ವೈಭವ್ ಸೂರ್ಯವಂಶಿ, ಈಗಾಗಲೇ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಅವರು 2026 ರ ಐಪಿಎಲ್‌ನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ 237.31ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ 72 ಸಿಕ್ಸರ್‌ಗಳು ಸೇರಿವೆ.
ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾದ ನಂತರ ಶ್ರೀಲಂಕಾಕ್ಕೆ ಬಂದಿರುವ ಸೂರ್ಯವಂಶಿ, ಡಂಬುಲ್ಲಾದಲ್ಲಿನ ನಿಧಾನಗತಿಯ ಪಿಚ್‌ಗಳು ಅವರಿಗೆ ಸಂಕಷ್ಟ ತಂದೊಡ್ಡಿವೆ. ಪರಿಸ್ಥಿತಿಗಳು ಅವರ ನೈಸರ್ಗಿಕ ಸ್ಟ್ರೋಕ್‌ಪ್ಲೇಯನ್ನು ತಡೆಯುತ್ತಿವೆ.
ತಮ್ಮ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ವಿರುದ್ಧ ಭಾರತ ಗೆಲ್ಲಲೇಬೇಕಾದ ಪಂದ್ಯದಲ್ಲಿ ಅವರು ಕೇವಲ 38 ರನ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



