Women's T20 World Cup 2026: 'ಹನುಮಾನ್ ಜಿ ಮಹಾನ್'; ಪಾಕ್ ವಿರುದ್ಧ ಗೆಲುವಿನ ಬಳಿಕ ವಾಯುಪುತ್ರನ ನೆನೆದ Deepti Sharma
ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 350 ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ದಾಖಲೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ.

ಬರ್ಮಿಂಗ್ ಹ್ಯಾಮ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದೆ.
ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 64 ರನ್ ಗಳ ಅಮೋಘ ಜಯಭೇರಿ ಬಾರಿಸಿತು.
ಭಾರತ ನೀಡಿದ್ದ 171 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಕೇವಲ 106 ರನ್ ಗಳಿಗೇ ಆಲೌಟ್ ಆಗುವ ಮೂಲಕ 64 ರನ್ ಗಳ ಹೀನಾಯ ಸೋಲು ಕಂಡಿತು. ಭಾರತದ ಪರ ದೀಪ್ತಿ ಶರ್ಮಾ 5 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ಪ್ರಮುಖ 5 ವಿಕೆಟ್ ಪಡೆದ ಭಾರತದ ದೀಪ್ತಿ ಶರ್ಮಾ ಐತಿಹಾಸಿಕ ಸಾಧನೆ ಮಾಡಿದರು. ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 350 ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ದಾಖಲೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ.
ಹನುಮಾನ್ ಜಿ ಮಹಾನ್: ಗೆಲುವಿನ ಬಳಿಕ ಆಂಜನೇಯನ ನೆನೆದ ದೀಪ್ತಿ
ಇನ್ನು ಪಂದ್ಯದ ಬಳಿಕ ಮಾತನಾಡಿದ ದೀಪ್ತಿ ಶರ್ಮಾ ತಮ್ಮ ಅದ್ಭುತ ಪ್ರದರ್ಶನಕ್ಕೆ ತಂಡ ಕಾರಣ. ಇಡೀ ತಂಡಕ್ಕೆ ಸಂಪೂರ್ಣ ಶ್ರೇಯ ಸಲ್ಲುತ್ತದೆ. ಹನುಮಾನ್ ಜಿ ಮಹಾನ್ ಎಂದು ಹೇಳಿದರು.
"ನಾನು ತುಂಬಾ ಕೃತಜ್ಞಳಾಗಿದ್ದೇನೆ. ನನಗೆ ಇಂತಹ ಪಿಚ್ ಗಳು ತುಂಬಾ ಇಷ್ಟ. ಇದರ ಸಂಪೂರ್ಣ ಶ್ರೇಯಸ್ಸು ತಂಡಕ್ಕೆ ಸಲ್ಲುತ್ತದೆ. ನಾನು ತುಂಬಾ ಕೃತಜ್ಞನಾಗಿದ್ದೇನೆ. ಹನುಮಾನ್ ಜಿ ಮಹಾನ್. ನನಗೆ ಐಸಿಸಿ ಟೂರ್ನಮೆಂಟ್‌ಗಳು ತುಂಬಾ ಇಷ್ಟ. ನನ್ನ ಪಯಣ ಅಲ್ಲಿಂದಲೇ ಆರಂಭವಾಯಿತು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನನಗೆ ಅವು ವಿಶೇಷವಾಗಿ ಇಷ್ಟ ಎಂದರು.
ಇಂದು ಈ ಪಿಚ್‌ನಲ್ಲಿ ಯಶಸ್ವಿಯಾಗಿ ಬೌಲಿಂಗ್ ಮಾಡಲು ಮುಖ್ಯ ಕಾರಣವೇನು? (ನಿರೂಪಕ-ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಪ್ರಶ್ನೆ)
ಈ ಪಿಚ್ ತಿರುಗುತ್ತಿತ್ತು (ಸ್ಪಿನ್‌ಗೆ ನೆರವಾಗುತ್ತಿತ್ತು), ಆದ್ದರಿಂದ ನಾನು ಪ್ರತಿ ಚೆಂಡು ಹಾಗೂ ಪ್ರತಿ ಓವರ್‌ನಲ್ಲಿ ನನ್ನ ವೇಗವನ್ನು ಬದಲಾಯಿಸುತ್ತಿದ್ದೆ. ಅದು ನನಗೆ ತುಂಬಾ ಸಹಾಯ ಮಾಡಿತು. ಹೌದು, ಪಿಚ್ ಸ್ಪಿನ್‌ಗೆ ನೆರವಾಗುತ್ತಿದ್ದ ಕಾರಣ, ಚೆಂಡನ್ನು ಸ್ವಲ್ಪ ನಿಧಾನವಾಗಿ ಗಾಳಿಯಲ್ಲಿ ಹಾಕಬೇಕು ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದೆ. ನನ್ನ ಮೇಲೆ ನಂಬಿಕೆ ಇಟ್ಟು ಸರಿಯಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡುತ್ತಿದ್ದೆ. ನಾನು ಅದನ್ನೇ ಮಾಡಿದೆ ಎಂದರು.
ಇಂಗ್ಲೆಂಡ್‌ನಲ್ಲಿ ಆಡಿರುವ ನಿಮ್ಮ ಅನುಭವ ಎಷ್ಟು ಮಹತ್ವದ್ದಾಗಿದೆ?
ಇಲ್ಲಿನ ಪ್ರೇಕ್ಷಕರ ಬೆಂಬಲ ಅದ್ಭುತವಾಗಿದೆ. ಇಂದು ಬಹಳಷ್ಟು ಜನರು ಬಂದು ಭಾರತೀಯ ತಂಡವನ್ನು ಬೆಂಬಲಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ನಮಗೆ ಇದೇ ರೀತಿಯ ಬೆಂಬಲ ಬೇಕು. ಎಲ್ಲರೂ ಹೀಗೆ ಬರುತ್ತಾ, ನಮ್ಮನ್ನು ಬೆಂಬಲಿಸುತ್ತಾ ಇರಬೇಕು. ವಿಶೇಷವಾಗಿ ಸ್ಮೃತಿ ಮತ್ತು ಹ್ಯಾರಿ ದಿ (ಹರ್ಮನ್‌ಪ್ರೀತ್) ಅವರ ಜೊತೆಯಾಟವನ್ನು ಉಲ್ಲೇಖಿಸಲು ಬಯಸುತ್ತೇನೆ. ಅಲ್ಲಿಂದಲೇ ನಾವು ಪಂದ್ಯದ ಗತಿಯನ್ನು ನಮ್ಮ ಕಡೆಗೆ ತಿರುಗಿಸಿಕೊಂಡೆವು ಎಂದು ದೀಪ್ತಿ ಹೇಳಿದರು.
ಕೆಲವು ಪಂದ್ಯಗಳಲ್ಲಿ ನಿಮಗೆ ವಿಕೆಟ್ ಸಿಕ್ಕಿರಲಿಲ್ಲ
ವಾಸ್ತವವಾಗಿ, ನನಗೆ ವಿಕೆಟ್ ಸಿಗದಿದ್ದಾಗ ನಾನು ಚಿಂತಿಸಲಿಲ್ಲ. ಆದರೆ ಯಾವಾಗಲೂ ನನ್ನ ಮೇಲೆ ನನಗೆ ನಂಬಿಕೆ ಇತ್ತು. ಸರಿಯಾದ ಸಮಯ ಬಂದಾಗ ನಾನು ತಂಡಕ್ಕಾಗಿ ಮುಂದೆ ಬಂದು ಉತ್ತಮ ಪ್ರದರ್ಶನ ನೀಡುತ್ತೇನೆ ಎಂಬ ವಿಶ್ವಾಸ ಇತ್ತು. ನಾನು ಆಟವಾಡುವ ಹಾಗೂ ಬೌಲಿಂಗ್ ಮಾಡುವ ವಿಧಾನವೇ ಅದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



