ಮುಂಬೈ ಇಂಡಿಯನ್ಸ್ ನಿಂದಲೂ ಸೂರ್ಯ ಕುಮಾರ್ ಔಟ್? ಇನ್‌ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಸುಳಿವು!
ಭಾರತೀಯ ತಂಡಕ್ಕೆ ಮರಳುವುದು ಒಂದು ಮಹತ್ವದ ಕೆಲಸವಾಗುತ್ತಿರುವಂತೆಯೇ, ಮುಂಬೈ ಇಂಡಿಯನ್ಸ್ ನಿಂದಲೂ ಅವರು ಹೊರಬಹುದು ಅನಿಸುತ್ತಿದೆ.

ಮುಂಬೈ: ಸೂರ್ಯಕುಮಾರ್ ಯಾದವ್ ಸದ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಭಾರತದ T20I ನಾಯಕ ಸ್ಥಾನದಿಂದ ವಜಾಗೊಳಿಸಲ್ಪಟ್ಟ ಮತ್ತು ತಂಡದಿಂದ ಕೈಬಿಡಲ್ಪಟ್ಟ ಬ್ಯಾಟ್ಸ್‌ಮನ್ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಾದ ಸವಾಲನ್ನು ಎದುರಿಸುತ್ತಿದ್ದಾರೆ.
ಭಾರತೀಯ ತಂಡಕ್ಕೆ ಮರಳುವುದು ಒಂದು ಮಹತ್ವದ ಕೆಲಸವಾಗುತ್ತಿರುವಂತೆಯೇ, ಮುಂಬೈ ಇಂಡಿಯನ್ಸ್ ನಿಂದಲೂ ಅವರು ಹೊರಬಹುದು ಅನಿಸುತ್ತಿದೆ. ಇದಕ್ಕೆ ಅವರ ಇನ್ಸಾಟಾಗ್ರಾಮ್ ಪ್ರೊಫೈಲ್ ಸಾಕ್ಷಿ ಎಂಬಂತಿದೆ. ಅದರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸಂಬಂಧಿಸಿದ ಒಂದೇ ಒಂದು ಫೋಟೋ ಕೂಡಾ ಇಲ್ಲ. ಎಲ್ಲಿಯೂ ತಂಡದ ಬಗ್ಗೆ ಉಲ್ಲೇಖಿಸಿಲ್ಲ.
ಇದು ಫ್ರಾಂಚೈಸಿಯಿಂದ ಸಂಭಾವ್ಯ ನಿರ್ಗಮನದ ಬಗ್ಗೆಗಿನ ಊಹಾಪೋಹಗಳಿಗೆ ಕಾರಣವಾಗಿದೆ.
ಸೂರ್ಯಕುಮಾರ್ 2018 ರಿಂದಲೂ ಮುಂಬೈ ಇಂಡಿಯನ್ಸ್‌ನಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ತಂಡದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, 2026ರಲ್ಲಿ ಅವರು ಬ್ಯಾಟಿಂಗ್ ನಲ್ಲಿ ವೈಫಲ್ಯ ಎದುರಿಸಿದರು.
ಐಪಿಎಲ್ 2026 ಆವೃತ್ತಿಯಲ್ಲಿ ಸೂರ್ಯಕುಮಾರ್ 20.77 ರ ಸರಾಸರಿಯಲ್ಲಿ ಮುಂಬೈ ಪರ ಕೇವಲ 270 ರನ್ ಗಳಿಸಿದರು. ಮುಂಬೈ ಹತ್ತು ತಂಡಗಳ ಪಾಯಿಂಟ್‌ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಾಗ ಅವರು ಕೇವಲ ಎರಡು ಅರ್ಧಶತಕ ಗಳಿಸಿದ್ದರು.
ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಟ್ಟು ಭಾರತದ ಟಿ20ಐ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಮಾಡಿದ ನಂತರ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



