ಕ್ರಿಕೆಟ್

ರಿಷಬ್ ಪಂತ್ ಹೊಡೆದ ಚೆಂಡು Drone ಗೆ ಬಡಿದಿದೆ ಎನ್ನಲಾದ Video Fake!

ಭಾರತ ಮೊದಲ ಇನ್ನಿಂಗ್ಸ್ ವೇಳೆ ಈ ಘಟನೆ ನಡೆದಿದ್ದು, ಇನ್ನಿಂಗ್ಸ್ ನ 74 ಓವರ್ ನಲ್ಲಿ ಪಂತ್ ಬಾರಿಸಿದ ಶಾಟ್ ಡ್ರೋನ್ ಗೆ ತಗುಲಿ ಅದು ನೆಲಕ್ಕುರುಳಿದೆ.

ರಿಷಬ್ ಪಂತ್ ಹೊಡೆದ ಚೆಂಡು Drone ಗೆ ಬಡಿದಿದೆ ಎನ್ನಲಾದ Video Fake!
ಡ್ರೋನ್ ಹೊಡೆದುರುಳಿಸಿದ ರಿಷಬ್ ಪಂತ್
Published On :

ಮುಲ್ಲಾನ್‌ಪುರ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತ ತಂಡದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅಪರೂಪದ ಘಟನೆಯೊಂದಕ್ಕೆ ಕಾರಣರಾದರು.

ನ್ಯೂ ಚಂಡಿಗಢದ ಮುಲ್ಲನ್ ಪುರ್ ನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಈ ಘಟನ ನಡೆದಿದ್ದು, ಒಂದೆಡೆ ಆಫ್ಘನ್ ಬೌಲರ್ ಗಳನ್ನು ಕಾಡುತ್ತಿದ್ದ ಭಾರತದ ರಿಷಬ್ ಪಂತ್ ಅದನ್ನು ಸೆರೆ ಹಿಡಿಯಲು ಬಂದ ಡ್ರೋನ್ ಗೂ ಆಘಾತ ನೀಡಿದ್ದಾರೆ ಎನ್ನಲಾಗಿತ್ತು.

ಹೌದು.. ಭಾರತ ಮೊದಲ ಇನ್ನಿಂಗ್ಸ್ ವೇಳೆ ಈ ಘಟನೆ ನಡೆದಿದ್ದು, ಇನ್ನಿಂಗ್ಸ್ ನ 74 ಓವರ್ ನಲ್ಲಿ ಪಂತ್ ಬಾರಿಸಿದ ಶಾಟ್ ಡ್ರೋನ್ ಗೆ ತಗುಲಿ ಅದು ನೆಲಕ್ಕುರುಳಿದೆ.

ಪಂತ್ ಬಾರಿಸಿದ ಭರ್ಜರಿ ಲಾಫ್ಟೆಡ್ ಶಾಟ್ ಮೈದಾನದ ಮೇಲ್ಭಾಗದಲ್ಲಿ ಹಾರಾಡುತ್ತಿದ್ದ ಡ್ರೋನ್‌ಗೆ ತಾಗಿ ಅದನ್ನು ನೆಲಕ್ಕುರುಳಿಸಿದೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಇದು AI ನಿಂದ ಮಾಡಿದ ವಿಡಿಯೋ ಎಂದು ಸಾಬೀತಾಗಿದೆ.

ಭಾರತ 564 ರನ್ ಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್

ಆ ಇನ್ನಿಂಗ್ಸ್ ನಲ್ಲಿ 81 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದ ಪಂತ್, ಭಾರತದ ಮೊದಲ ಇನ್ನಿಂಗ್ಸ್‌ ಅನ್ನು 564 ರನ್‌ಗಳ ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮೊದಲು ಶುಭ್‌ಮನ್ ಗಿಲ್ ಹಾಗೂ ಕೆಎಲ್ ರಾಹುಲ್ ಅವರ ಶತಕಗಳ ನೆರವಿನಿಂದ ಆತಿಥೇಯ ಭಾರತ ಅಫ್ಘಾನಿಸ್ತಾನ ವಿರುದ್ಧ ಬೃಹತ್ ಮೊತ್ತ ದಾಖಲಿಸಿತು. ಭಾರತ 8 ವಿಕೆಟ್ ನಷ್ಟಕ್ಕೆ 564 ರನ್ ಗೆ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಭಾರತದ ಪರ ಕೆಎಲ್ ರಾಹುಲ್ (100), ನಾಯಕ ಶುಭ್ ಮನ್ ಗಿಲ್ (126) ಶತಕ ಸಿಡಿಸಿದರೆ, ರಿಷಬ್ ಪಂತ್ (81), ವಾಷಿಂಗ್ಟನ್ ಸುಂದರ್ (ಅಜೇಯ 52) ಅರ್ಧಶತಕ ಸಿಡಿಸಿದರು.

ಸಂಕಷ್ಟದಲ್ಲಿ ಆಫ್ಘಾನಿಸ್ತಾನ

ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಲೇ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಫ್ಘಾನಿಸ್ತಾನ ಭಾರತದ ಉದಯೋನ್ಮುಖ ಬೌಲರ್ ಮಾನವ್ ಸುತರ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿತು. ಕೇವಲ 62 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆರಂಭಿಕರಾದ ಅಬ್ದುಲ್ ಮಲಿಕ್ (16), ಸೆದಿಕುಲ್ಲಾ ಅಟಲ್ (17) ಬೇಗನೆ ವಿಕೆಟ್ ಒಪ್ಪಿಸಿದರು. ಅನುಭವಿ ರೆಹಮನುಲ್ಲಾ ಗುರ್ಬಾಜ್ ಕೂಡ ಕೇವಲ 12 ರನ್ ಗಳಿಸಿ ಔಟಾದರೆ, ನಾಯಕ ಹಷ್ಮತುಲ್ಲಾ ಶಾಹಿದಿ 20 ರನ್ ಗಳಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಅಫ್ಸರ್ ಝಝಾಯ್ 3 ರನ್ ಗಳಿಸಿ ಮಾನವ ಸುತರ್ ಗೆ ವಿಕೆಟ್ ಒಪ್ಪಿಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೆ, ಮತ್ತೊಂದೆಡೆ ಮಧ್ಯಮ ಕ್ರಮಾಂಕದಲ್ಲಿ ರೆಹಮತ್ ಶಾ ಅಜೇಯ 43 ರನ್ ಗಳಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.