5 ವಿಕೆಟ್, 0 ರನ್: ಜಸ್ಟಿನ್ ಗ್ರೀವ್ಸ್ ಮಾರಕ ದಾಳಿಗೆ ಪಾಕಿಸ್ತಾನ ತತ್ತರ; ಹೊಸ ವಿಶ್ವದಾಖಲೆ ಬರೆದ ವಿಂಡೀಸ್ ವೇಗಿ! Video
ಜಸ್ಟಿನ್ ಗ್ರೀವ್ಸ್ ಅವರು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದೂ ರನ್ ನೀಡದೆ ಸತತ 5 ವಿಕೆಟ್ ಕಬಳಿಸುವ ಮೂಲಕ ಯಾವುದೇ ಕ್ರಿಕೆಟಿಗ ಇದುವರೆಗೆ ಮಾಡದ ಸಾಧನೆ ಮಾಡಿದರು.

ಟ್ರಿನಿಡಾಡ್: ಟ್ರಿನಿಡಾಡ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗಿ ಜಸ್ಟಿನ್ ಗ್ರೀವ್ಸ್ ಅವರು ಇತಿಹಾಸದಲ್ಲೇ ಯಾರೂ ಮಾಡಿರದ ಅಸಾಧಾರಣ ಹಾಗೂ ಐತಿಹಾಸಿಕ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
ಜಸ್ಟಿನ್ ಗ್ರೀವ್ಸ್ ಅವರು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದೂ ರನ್ ನೀಡದೆ ಸತತ 5 ವಿಕೆಟ್ ಕಬಳಿಸುವ ಮೂಲಕ ಯಾವುದೇ ಕ್ರಿಕೆಟಿಗ ಇದುವರೆಗೆ ಮಾಡದ ಸಾಧನೆ ಮಾಡಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಐದು ವಿಕೆಟ್ ಮೇಡನ್ ಸಾಧಿಸಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಗ್ರೀವ್ಸ್ ಪಾತ್ರರಾಗಿದ್ದಾರೆ.
ಜಸ್ಟಿನ್ ಗ್ರೀವ್ಸ್ ಅವರ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ, ಮೊದಲ ಇನ್ನಿಂಗ್ಸ್ ನಲ್ಲಿ 282 ರನ್ ಗಳಿಗೆ ಆಲೌಟ್ ಆಯಿತು.
32 ವರ್ಷದ ಜಸ್ಟಿನ್ ಗ್ರೀವ್ಸ್ ಮಧ್ಯಾಹ್ನದ ಭೋಜನದ ವಿರಾಮಕ್ಕೂ ಮುನ್ನ ಹಾಗೂ ನಂತರ ನಡೆದ ಮೊನೆಚಾದ ಬೌಲಿಂಗ್ ದಾಳಿಯಿಂದ ಈ ವಿಶ್ವ ದಾಖಲೆ ನಿರ್ಮಾಣವಾಯಿತು. ಈ ಸ್ಮರಣೀಯ ಬೌಲಿಂಗ್ ಮೂಲಕ ಗ್ರೀವ್ಸ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ಚೊಚ್ಚಲ 5 ವಿಕೆಟ್‌ಗಳ ಗೊಂಚಲನ್ನು ಸಹ ಪಡೆದುಕೊಂಡರು. ಈ ಮುಂಚೆ ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ 2016 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ 4 ವಿಕೆಟ್ ಪಡೆದು ನಿರ್ಮಿಸಿದ್ದ ದಾಖಲೆಯನ್ನು ಗ್ರೀವ್ಸ್ ಇದೀಗ ಮುರಿದಿದ್ದಾರೆ.
ತಮ್ಮ ಮೊದಲ 6 ಓವರ್‌ಗಳಲ್ಲಿ 27 ರನ್ ನೀಡಿದ್ದ ಗ್ರೀವ್ಸ್, 64ನೇ ಓವರ್‌ನಲ್ಲಿ ಶತಕವೀರ ಶಾನ್ ಮಸೂದ್(109 ರನ್) ಅವರನ್ನು ಔಟ್ ಮಾಡುವ ಮೂಲಕ ವಿಕೆಟ್ ಬೇಟೆ ಆರಂಭಿಸಿದರು. ನಂತರದ ಓವರ್‌ಗಳಲ್ಲಿ ಅಮೀರ್ ಜಮಾಲ್, ಅಲಿ ಉಸ್ಮಾನ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಅಬ್ಬಾಸ್ ಅವರನ್ನು ಸತತವಾಗಿ ಪೆವಿಲಿಯನ್‌ಗೆ ಅಟ್ಟಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



