'ಬ್ಯಾಟ್‌ನಿಂದ ಹೊಡೆದ ಕಪಾಳಮೋಕ್ಷದಂತಿತ್ತು': ರೋಹಿತ್ ಶರ್ಮಾ ಬ್ಯಾಟಿಂಗ್ ಮೋಡಿಗೆ ರವಿ ಶಾಸ್ತ್ರಿ!
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಕುರಿತು ಹಲವು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಏಕದಿನ ಪಂದ್ಯವು ರೋಹಿತ್ ಶರ್ಮಾ ಅವರ ಭಾರತೀಯ ತಂಡದ ಪರವಾದ ಅಂತಿಮ ಪಂದ್ಯವಾಗಬಹುದು ಎಂದು ಹೇಳಲಾಗಿತ್ತು, ಆದರೆ ಆ ಪಂದ್ಯದಲ್ಲಿ ಈ ಅನುಭವಿ ಆರಂಭಿಕ ಆಟಗಾರ ಗಳಿಸಿದ ಅದ್ಭುತ ಶತಕವು ಅವರ ನಿವೃತ್ತಿಯ ಕುರಿತಾದ ಚರ್ಚೆಗಳಿಗೆ ತೆರೆ ಎಳೆದಿದೆ.
ಮಂಗಳವಾರ, 'ಕಿಯಾ ಓವಲ್'ನಲ್ಲಿ 'ದಿ ಹಂಡ್ರೆಡ್ 2026' ಅಭಿಯಾನವು ಎಂಐ ಲಂಡನ್ ಮತ್ತು ಸನ್‌ರೈಸರ್ಸ್ ಲೀಡ್ಸ್ ನಡುವಿನ ಮೊದಲ ಪಂದ್ಯದೊಂದಿಗೆ ಆರಂಭವಾದಾಗ ರೋಹಿತ್ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರು. ಕಿಯಾ ಓವಲ್‌ನಲ್ಲಿ ರೋಹಿತ್ ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ಕಂಡ ಭಾರತದ ಮಾಜಿ ಕೋಚ್ ಹಾಗೂ ಪಂದ್ಯದ ಕಾಮೆಂಟೇಟರ್ ರವಿ ಶಾಸ್ತ್ರಿ, ಅವರ ಭವಿಷ್ಯದ ಕುರಿತಾದ ಚರ್ಚೆಯ ಬಗ್ಗೆ ಮಾತನಾಡದೆ ಇರಲು ಸಾಧ್ಯವಾಗಲಿಲ್ಲ.
ರೋಹಿತ್ ಅವರ ಭವಿಷ್ಯದ ಕುರಿತಾದ ಚರ್ಚೆಗಳ ಬಗ್ಗೆ ಶಾಸ್ತ್ರಿ ನೇರ ಹಾಗೂ ಖಾರವಾದ ಮಾತುಗಳನ್ನಾಡಿದ್ದು, ಲಾರ್ಡ್ಸ್‌ನಲ್ಲಿ ಅವರು ಗಳಿಸಿದ ಶತಕವು 'ಬ್ಯಾಟ್‌ನಿಂದ ನೀಡಿದ ಬಲವಾದ ಕಪಾಳಮೋಕ್ಷ'ದಂತಿತ್ತು ಎಂದು ಹೇಳಿದ್ದಾರೆ.
'ನೋಡಿ, ಆ 'ಹಿಟ್‌ಮ್ಯಾನ್' (ರೋಹಿತ್ ಶರ್ಮಾ) ಈಗ ಲಯದಲ್ಲಿದ್ದಾರೆ. ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ ನಂತರ ಅವರು ಈಗ ಸಾಕಷ್ಟು ನಿರಾಳವಾಗಿದ್ದಾರೆ. ಕಳೆದ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ಸಾಕಷ್ಟು ಸದ್ದು-ಗದ್ದಲವಿತ್ತು. ಆದರೆ, ಅದಕ್ಕೆ ಬ್ಯಾಟ್‌ನಿಂದಲೇ ಸೂಕ್ತ ಹಾಗೂ ಕಠಿಣವಾದ ಉತ್ತರ ಸಿಕ್ಕಿತು. 138 ರನ್ ಬಾರಿಸಿದರು. ಲಾರ್ಡ್ಸ್ ಅಂಗಳದಲ್ಲಿ ಅವರ ಮೊದಲ ಶತಕವದು. ಹೌದು, ಅವರು ಎಲ್ಲವನ್ನೂ ಕಂಡಿದ್ದಾರೆ; ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ' ಎಂದು ಪಂದ್ಯದ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿ ಶಾಸ್ತ್ರಿ ಹೇಳಿದರು.
'ರೋಹಿತ್ ಶರ್ಮಾ-ವಿರಾಟ್ ಕೊಹ್ಲಿಯನ್ನು ಮುಟ್ಟಲು ಯಾರಿಗೂ ಸಾಧ್ಯವಿಲ್ಲ': ಎರಡು ಕಾರಣ ತಿಳಿಸಿದ ಆರ್ ಅಶ್ವಿನ್!
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಕುರಿತು ಹಲವು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ವಿಷಯದಲ್ಲಿ ರವಿಚಂದ್ರನ್ ಅಶ್ವಿನ್ ಅವರು ದಿಟ್ಟ ನಿಲುವನ್ನು ವ್ಯಕ್ತಪಡಿಸಿದ್ದು, ಆಯ್ಕೆಗಾರರು ಅಥವಾ ತಂಡದ ಆಡಳಿತ ಮಂಡಳಿಯು ಈ ಜೋಡಿಯ ವಿಷಯದಲ್ಲಿ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
'ಅವರು ಆಡಲು ಬಯಸಿದರೆ, ವಿರಾಟ್ ಮತ್ತು ರೋಹಿತ್ ಅವರನ್ನು ಯಾರೂ ಮುಟ್ಟಲು ಆಗುವುದಿಲ್ಲ. ಅವರ ಸಾಧನೆಗಳೇ ಅದಕ್ಕೆ ಕಾರಣ. ರೋಹಿತ್ ಸುಮಾರು 12,000 ರನ್ ಗಳಿಸಿದ್ದಾರೆ; ಅವರನ್ನು ಯಾರೂ ಮುಟ್ಟಲಾಗುವುದಿಲ್ಲ. ಇನ್ನೊಂದು ವಿಷಯವೆಂದರೆ ಅವರು ಬ್ಯಾಟರ್‌ಗಳು; ಅವರನ್ನು ಮುಟ್ಟಿದರೆ, ಅವರ ಬೆಂಬಲಕ್ಕೆ ದೊಡ್ಡ ಪಡೆಯೇ ಇದೆ. ಜನರು ಅವರನ್ನು ನೋಡಲೆಂದೇ ಬರುತ್ತಾರೆ. ಅವರನ್ನು ತಂಡದಿಂದ ಕೈಬಿಟ್ಟರೆ, ಅದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸುತ್ತದೆ' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


