ಮಾರಣಾಂತಿಕ ಕಾಯಿಲೆ: 38ನೇ ವಯಸ್ಸಿಗೆ ಖ್ಯಾತ ಕ್ರಿಕೆಟಿಗ ಸಾವು!
ಕೆಲವು ಸ್ಮರಣೀಯ ಗೆಲುವುಗಳಲ್ಲಿ ಭಾಗವಾಗಿದ್ದ ಬೌಲರ್ ಜದ್ರಾನ್ "ಅಫ್ಘಾನಿಸ್ತಾನ ಕ್ರಿಕೆಟ್‌ನ ಅಡಿಪಾಯ ಹಾಕಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ನವದೆಹಲಿ: ಅಪರೂಪದ ಮತ್ತು ಮಾರಣಾಂತಿಕ ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್ (HLH) ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಅಫ್ಘಾನಿಸ್ತಾನದ ವೇಗಿ ಶಪೂರ್ ಜದ್ರಾನ್ ನಿಧನರಾಗಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು.
HLH ಒಂದು ಹೈಪರ್‌ಇನ್‌ಫ್ಲಮೇಟರಿ ಸಿಂಡ್ರೋಮ್ ಆಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಎಡಗೈ ವೇಗಿ ಜದ್ರಾನ್ 2009 ಮತ್ತು 2020 ರ ನಡುವೆ ಅಫ್ಘಾನಿಸ್ತಾನ ಪರ 44 ಏಕದಿನ ಮತ್ತು 36 ಟಿ20ಐಗಳನ್ನು ಆಡಿದ್ದಾರೆ. ಅವರ ಸಾವಿನ ಸುದ್ದಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟಿಸಿದೆ.
ಅಫ್ಘಾನಿಸ್ತಾನದ ಮಾಜಿ ವೇಗಿ ಶಪೂರ್ ಜದ್ರಾನ್ ಅವರ ನಿಧನಕ್ಕೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸಂತಾಪ ವ್ಯಕ್ತಪಡಿಸುತ್ತದೆ ಎಂದು ACB ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದೆ. ಕೆಲವು ಸ್ಮರಣೀಯ ಗೆಲುವುಗಳಲ್ಲಿ ಭಾಗವಾಗಿದ್ದ ಬೌಲರ್ ಜದ್ರಾನ್ "ಅಫ್ಘಾನಿಸ್ತಾನ ಕ್ರಿಕೆಟ್‌ನ ಅಡಿಪಾಯ ಹಾಕಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಸಮರ್ಪಣೆ, ಉತ್ಸಾಹ ಮತ್ತು ಅಚಲ ಬದ್ಧತೆಯು ದೇಶದ ಕ್ರಿಕೆಟ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅದು ಹೇಳಿದೆ.
ತಮ್ಮ ವೃತ್ತಿಜೀವನದುದ್ದಕ್ಕೂ ಶಪೂರ್ ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಗೌರವ, ಧೈರ್ಯ ಮತ್ತು ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಗಳು ಮತ್ತು ಸಾಧನೆಗಳು ಯಾವಾಗಲೂ ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದ ಪ್ರಮುಖ ಭಾಗವಾಗಿ ಉಳಿಯುತ್ತವೆ ಮತ್ತು ರಾಷ್ಟ್ರೀಯ ತಂಡದ ಸೇವೆಯಲ್ಲಿ ಅವರ ಪ್ರಯತ್ನಗಳನ್ನು ಎಂದಿಗೂ ಮರೆಯಲಾಗದು ಎಂದು ACB ಬರೆದುಕೊಂಡಿದೆ.
ಕಳೆದ ದಶಕದಲ್ಲಿ ಅಫ್ಘಾನಿಸ್ತಾನ ಬೌಲಿಂಗ್‌ನ ಆಧಾರ ಸ್ತಂಭಗಳಲ್ಲಿ ಜದ್ರಾನ್ ಒಬ್ಬರಾಗಿದ್ದರು. 2015 ರ ODI ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಫ್ಘಾನಿಸ್ತಾನದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಆಗಸ್ಟ್ 2009 ರಲ್ಲಿ ತಮ್ಮ ODI ಚೊಚ್ಚಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 4/24 ರನ್ ಗಳಿಸುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಫ್ಘಾನಿಸ್ತಾನ ಪರ 44 ಪಂದ್ಯಗಳಲ್ಲಿ ಒಟ್ಟಾರೆ 43 ವಿಕೆಟ್‌ಗಳನ್ನು ಕಬಳಿಸಿದರು.

ಟೀಂ ಇಂಡಿಯಾಗೆ ಸಾಲು ಸಾಲು ಸೋಲು: ಜಿಂಬಾಬ್ವೆ ಸರಣಿಯಿಂದ ಮುಖ್ಯ ಕೋಚ್ ಗೌತಮ್ ಗಂಭೀರ್ರನ್ನೇ ಹೊರಗಿಟ್ಟ BCCI
2018 ರ ಜೂನ್‌ನಲ್ಲಿ ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 40 ರನ್ ಗಳಿಗೆ ಮೂರು ವಿಕೆಟ್ ಸೇರಿದಂತೆ 36 ಪಂದ್ಯಗಳಲ್ಲಿ 37 ವಿಕೆಟ್ ಪಡೆದುಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಜದ್ರಾನ್ ಅವರನ್ನು ಚಿಕಿತ್ಸೆಗಾಗಿ ದೆಹಲಿಗೆ ಸ್ಥಳಾಂತರಿಸಲಾಗಿತ್ತು. ನಾಯಕ ಹಶ್ಮತುಲ್ಲಾ ಶಾಹಿದಿ, ರಶೀದ್ ಸೇರಿದಂತೆ ಅಫ್ಘಾನಿಸ್ತಾನ ತಂಡದ ಹಲವು ಆಟಗಾರರು ಖಾನ್ ಮತ್ತು ಮೊಹಮ್ಮದ್ ನಬಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


