ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭವಿಷ್ಯ ಕೋಚ್ ಗೌತಮ್ ಗಂಭೀರ್ ಕೈಯಲ್ಲಿಲ್ಲ; ಮಾಜಿ ಆಟಗಾರ ಕಪಿಲ್ ದೇವ್
ಸದ್ಯಕ್ಕೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತದ ಏಕದಿನ ತಂಡದ ಭಾಗವಾಗಿದ್ದು, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮುಂಬರುವ ಮೂರು ಪಂದ್ಯಗಳ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.

2027ರ ಏಕದಿನ ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಸೇರಿಸಿಕೊಳ್ಳುವಲ್ಲಿ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೆಚ್ಚಿನ ಪಾತ್ರ ವಹಿಸಬೇಕಾಗಿಲ್ಲ ಎಂದು 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತದ ನಾಯಕ ಕಪಿಲ್ ದೇವ್ ಹೇಳಿದ್ದಾರೆ. ವಿಶ್ವಕಪ್‌ಗೆ ಕೇವಲ ಒಂದು ವರ್ಷ ಬಾಕಿ ಇರುವಾಗ, ಪಂದ್ಯಾವಳಿಗಾಗಿ ಭಾರತದ ತಂಡದಲ್ಲಿ ಅವರ ಸ್ಥಾನಗಳ ಬಗ್ಗೆ ಇನ್ನೂ ಖಚಿತತೆ ಇಲ್ಲ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಈ ವಿಷಯದ ಬಗ್ಗೆ ಯಾವುದೇ ಬದ್ಧತೆಯನ್ನು ಹೊಂದಿಲ್ಲ, ಆದರೆ ಅನುಭವಿಗಳು ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಉದ್ವಿಗ್ನತೆಯ ವರದಿಗಳು ಮತ್ತು ವದಂತಿಗಳು ಸಹ ಇವೆ.
ಭಾರತದ ದಂತಕಥೆ ನಾಯಕ ಕಪಿಲ್ ದೇವ್, ಭಾರತದ 2027ರ ವಿಶ್ವಕಪ್ ತಂಡದಲ್ಲಿ ಕೊಹ್ಲಿ ಮತ್ತು ರೋಹಿತ್ ಅವರ ಸ್ಥಾನದ ಕುರಿತು ನಿರ್ಧಾರ ಕೈಗೊಳ್ಳುವುದು ಆಯ್ಕೆಗಾರರ ಕೆಲಸವಾಗಿದೆ. ಆಯ್ಕೆಗಾರರ ನಂತರ ನಾಯಕನೊಂದಿಗೆ ಮತ್ತು ಆ ಬಳಿಕವಷ್ಟೇ ಕೋಚ್‌ನೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.
'ನೋಡಿ, ನಿರ್ವಹಣೆ ಮುಖ್ಯ ವಿಷಯವಲ್ಲ. ಐದು ಆಯ್ಕೆದಾರರಿದ್ದಾರೆ. ಅವರ ಆಲೋಚನಾ ಪ್ರಕ್ರಿಯೆಯು ಸರಿಯಾಗಿದ್ದರೆ, ಅದು ಮುಖ್ಯ' ಎಂದು ಕಪಿಲ್ ಸ್ಪೋರ್ಟ್ಸ್ ತಕ್‌ಗೆ ಗೌತಮ್ ಗಂಭೀರ್ ನೇತೃತ್ವದ ತಂಡದ ನಿರ್ವಹಣೆಯು ಕೊಹ್ಲಿ ಅಥವಾ ರೋಹಿತ್ ಅವರನ್ನು ಬಯಸದಿರುವ ಬಗ್ಗೆ ಕೇಳಿದಾಗ ಹೇಳಿದರು.
'ಮೊದಲನೆಯದಾಗಿ, ಐವರು ಆಯ್ಕೆಗಾರರಿರುತ್ತಾರೆ. ನಂತರ ನೀವು ನಾಯಕನನ್ನು ಕೇಳಬಹುದು ಮತ್ತು ಅವರ ಚಿಂತನೆಯನ್ನು ಅರ್ಥಮಾಡಿಕೊಳ್ಳಲು ವ್ಯವಸ್ಥಾಪಕರನ್ನು (ಮ್ಯಾನೇಜರ್) ಸಂಪರ್ಕಿಸಬಹುದು. ಆದರೆ, ಆಟಗಾರನು ಸೂಕ್ತ ಎಂದು ಆ ಐವರು ಆಯ್ಕೆಗಾರರು ಮೊದಲೇ ನಿರ್ಧರಿಸಿದ್ದರೆ, ನೀವು ನಾಯಕನನ್ನಾಗಲಿ ಅಥವಾ ವ್ಯವಸ್ಥಾಪಕರನ್ನಾಗಲಿ ಸಂಪರ್ಕಿಸುವ ಅಗತ್ಯವಿರುವುದಿಲ್ಲ. ಆಯ್ಕೆಗಾರರು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದರೆ, ಅಷ್ಟೇ ಸಾಕು' ಎಂದು ಕಪಿಲ್ ಹೇಳಿದರು.
2027ರ ವಿಶ್ವಕಪ್ ವೇಳೆಗೆ ಕೊಹ್ಲಿಗೆ ಸುಮಾರು 39 ವರ್ಷ ಹಾಗೂ ರೋಹಿತ್ ಅವರಿಗೆ 40 ವರ್ಷ ವಯಸ್ಸಾಗಿರುತ್ತದೆ.
'ಆಯ್ಕೆಗಾರರ ಚಿಂತನೆ ಹೇಗಿದೆ ಎಂಬುದು ನನಗೆ ತಿಳಿದಿಲ್ಲ. ಕೆಲವೊಮ್ಮೆ, '25 ವರ್ಷದವರೇ ನಿವೃತ್ತಿ ಪಡೆಯುವುದು ಹೇಗೆ ಸಾಧ್ಯ?' ಎಂದು ಜನರು ಕೇಳುತ್ತಾರೆ; ಆದರೆ ಅವರು ನಿವೃತ್ತಿ ಪಡೆಯುತ್ತಾರೆ. ಹಾಗೆಯೇ, ನೀವು ದೈಹಿಕವಾಗಿ ಸದೃಢರಾಗಿದ್ದು, ಸಾಮರ್ಥ್ಯವಿದ್ದರೆ ಮತ್ತು 39 ಅಥವಾ 40ನೇ ವಯಸ್ಸಿನಲ್ಲೂ ಆಡಬಲ್ಲವರಾಗಿದ್ದರೆ, ಖಂಡಿತವಾಗಿಯೂ ಆಡಬಹುದು. ನಿಮ್ಮ ಪ್ರದರ್ಶನ ಉತ್ತಮವಾಗಿದ್ದರೆ, ವಯಸ್ಸನ್ನು ಪರಿಗಣಿಸಬೇಕಾದ ಅಗತ್ಯವಿಲ್ಲ' ಎಂದರು.
'ವಯಸ್ಸಿನ ವಿಚಾರದಲ್ಲಿನ ಸಮಸ್ಯೆಯೆಂದರೆ, ಒಬ್ಬ ಆಟಗಾರ ಕಳಪೆ ಫಾರ್ಮ್‌ಗೆ ಒಳಗಾದಾಗ ಸಾರ್ವಜನಿಕರು ಮತ್ತು ಇತರರು 'ಅವರ ಕಾಲ ಮುಗಿದಿದೆ' ಎಂದು ಹೇಳುತ್ತಾರೆ. ಆದರೆ ಅದೇ ಪರಿಸ್ಥಿತಿ 20 ವರ್ಷದ ಆಟಗಾರನಿಗೆ ಎದುರಾದರೆ, 'ಏನೂ ತೊಂದರೆಯಿಲ್ಲ, ಸಮಯ ಕೂಡಿಬರುತ್ತದೆ, ಅವರು ಮತ್ತೆ ಪುಟಿದೇಳುತ್ತಾರೆ' ಎಂದು ಜನರು ಹೇಳುತ್ತಾರೆ' ಎಂದು ಕಪಿಲ್ ವಿವರಿಸಿದರು.
ಸದ್ಯಕ್ಕೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತದ ಏಕದಿನ ತಂಡದ ಭಾಗವಾಗಿದ್ದು, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮುಂಬರುವ ಮೂರು ಪಂದ್ಯಗಳ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



