CCL 2026: ಪಂಜಾಬ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಶುಭಾರಂಭ!
2026ರ ಸೆಲೆಬ್ರೆಟಿ ಕ್ರಿಕೆಟ್ ಲೀಗ್ (CCL)ನ ಮೊದಲ ಪಂದ್ಯ ವೈಜಾಗ್‌ನಲ್ಲಿ ನಡೆದಿದ್ದು ಪಂಜಾಬ್ ತಂಡವನ್ನು ಸೋಲಿಸಿ ಕರ್ನಾಟಕ ಬುಲ್ಡೋಜರ್ಸ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

2026ರ ಸೆಲೆಬ್ರೆಟಿ ಕ್ರಿಕೆಟ್ ಲೀಗ್ (CCL)ನ ಮೊದಲ ಪಂದ್ಯ ವೈಜಾಗ್‌ನಲ್ಲಿ ನಡೆದಿದ್ದು ಪಂಜಾಬ್ ತಂಡವನ್ನು ಸೋಲಿಸಿ ಕರ್ನಾಟಕ ಬುಲ್ಡೋಜರ್ಸ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಫಸ್ಟ್ ಮ್ಯಾಚ್‌ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ ಉತ್ತಮ ಆರಂಭವನ್ನೇ ಪಡೆದಿತ್ತು. ಇನ್ನು ಡಾರ್ಲಿಂಗ್ ಕೃಷ್ಣ ವಿಕೆಟ್ ಕೀಳುವ ಮೂಲಕ ಪಂಜಾಬ್ ಟಕ್ಕರ್ ಕೊಟ್ಟರು.
ಪಂಜಾಬ್ ಬೌಲರ್‌ಗಳನ್ನು ಚೆಂಡಾಡಿದ ಕರ್ಣ ಆರ್ಯನ್ ಕೇವಲ 33 ಎಸೆತಗಳಲ್ಲಿ 83 ರನ್‌ಗಳನ್ನು ಬಾರಿಸಿದರು. ಇನ್ನು ಪ್ರದೀಪ್ 13 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಆದರೆ ಕಿಚ್ಚ ಸುದೀಪ್ ಶೂನ್ಯಕ್ಕೆ ಔಟಾದರು. ಅಂತಿಮವಾಗಿ ಕರ್ನಾಟಕ ಬುಲ್ಡೋಜರ್ಸ್ 170 ರನ್‌ಗಳನ್ನು ಕಲೆ ಹಾಕಿ, ಪಂಜಾಬ್ ದಿ ಶೇರ್ ತಂಡಕ್ಕೆ 171 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿ ಬೆನ್ನಟ್ಟಿದ ಪಂಜಾಬ್ ಡಿ ಶೇರ್ ತಂಡ 139 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ಬುಲ್ಡೋಜರ್ಸ್ 31 ರನ್‌ಗಳ ಗೆಲುವಿನೊಂದಿಗೆ CCL 2026 ಅಭಿಯಾನವನ್ನು ಪ್ರಾರಂಭಿಸಿದೆ.

IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನಸಂದಣಿ ನಿಯಂತ್ರಣ ಸಮಸ್ಯೆಗೆ ಪರಿಹಾರ; KSCA ಮುಂದೆ RCB ಪ್ರಸ್ತಾಪ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


