Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6
ಎಂಟು ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ತಂಡ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿ, ಎರಡನೇ ದಿನದಾಟವನ್ನು ಅಂತ್ಯಗೊಳಿಸಿದೆ.

ಹುಬ್ಬಳ್ಳಿ: ಹುಬ್ಬಳ್ಳಿಯ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನ 2ನೇ ದಿನವಾದ ಬುಧವಾರ, ಮೊದಲ ಬಾರಿ ರಣಜಿ ಟ್ರೋಫಿ ಫೈನಲ್ ತಲುಪಿರುವ ಜಮ್ಮು ಮತ್ತು ಕಾಶ್ಮೀರ ತಂಡ, ಕರ್ನಾಟಕದ ವಿರುದ್ಧ ದಿಟ್ಟ ಪ್ರದರ್ಶನ ನೀಡಿ ಬೃಹತ್ ಮೊತ್ತ ಸೇರಿಸಿದೆ.
ಎಂಟು ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ತಂಡ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿ, ಎರಡನೇ ದಿನದಾಟವನ್ನು ಅಂತ್ಯಗೊಳಿಸಿದೆ.
ಮೊದಲನೇ ದಿನಾಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 284 ರನ್ ಗಳಿಸಿದ್ದ ಜಮ್ಮು ಮತ್ತು ಕಾಶ್ಮೀರ ತಂಡ, ಇಂದು ಆಟ ಮುಂದುವರಿಸಿ, ಕನ್ಹಯ್ಯಾ ವಾಧವನ್ ಮತ್ತು ನಾಯಕ ಪರಾಸ್ ದೋಗ್ರಾ ಅವರ ತಲಾ 70 ರನ್ ಗಳ ನೆರವಿನಿಂದ 527 ರನ್ ಗಳನ್ನು ಕಲೆ ಹಾಕಿದೆ.
ಶುಭಮ್ ಪುಂಡಿರ್(121) ಈ ಹಿಂದೆಯೇ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಯಾವರ್ ಹಸನ್(88) ಮತ್ತು ಅಬ್ದುಲ್ ಸಮದ್ (61) ಕರ್ನಾಟಕ ಬೌಲರ್‌ಗಳನ್ನು ದೀರ್ಘಾವಧಿಯವರೆಗೆ ದಂಡಿಸಿದರು.
ಕರ್ನಾಟಕ ಪರ ವಿದ್ಯಾಧರ ಪಾಟೀಲ್(1-104), ಶಿಖರ್ ಶೆಟ್ಟಿ(1-112)ಹಾಗೂ ಶ್ರೇಯಸ್ ಗೋಪಾಲ್(1-130)ತಲಾ ಒಂದು ವಿಕೆಟ್‌ಗಳನ್ನು ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಜಮ್ಮು ಮತ್ತು ಕಾಶ್ಮೀರ 156 ಓವರ್‌ಗಳಲ್ಲಿ 527/6
ಶುಭಮ್ ಪುಂಡೀರ್ 121, ಯಾವರ್ ಹಸನ್ 88, ಪಾರಸ್ ಡೋಗ್ರಾ 70, ಕನ್ಹಯ್ಯಾ ವಾಧವನ್ 70, ಅಬ್ದುಲ್ ಸಮದ್ 61, ಸಾಹಿಲ್ ಲೋತ್ರಾ 57 ಹಾಗೂ ಅಬಿದ್ ಮುಷ್ತಾಕ್ 20 ರನ್ ಗಳೊಂದಿಗೆ ಬ್ಯಾಟಿಂಗ್ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


