ತಾಕತ್ ಇಲ್ಲ, ಹೀಗಾಗಿ 4ನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ: ಬಾಬರ್ ಅಜಮ್ ಮಾನ ಕಳೆದ ಪಾಕ್ ಕೋಚ್ ಮೈಕ್ ಹೆಸ್ಸನ್!
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿವಾದಗಳ ಸರಣಿ ನಿರಂತರವಾಗಿ ಮುಂದುವರೆದಿದೆ. ಬಾಬರ್ ಅಜಮ್ ಅವರ ಬ್ಯಾಟಿಂಗ್ ಮತ್ತು ಅವರ ಪಾತ್ರದ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿವಾದಗಳ ಸರಣಿ ನಿರಂತರವಾಗಿ ಮುಂದುವರೆದಿದೆ. ಬಾಬರ್ ಅಜಮ್ ಅವರ ಬ್ಯಾಟಿಂಗ್ ಮತ್ತು ಅವರ ಪಾತ್ರದ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಬರ್ ಪವರ್‌ಪ್ಲೇ ಅಥವಾ ಅಂತಿಮ ಓವರ್‌ಗಳಿಗೆ ಸೂಕ್ತವಲ್ಲ ಎಂದು ಕೋಚ್ ಹೇಳಿದ್ದಾರೆ. ಬಾಬರ್ ಮೊದಲ ಆರು ಓವರ್‌ಗಳಲ್ಲಿ ಅವರಿಗೆ ಸ್ಫೋಟಕ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸ್ಟ್ರೈಕ್ ರೇಟ್ 100ಕ್ಕಿಂತ ಕಡಿಮೆಯಿದೆ. ಹೀಗಾಗಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ ಎಂದು ಮೈಕ್ ಹೆಸ್ಸನ್ ಹೇಳಿದರು. ಇನ್ನು 10ನೇ ಓವರ್ ನಂತರವೂ ಆಡಲು ಸಾಧ್ಯವಾಗದಿದ್ದರೆ, ಅವರು ತಂಡದಲ್ಲಿ ಏಕೆ ಆಡುತ್ತಿದ್ದಾರೆ? ಎಂದು ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.
ನಾಯಕ ಸಲ್ಮಾನ್ ಅಲಿ ಅಘಾ ನೇತೃತ್ವದಲ್ಲಿ, ಬಾಬರ್ ಅಜಮ್ ಅವರನ್ನು 2026ರ ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟಿಂಗ್ ಸ್ಥಾನದಿಂದ 4ನೇ ಸ್ಥಾನಕ್ಕೆ ಇಳಿಸಲಾಗಿದೆ. ಅವರ ಗುಂಪು ಹಂತದ ಪ್ರದರ್ಶನ ನಿರಾಶಾದಾಯಕವಾಗಿತ್ತು. ನೆದರ್ಲ್ಯಾಂಡ್ ಮತ್ತು ಭಾರತ ವಿರುದ್ಧ ವಿಫಲವಾಗಿದ್ದರೂ ಅಮೆರಿಕ ವಿರುದ್ಧ ಆಡಿ ಕಷ್ಟದ ಸಮಯದಲ್ಲಿ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದ ಬಾಬರ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ ಎಂದು ಕೋಚ್ ಹೆಸ್ಸನ್ ವಾದಿಸಿದರು.
ತಂಡ ಸಂಕಷ್ಟದಲ್ಲಿದ್ದಾಗ ಮಧ್ಯಮ ಓವರ್‌ಗಳಲ್ಲಿ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಲು ಬಾಬರ್ ಅಜಮ್ ಸೂಕ್ತ ಆಟಗಾರ. ಆದರೆ ಬಾಬರ್ ಪವರ್ ಹಿಟ್ಟರ್ ಅಲ್ಲ ಎಂಬುದು ಸತ್ಯ. ಪಂದ್ಯದ 12ನೇ ಓವರ್ ನಂತರ ಬಾಬರ್ ಅಜಮ್ ಕ್ರೀಸ್‌ಗೆ ಬರುವುದು ತಂಡಕ್ಕೆ ಅಷ್ಟೊಂದು ಲಾಭದಾಯಕವಲ್ಲ. ಆ ಸಮಯದಲ್ಲಿ ಅವರಿಗಿಂತ ವೇಗವಾಗಿ ರನ್ ಗಳಿಸುವ ಪವರ್ ಹಿಟ್ಟರ್‌ಗಳು ತಂಡಕ್ಕೆ ಅಗತ್ಯ ಎಂದು ಹೆಸ್ಸನ್ ಹೇಳಿದರು.
ಆದಾಗ್ಯೂ, ಪತ್ರಿಕಾಗೋಷ್ಠಿಯಲ್ಲೇ ಕೋಚ್ ಇಂತಹ ಹೇಳಿಕೆ ನೀಡಿರುವುದು ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬನೆಂದು ಪರಿಗಣಿಸಲಾದ ಬಾಬರ್ ಅಜಮ್ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯಗಳಲ್ಲಿ ಬಾಬಾರ್ ಅಜಮ್ ನೆದರ್ಲ್ಯಾಂಡ್ಸ್ ವಿರುದ್ಧ 18 ಎಸೆತಗಳಲ್ಲಿ 15 ಮತ್ತು ಭಾರತ ವಿರುದ್ಧ 7 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



