ಕ್ರಿಕೆಟ್

ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ: ಹಾರ್ದಿಕ್ ಪಾಂಡ್ಯಗೆ ಮಹಿಕಾ ಕೊಟ್ಟ 'ಸ್ಪೆಷಲ್ ಗಿಫ್ಟ್' ಏನು ಗೊತ್ತಾ? Video

ಪಾಂಡ್ಯ ಅವರ ಮುದ್ದಾದ ಫೋಟೋವನ್ನು ಮಹಿಕಾ ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಅವರು ಗುಲಾಬಿ ಹೂಗಳ ಗುಚ್ಚವನ್ನು ಹಿಡಿದಿರುವುದನ್ನು ಕಾಣಬಹುದು.

ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ: ಹಾರ್ದಿಕ್ ಪಾಂಡ್ಯಗೆ ಮಹಿಕಾ ಕೊಟ್ಟ 'ಸ್ಪೆಷಲ್ ಗಿಫ್ಟ್' ಏನು ಗೊತ್ತಾ? Video
ಹಾರ್ದಿಕ್ ಪಾಂಡ್ಯ, ಮಹಿಕಾ ಶರ್ಮಾ
Published On :

ನವದೆಹಲಿ: ಈಗ ಎಲ್ಲೆಲ್ಲೂ ಪ್ರೀತಿಯದ್ದೇ ಮಾತು. ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿರುವುದರೊಂದಿಗೆ ತಮ್ಮ ಸಂಗಾತಿಯ ಮನಗೆಲ್ಲಲು ಏನೇನ್ನೂ ಮಾಡ್ತಾರೆ. ಸೆಲೆಬ್ರಿಟಿಗಳು ಕೂಡ ಮೋಡಿ ಮಾಡ್ತಿದ್ದಾರೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೃದಯ ಬೆರೆತ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಇತ್ತೀಚಿನ Instagram ಸ್ಟೋರಿಯಲ್ಲೂ ಪ್ರೀತಿ ಹೊರಹೊಮ್ಮಿದೆ. ನಮೀಬಿಯಾ ವಿರುದ್ಧದ T20 ವಿಶ್ವಕಪ್ ಪಂದ್ಯದಲ್ಲಿ ಪಾಂಡ್ಯ ಅವರನ್ನು ಹುರಿದುಂಬಿಸಲು ದೆಹಲಿಗೆ ಬಂದ ಮಹಿಕಾ ಶರ್ಮಾ ಅವರ Instagram ಪೋಸ್ಟ್ ನ್ನು ರಿಶೇರ್ ಮಾಡಿದ್ದಾರೆ.

ಪಾಂಡ್ಯ ಅವರ ಮುದ್ದಾದ ಫೋಟೋವನ್ನು ಮಹಿಕಾ ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಅವರು ಗುಲಾಬಿ ಹೂಗಳ ಗುಚ್ಚವನ್ನು ಹಿಡಿದಿರುವುದನ್ನು ಕಾಣಬಹುದು.

Story image

ನನ್ನ ಜೀವನದ ಮ್ಯಾನ್ ಆಫ್ ದಿ ಮ್ಯಾಚ್" ಎಂದು ಮಹಿಕಾ ಪೋಸ್ಟ್ ನೀಡಿದ್ದಾರೆ. ಈ ಪೋಸ್ಟ್ ನ್ನು ಹಾರ್ದಿಕ್ ಪಾಂಡ್ಯ ರಿಶೇರ್ ಮಾಡಿದ್ದಾರೆ. "ವ್ಯಾಲೆಂಟೈನ್ ಮತ್ತು ನನ್ನ ಬೇಬಿ ಹುಟ್ಟುಹಬ್ಬದ ವಾರವು ಪ್ರಾರಂಭವಾಗುತ್ತದೆ" ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಮಾಡೆಲ್ ನಟಸಾ ಸ್ಟಾಂಕೋವಿಕ್ ಅವರನ್ನು ಹಾರ್ದಿಕ್ ಪಾಂಡ್ಯ ಮದುವೆಯಾಗಿದ್ದರು. ಜುಲೈ 2024 ರಲ್ಲಿ ದಂಪತಿಗಳು ಜಂಟಿ ಹೇಳಿಕೆಯ ಮೂಲಕ ವಿಚ್ಚೇದನ ಘೋಷಿಸಿದ್ದರು. ತಮ್ಮ ಮಗ ಅಗಸ್ತ್ಯನ ಸಹ-ಪೋಷಕರಾಗಿ ಮುಂದುವರಿಯುವುದಾಗಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.