ಕ್ರಿಕೆಟ್

T20 World Cup: ಇಂಗ್ಲೆಂಡ್ ಭರ್ಜರಿ ಫೈಟ್; ಕ್ರಿಕೆಟ್ ಶಿಶು ನೇಪಾಳಕ್ಕೆ 4 ರನ್‌ ವೀರೋಚಿತ ಸೋಲು!

ಟಿ20 ವಿಶ್ವಕಪ್ 2026ರ ಇಂಗ್ಲೆಂಡ್ ಮತ್ತು ನೇಪಾಳ ನಡುವಿನ ಪಂದ್ಯ ರೋಚಕಘಟ್ಟ ತಲುಪಿತ್ತು. ಅಂತಿಮವಾಗಿ ಇಂಗ್ಲೆಂಡ್ ತಂಡ ಕೊನೆಯ ಓವರ್ ನಲ್ಲಿ ನೇಪಾಳ ವಿರುದ್ಧ 4 ರನ್ ಗಳಿಂದ ಗೆಲುವು ಸಾಧಿಸಿದೆ.

T20 World Cup: ಇಂಗ್ಲೆಂಡ್ ಭರ್ಜರಿ ಫೈಟ್; ಕ್ರಿಕೆಟ್ ಶಿಶು ನೇಪಾಳಕ್ಕೆ 4 ರನ್‌ ವೀರೋಚಿತ ಸೋಲು!
Published On :

ಟಿ20 ವಿಶ್ವಕಪ್ 2026ರ ಇಂಗ್ಲೆಂಡ್ ಮತ್ತು ನೇಪಾಳ ನಡುವಿನ ಪಂದ್ಯ ರೋಚಕಘಟ್ಟ ತಲುಪಿತ್ತು. ಅಂತಿಮವಾಗಿ ಇಂಗ್ಲೆಂಡ್ ತಂಡ ಕೊನೆಯ ಓವರ್ ನಲ್ಲಿ ನೇಪಾಳ ವಿರುದ್ಧ 4 ರನ್ ಗಳಿಂದ ಗೆಲುವು ಸಾಧಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವನ್ನು ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ತಂಡವು ಕಳಪೆ ಆರಂಭವನ್ನು ಪಡೆಯಿತು. ಎರಡನೇ ಓವರ್‌ನಲ್ಲಿ ತಂಡ 5 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ, ತಂಡವು ನಂತರ ಚೇತರಿಸಿಕೊಂಡಿದ್ದು 184 ದೊಡ್ಡ ಮೊತ್ತ ಪೇರಿಸಿತ್ತು. ಇಂಗ್ಲೆಂಡ್ ಪರ ಜಾಕೋಬ್ ಬೆಥೆಲ್ ಅರ್ಧಶತಕ ಗಳಿಸಿ 55 ರನ್ ಗಳಿಸಿದರು. ಹ್ಯಾರಿ ಬ್ರೂಕ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿ 53 ರನ್ ಗಳಿಸಿದರು.

ನೇಪಾಳದ ದೀಪೇಂದ್ರ ಸಿಂಗ್ ಐರೀ ಅರ್ಧಶತಕದ ಸಮೀಪಕ್ಕೆ ಬಂದರು. ಆದರೆ 44 ರನ್‌ಗಳಿಗೆ ಔಟಾದರು. ರೋಹಿತ್ ಪೌಡೆಲ್ 34 ಎಸೆತಗಳಲ್ಲಿ 39 ರನ್ ಗಳಿಸಿದರು. ಕುಶಾಲ್ ಭುರ್ತೆಲ್ 17 ಎಸೆತಗಳಲ್ಲಿ 29 ರನ್ ಗಳಿಸಿದರು. ಆದರೆ ಅವರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ, ನೇಪಾಳವು ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನೇಪಾಳ 180 ರನ್ ಪೇರಿಸಿದ್ದು 4 ರನ್ ಗಳಿಂದ ವಿರೋಚಿತ ಸೋಲು ಕಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.