ಆಸ್ಟ್ರೇಲಿಯಾ ವಿರುದ್ಧವೇ ಪಾಕಿಸ್ತಾನ ಕಳ್ಳಾಟ; ಚೆಂಡಿಲ್ಲದೆ ಸ್ಟಂಪೌಟ್; ಮೋಸದಾಟದ Video Viral
ಮೊದಲು ಪಾಕಿಸ್ತಾನದ ಸ್ಪಿನ್ನರ್ ಒಬ್ಬರ ಬೌಲಿಂಗ್ ಶೈಲಿ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಆಸಿಸ್ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಲಾಹೋರ್: ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಹೀನಾಯ ಸರಣಿ ಸೋಲು ಎದುರಾಗಿದ್ದು, 3 ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದ ಸೋಲು ಕಂಡಿದೆ.
ಮೊದಲ ಪಂದ್ಯದಲ್ಲಿ 22 ರನ್ ಅಂತರದಲ್ಲಿ ಗೆದ್ದಿದ್ದ ಪಾಕಿಸ್ತಾನ, 2ನೇ ಪಂದ್ಯದಲ್ಲಿ ಬರೊಬ್ಬರಿ 90 ರನ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಅಂತಿಮ ಹಾಗೂ 3ನೇ ಪಂದ್ಯದಲ್ಲಿ 111 ರನ್ ಅಂತರದಲ್ಲಿ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.
ಆ ಮೂಲಕ ಆಸ್ಟ್ರೇಲಿಯಾ ತಂಡ 3-0 ಅಂತರದಲ್ಲಿ ಹೀನಾಯವಾಗಿ ಸೋತು ಟಿ20 ವಿಶ್ವಕಪ್ ಮುನ್ನವೇ ಅಘಾತ ಎದುರಿಸಿದೆ.
ವಿವಾದಾತ್ಮಕ ಬೌಲಿಂಗ್
ಇನ್ನು ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ನಾನಾ ವಿಚಾರಗಳಿಂದ ಅಸಮಾಧಾನಗೊಂಡಿತ್ತು. ಮೊದಲು ಪಾಕಿಸ್ತಾನದ ಸ್ಪಿನ್ನರ್ ಒಬ್ಬರ ಬೌಲಿಂಗ್ ಶೈಲಿ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಆಸಿಸ್ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಉಸ್ಮಾನ್ ತಾರಿಖ್ ಸ್ಪಿನ್ ದಾಳಿಯಲ್ಲಿ ಕ್ಯಾಮರೋನ್ ಗ್ರೀನ್ ರನ್ಗಳಿಸಲು ತಡಕಾಡಿದರು. ಅದರಲ್ಲೂ ಪಂದ್ಯದ 11ನೇ ಓವರ್ನ 5ನೇ ಎಸೆತದಲ್ಲಿ ಉಸ್ಮಾನ್ ಎಸೆತದಲ್ಲಿ ಕ್ಯಾಚ್ ನೀಡಿ ಗ್ರೀನ್ ಔಟಾದರು. ಅತ್ತ ಡಗೌಟ್ಗೆ ತಲುಪುತ್ತಿದ್ದಂತೆ ಕ್ಯಾಮರೋನ್ ಗ್ರೀನ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.
ಚೆಂಡಿಲ್ಲದೆ ಸ್ಟಂಪ್ ಔಟ್
ಇನ್ನು ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಖ್ವಾಜಾ ನಫಾಯ್ ಮಾಡಿದ ಮೋಸದಾಟ ತಡವಾಗಿ ಬೆಳಕಿಗೆ ಬಂದಿದೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು 20 ಓವರ್ಗಳಲ್ಲಿ 207 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 13ಓವರ್ಗಳಲ್ಲಿ 82 ರನ್ ಕಲೆಹಾಕಿತ್ತು. 14ನೇ ಓವರ್ನಲ್ಲಿ ದಾಳಿಗಿಳಿದ ಸ್ಪಿನ್ನರ್ ಮೊಹಮ್ಮದ್ ನವಾಝ್ 3ನೇ ಎಸೆತದಲ್ಲಿ ಜೋಶ್ ಫಿಲಿಪೆ ವಿಕೆಟ್ ಕಬಳಿಸಿದ್ದರು. ಇನ್ನು 5ನೇ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಮುಂದಾದ ಕೂಪರ್ ಕೊನೊಲಿ ಸ್ಟಂಪ್ ಔಟ್ ಆಗಿ ಹೊರ ನಡೆದಿದ್ದರು.
ವಿಕೆಟ್ ಕೀಪರ್ ಮೋಸದಾಟ
ಆದರೆ ಇದು ನಾಟೌಟ್ ಆಗಿತ್ತು ಎಂಬುದು ಇದೀಗ ಬಹಿರಂಗವಾಗಿದೆ. ಏಕೆಂದರೆ ಪಾಕಿಸ್ತಾನ ವಿಕೆಟ್ ಕೀಪರ್ ಖ್ವಾಜಾ ನಫಾಯ್ ತನ್ನ ಬಲಗೈನಲ್ಲಿ ಚೆಂಡನ್ನು ಹಿಡಿದು ಎಡಗೈನಲ್ಲಿ ಸ್ಟಂಪ್ ಔಟ್ ಮಾಡಿದ್ದರು. ಅಂದರೆ ಇಲ್ಲಿ ಚೆಂಡು ಹಾಗೂ ವಿಕೆಟ್ಗೆ ಯಾವುದೇ ಕಾಂಟಾಕ್ಟ್ ಇರಲಿಲ್ಲ. ಇದಾಗ್ಯೂ ಪಾಕಿಸ್ತಾನ ವಿಕೆಟ್ ಕೀಪರ್ ಖ್ವಾಜಾ ನಫಾಯ್ ಔಟ್ ಎಂದು ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ ಫೀಲ್ಡ್ ಅಂಪೈರ್ ಹಾಗೂ ಮೂರನೇ ಅಂಪೈರ್ ಸಹ ಸ್ಟಂಪ್ ಔಟ್ ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ವಿಡಿಯೋ ವ್ಯಾಪಕ ವೈರಲ್
ಇದೀಗ ಈ ಮಹಾ ಮೋಸದಾಟದ ವಿಡಿಯೋ ವೈರಲ್ ಆಗಿದ್ದು, ಅಂಪೈರ್ ಹಾಗೂ ಪಾಕ್ ಆಟಗಾರರ ಕಳ್ಳಾಟದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ಪಂದ್ಯದಲ್ಲಿ 208 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 16.5 ಓವರ್ಗಳಲ್ಲಿ 96 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕಿಸ್ತಾನ್ ತಂಡ 111 ರನ್ಗಳ ಭರ್ಜರಿ ಜಯ ಸಾಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



