ಕ್ರಿಕೆಟ್

Cricket: 'ಇದ್ಯಾವ್ ಸೀಮೆ ಬೌಲಿಂಗ್'..; ಪಾಕ್ ಬೌಲರ್ ವಿರುದ್ಧ ಮೈದಾನದಲ್ಲೇ ಆಸಿಸ್ ಸ್ಟಾರ್ ಆಟಗಾರ ಅಸಮಾಧಾನ!

ಮೊದಲ ಪಂದ್ಯವನ್ನು 22 ರನ್ ಗಳ ಅಂತರದಲ್ಲಿ ಸೋತಿದ್ದ ಆಸ್ಟ್ರೇಲಿಯಾ 2ನೇ ಟಿ20 ಪಂದ್ಯದಲ್ಲೂ ಬರೋಬ್ಬರಿ 90 ರನ್​ಗಳ ಅಂತರದಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿದೆ.

Cricket: 'ಇದ್ಯಾವ್ ಸೀಮೆ ಬೌಲಿಂಗ್'..; ಪಾಕ್ ಬೌಲರ್ ವಿರುದ್ಧ ಮೈದಾನದಲ್ಲೇ ಆಸಿಸ್ ಸ್ಟಾರ್ ಆಟಗಾರ ಅಸಮಾಧಾನ!
ಉಸ್ಮಾನ್ ತಾರಿಖ್ ಬೌಲಿಂಗ್ ಶೈಲಿ
Published On :

ಇಸ್ಲಾಮಾಬಾದ್: ಪಾಕಿಸ್ತಾನದ ಸ್ಪಿನ್ ಬೌಲರ್ ವಿರುದ್ಧ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಹೀನಾಯ ಪ್ರದರ್ಶನ ನೀಡುತ್ತಿದ್ದು, ಆಸ್ಟ್ರೇಲಿಯಾ ತಾನಾಡಿದ ಮೊದಲೆರಡು ಟಿ20 ಪಂದ್ಯಗಳಲ್ಲಿ ಮುಜುಗರದ ಸೋಲು ಕಂಡಿದೆ.

ಮೊದಲ ಪಂದ್ಯವನ್ನು 22 ರನ್ ಗಳ ಅಂತರದಲ್ಲಿ ಸೋತಿದ್ದ ಆಸ್ಟ್ರೇಲಿಯಾ 2ನೇ ಟಿ20 ಪಂದ್ಯದಲ್ಲೂ ಬರೋಬ್ಬರಿ 90 ರನ್​ಗಳ ಅಂತರದಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಆಸ್ಟ್ರೇಲಿಯಾ ತಂಡದ ಈ ಪ್ರದರ್ಶನ ಆಸಿಸ್ ಮಾಧ್ಯಮಗಳ ಅಸಮಾಧಾನಕ್ಕೆ ಕಾರಣವಾಗಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಆಸಿಸ್ ಆಟಗಾರರು ಪಾಕಿಸ್ತಾನದ ಬೌಲರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕ್ ಬೌಲರ್ ನ ಶೈಲಿಗೆ ಆಸಿಸ್ ಆಟಗಾರರ ಅಸಮಾಧಾನ

ಇನ್ನು ಸತತ 2 ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾ ಆಟಗಾರರು ಪಾಕಿಸ್ತಾನದ ಬೌಲರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಆಸಿಸ್ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

2ನೇ ಪಂದ್ಯದಲ್ಲಿ 20 ಎಸೆತಗಳನ್ನು ಎದುರಿಸಿದ್ದ ಕ್ಯಾಮರೋನ್ ಗ್ರೀನ್ 2 ಸಿಕ್ಸರ್ ಹಾಗೂ 1 ಫೋರ್​ನೊಂದಿಗೆ 35 ರನ್ ಬಾರಿಸಿದ್ದರು.

ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಕ್ಯಾಮೆರೂನ್ ಇದೇ ಉಸ್ಮಾನ್ ತಾರಿಖ್ ಬೌಲಿಂಗ್ ನಲ್ಲಿ ಔಟಾದರು. ಉಸ್ಮಾನ್ ತಾರಿಖ್ ಸ್ಪಿನ್ ದಾಳಿಯಲ್ಲಿ ಕ್ಯಾಮರೋನ್ ಗ್ರೀನ್ ರನ್​ಗಳಿಸಲು ತಡಕಾಡಿದರು. ಅದರಲ್ಲೂ ಪಂದ್ಯದ 11ನೇ ಓವರ್​ನ 5ನೇ ಎಸೆತದಲ್ಲಿ ಉಸ್ಮಾನ್ ಎಸೆತದಲ್ಲಿ ಕ್ಯಾಚ್ ನೀಡಿ ಗ್ರೀನ್ ಔಟಾದರು.

ಬೌಲಿಂಗ್ ಶೈಲಿ ಕುರಿತು ಅಸಮಾಧಾನ

ಅತ್ತ ಡಗೌಟ್​ಗೆ ತಲುಪುತ್ತಿದ್ದಂತೆ ಕ್ಯಾಮರೋನ್ ಗ್ರೀನ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.