ರಕ್ಷಾ ಬಂಧನ: ವಿರಾಟ್ ಕೊಹ್ಲಿ ಸಹೋದರಿಯ ಪೋಸ್ಟ್; ಫೋಟೋ ವೈರಲ್!
ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಸಹೋದರಿ ಭಾವನಾ ಅವರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದ್ದಾರೆ.

ನವದೆಹಲಿ: ಭಾರತದ ಹಬ್ಬಗಳಲ್ಲೇ ರಕ್ಷಾ ಬಂಧನ ಹಬ್ಬ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಸಹೋದರತೆ, ಭ್ರಾತೃತ್ವದ ಸಂಕೇತವಾದ ಈ ಹಬ್ಬವನ್ನು ಸಹೋದರ, ಸಹೋದರಿಯರ ಕೈಗೆ ರಾಖಿ ಕಟ್ಟುವ ಮೂಲಕ ದೇಶಾದ್ಯಂತ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.
ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಸಹೋದರಿ ಭಾವನಾ ಅವರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ಭಾವನಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಂದರ್ಭದ ವಿಶೇಷ ಕ್ಷಣವೊಂದನ್ನು ಹಂಚಿಕೊಂಡಿದ್ದು, ವಿರಾಟ್ ಅವರ ಕೈಗೆ ರಾಖಿ ಕಟ್ಟುತ್ತಿರುವ ದೃಶ್ಯವಿರುವ 'ಸ್ಟೋರಿ'ಯನ್ನು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್‌ನಲ್ಲಿ ವಿರಾಟ್ ಕೊಹ್ಲಿಯ ಹಿರಿಯ ಸಹೋದರ ವಿಕಾಸ್ ಅವರ ಫೋಟೋವೂ ಇದೆ. ಈ ಫೋಟೋಗಳೊಂದಿಗೆ ಭಾವನಾ ತಮ್ಮ ಸಹೋದರರಿಗಾಗಿ ಹೃದಯಪೂರ್ವಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ: "ಜೀವನ ನಮ್ಮನ್ನು ಎಲ್ಲಿಗೆ ಕರೆದೊಯ್ದರೂ, ನನ್ನ ಪ್ರಾರ್ಥನೆಗಳು ಯಾವಾಗಲೂ ನಿಮ್ಮನ್ನು ತಲುಪುತ್ತವೆ ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕೊನೆಯದಾಗಿ ಜುಲೈನಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಮೂರನೇ ಏಕದಿನ ಪಂದ್ಯದಲ್ಲಿ ಆಡಿದ್ದರು. 388 ರನ್‌ಗಳ ಗುರಿ ಬೆನ್ನಟ್ಟಿದ್ದಾಗ ಈ ಅನುಭವಿ ಬ್ಯಾಟರ್ 59 ಎಸೆತಗಳಲ್ಲಿ 74 ರನ್‌ಗಳ ಪ್ರಭಾವಶಾಲಿ ಇನ್ನಿಂಗ್ಸ್ ಆಡಿದ್ದರು. ಮೂರು ಪಂದ್ಯಗಳ ಏಕದಿನ ಸರಣಿಯನ್ನು 48ರ ಸರಾಸರಿ ಮತ್ತು 109.09ರ ಸ್ಟ್ರೈಕ್ ರೇಟ್‌ನೊಂದಿಗೆ ಅವರು ಒಟ್ಟು 144 ರನ್ ಗಳಿಸಿದ್ದರು. ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದವು.
37 ವರ್ಷದ ಕೊಹ್ಲಿ, ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆರು ಪಂದ್ಯಗಳಲ್ಲಿ, ಅವರು 64ರ ಸರಾಸರಿ ಮತ್ತು 106.66ರ ಸ್ಟ್ರೈಕ್ ರೇಟ್‌ನೊಂದಿಗೆ 384 ರನ್ ಗಳಿಸಿದ್ದಾರೆ. ಅವರ ಈ ವರ್ಷದ ಸಾಧನೆಯಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ ಹಾಗೂ ಅವರ ಗರಿಷ್ಠ ಸ್ಕೋರ್ 124 ಆಗಿದೆ.
ಸೆಪ್ಟೆಂಬರ್ 27 ರಂದು ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ಅಂದು ಮತ್ತೆ ಕಣಕ್ಕಿಳಿಯುವ ನಿರೀಕ್ಷೆಯಿದೆ. ಈ ಸರಣಿಯಲ್ಲಿ ಅಂತಾರಾಷ್ಟ್ರೀಯ ಶತಕಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತೊಂದು ಅವಕಾಶವಿದೆ. ಕೊಹ್ಲಿ ಪ್ರಸ್ತುತ 85 ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದು, 100 ಶತಕಗಳ ಮೈಲಿಗಲ್ಲು ತಲುಪುವತ್ತ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



