ಕ್ರಿಕೆಟ್

India vs Sri Lanka, 1st Test: ಕೆ.ಎಲ್ ರಾಹುಲ್ ಹೊಡೆದ ಸ್ವೀಪ್ ಶಾಟ್ ಗೆ ಆಸ್ಪತ್ರೆ ಸೇರಿದ ಲಂಕಾ ಫೀಲ್ಡರ್‌! Video

ಭಾರತದ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಪ್ರಬಲವಾದ ಸ್ವೀಪ್ ಶಾಟ್ ಹೊಡೆದಾಗ ಈ ಘಟನೆ ನಡೆಯಿತು. ಚೆಂಡು ನೇರವಾಗಿ ಶಾರ್ಟ್-ಲೆಗ್ ಫೀಲ್ಡರ್‌ಗೆ ಬಡಿದು ಶ್ರೀಲಂಕಾದ ಆಟಗಾರ ಗಾಯಗೊಂಡರು.

India vs Sri Lanka, 1st Test: ಕೆ.ಎಲ್ ರಾಹುಲ್ ಹೊಡೆದ ಸ್ವೀಪ್ ಶಾಟ್ ಗೆ ಆಸ್ಪತ್ರೆ ಸೇರಿದ ಲಂಕಾ ಫೀಲ್ಡರ್‌! Video
ಕೆ.ಎಲ್. ರಾಹುಲ್ ಹೊಡೆದ ಚೆಂಡು ಶ್ರೀಲಂಕಾ ಆಟಗಾರನಿಗೆ ಬಡಿದ ಕ್ಷಣದ ಚಿತ್ರ
Published On :

ಗಾಲೆ: ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಕನ್ನಡಿಗ ಕೆ.ಎಲ್. ರಾಹುಲ್ ಹೊಡೆತಕ್ಕೆ ಶ್ರೀಲಂಕಾದ ಆಟಗಾರನೊಬ್ಬ ಆಸ್ಪತ್ರೆ ಸೇರುವಂತಾಗಿದೆ.

ಹೌದು. ಭಾರತದ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಪ್ರಬಲವಾದ ಸ್ವೀಪ್ ಶಾಟ್ ಹೊಡೆದಾಗ ಈ ಘಟನೆ ನಡೆಯಿತು.

ಚೆಂಡು ನೇರವಾಗಿ ಶಾರ್ಟ್-ಲೆಗ್ ಫೀಲ್ಡರ್‌ಗೆ ಬಡಿದು ಶ್ರೀಲಂಕಾದ ಆಟಗಾರ ಗಾಯಗೊಂಡರು. ಫೀಲ್ಡರ್ ಗೆ ಬಾಲ್ ಬಡಿದಿರುವುದನ್ನು ಅರಿತ ಕೆಎಲ್ ರಾಹುಲ್ ಕೂಡಾ ಅವರ ಬಳಿಗೆ ಬಂದು ವಿಚಾರಿಸಿದರು.

ತಕ್ಷಣವೇ ಕ್ರೀಡಾಂಗಣದಕ್ಕೆ ಧಾವಿಸಿದ ವೈದ್ಯಕೀಯ ತರಬೇತುದಾರರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಹೆಚ್ಚಿನ ತಪಾಸಣೆಗಾಗಿ ಮೈದಾನದಿಂದ ಹೊರಗೆ ಕರೆದೊಯ್ಯಲು ನಿರ್ಧರಿಸಲಾಯಿತು. ಕೊಲಂಬೊದ ಆಸ್ಪತ್ರೆಗೆ ಕರೆದೊಯ್ದು, ತಪಾಸಣೆ ಮತ್ತು ಸ್ಕ್ಯಾನ್‌ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ವೈದ್ಯಕೀಯ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ ಶ್ರೀಲಂಕಾ ಆಟಗಾರರೊಂದಿಗೆ ಬೆಂಬಲ ನೀಡಿದರು. ಆಟಗಾರನ ಸದ್ಯದ ಆರೋಗ್ಯದ ಕುರಿತು ಇನ್ನೂ ಮಾಹಿತಿ ತಿಳಿದುಬರಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.