ಕ್ರಿಕೆಟ್

IPL 2026, DC vs PBKS: ಕ್ಯಾಚ್ ಹಿಡಿಯುವ ವೇಳೆ Lungi Ngidi ಗೆ ಗಂಭೀರ ಗಾಯ; ಮೈದಾನಕ್ಕೇ ಆಗಮಿಸಿದ ಆ್ಯಂಬುಲೆನ್ಸ್!

ಪಂಜಾಬ್ ಬ್ಯಾಟರ್ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಎನ್​ಗಿಡಿ ಅವರ ತಲೆ ನೆಲಕ್ಕೆ ಜೋರಾಗಿ ಅಪ್ಪಳಿಸಿತು. ಇದರಿಂದ ಎನ್​ಗಿಡಿ ಮೈದಾನದಲ್ಲೇ ಬಿದ್ದು ನೋವಿನಲ್ಲಿ ನರಳಾಡಲಾರಂಬಿಸಿದರು.

IPL 2026, DC vs PBKS: ಕ್ಯಾಚ್ ಹಿಡಿಯುವ ವೇಳೆ Lungi Ngidi ಗೆ ಗಂಭೀರ ಗಾಯ; ಮೈದಾನಕ್ಕೇ ಆಗಮಿಸಿದ ಆ್ಯಂಬುಲೆನ್ಸ್!
ಲುಂಗಿ ಎನ್ಗಿಡಿಗೆ ಗಂಭೀರ ಪೆಟ್ಟು
Published On :

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಅಪಘಾತವೊಂದು ಸಂಭವಿಸಿದ್ದು, ಕ್ಯಾಚ್ ಹಿಡಿಯುವ ವೇಳೆ ಡೆಲ್ಲಿ ತಂಡದ ವೇಗಿ ಲುಂಗಿ ಎನ್ಗಿಡಿ ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದಾರೆ.

ಪಂಜಾಬ್ ಬ್ಯಾಟರ್ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಎನ್​ಗಿಡಿ ಅವರ ತಲೆ ನೆಲಕ್ಕೆ ಜೋರಾಗಿ ಅಪ್ಪಳಿಸಿತು. ಇದರಿಂದ ಎನ್​ಗಿಡಿ ಮೈದಾನದಲ್ಲೇ ಬಿದ್ದು ನೋವಿನಲ್ಲಿ ನರಳಾಡಲಾರಂಬಿಸಿದರು. ಕೂಡಲೇ ಗಾಯದ ಗಂಭೀರತೆ ಅರಿತ ಫೀಲ್ಡ್ ಅಂಪೈರ್ ಗಳು ಫಿಸಿಯೋರನ್ನು ಕರೆಸಿದರು.

ಕೂಡಲೇ ಮೈದಾನಕ್ಕೆ ಆಗಮನಿಸಿದ ಡೆಲ್ಲಿ ತಂಡದ ಫಿಸಿಯೋ ಎನ್​ಗಿಡಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೂ ಎನ್​ಗಿಡಿ ಚೇತರಿಸಿಕೊಳ್ಳುವಂತೆ ಕಾಣಲಿಲ್ಲ. ಕೂಡಲೇ ಸ್ಟ್ರೆಚರ್ ಮೂಲಕ ಎನ್​ಗಿಡಿ ಅವರನ್ನು ಡಗೌಟ್​ಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು.

ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಗಾಯದ ಗಂಭೀರತೆಯನ್ನು ಅರಿತು ಕೂಡಲೇ ಆಂಬುಲೆನ್ಸ್ ಅನ್ನು ಮೈದಾನಕ್ಕೆ ಕರೆತರಲಾಯಿತು. ನಂತರ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಇಷ್ಟಕ್ಕೂ ಆಗಿದ್ದೇನು?

ಪಂಜಾಬ್ ಕಿಂಗ್ಸ್ ತಂಡದ ಮೂರನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಪಂಜಾಬ್ ತಂಡದ ಪ್ರಿಯಾಂಶ್ ಆರ್ಯ ಸ್ಲಾಶ್ ಮಾಡಿದರು. ಈ ವೇಳೆ ಚೆಂಡು ಗಾಳಿಯಲ್ಲಿ ಹಾರಿ ಮಿಡ್-ಆಫ್ ಕಡೆಗೆ ಹೋಯಿತು. ಅಲ್ಲಿ ಎನ್‌ಗಿಡಿ ಕ್ಯಾಚ್ ಗಾಗಿ ಹಿಂದಕ್ಕೆ ಓಡಿದರು.

ಆದಾಗ್ಯೂ, ಎನ್ಗಿಡಿ ಚೆಂಡು ಗುರುತಿಸುವಲ್ಲಿ ವಿಫಲರಾಗಿ ಕ್ಯಾಚ್ ಬಿಟ್ಟರು. ಅದೇ ಸಂದರ್ಭದಲ್ಲಿ ಅವರು ದೇಹದ ಮೇಲಿನ ನಿಯಂತ್ರಣ ಕೂಡ ಕಳೆದುಕೊಂಡು ನೆಲಕ್ಕೆ ಬಿದ್ದರು. ಈ ವೇಳೆ ಅವರ ತಲೆ ನೆಲಕ್ಕೆ ಅಪ್ಪಳಿಸಿತು. ತಲೆಯ ಹಿಂಭಾಗಕ್ಕೆ ನೆಲಕ್ಕೆ ಬಡಿದು ಗಂಭೀರ ಪೆಟ್ಟಾಯಿತು.

ತೀವ್ರ ನೋವಿನಿಂದ ಎನ್ಗಿಡಿ ಸ್ಥಳದಲ್ಲೇ ಒದ್ದಾಡಿದರು. ಅವರು ಬಿದ್ದ ರಭಸಕ್ಕೆ ಅವರ ತಲೆ ಕೂಡ ಚೆಂಡಿನಂತೆ ನೆಲಕ್ಕೆ ಬಿದ್ದು ಮೇಲೆತ್ತೆ ಪುಟಿಯಿತು. ಇದು ಗಾಯದ ಗಂಭೀರತೆಯನ್ನು ತಿಳಿಸುತ್ತದೆ. ಕೂಡಲೇ ಫಿಸಿಯೋ ಮತ್ತು ಸಹಾಯಕ ಸಿಬ್ಬಂದಿ ಆಗಮಿಸಿ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಿದರು.

ಡೆಲ್ಲಿಗೆ 2ನೇ ಆಘಾತ

ವಾಸ್ತವವಾಗಿ ಕಳೆದ 24 ಗಂಟೆಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದು ಎರಡನೇ ಆಘಾತವಾಗಿದೆ. ಈ ಪಂದ್ಯಕ್ಕೂ ಒಂದು ದಿನ ಮೊದಲು ಅಭ್ಯಾಸದ ವೇಳೆ ತಂಡದ ಯುವ ಆಟಗಾರ ಮುಖಕ್ಕೆ ಚೆಂಡು ಬಡಿದು ತೀವ್ರವಾಗಿ ಗಾಯಗೊಂಡಿದ್ದರು.

ಹೀಗಾಗಿ ಅವರನ್ನು ಕೂಡ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಎನ್​ಗಿಡಿ ಹೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ಇವರಿಬ್ಬರ ಗಾಯದ ತೀವ್ರತೆ ಎಷ್ಟಿದೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ಸ್ಥಿರವಾಗಿದೆ.. ಭಯವಿಲ್ಲ: ಡೆಲ್ಲಿ ಟ್ವೀಟ್

ಇನ್ನು ಲುಂಗಿ ಎನ್ಗಿಡಿ ಆರೋಗ್ಯದ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ಡಿಸ್ಚಾರ್ಜ್ ಗಾಗಿ ಕಾಯುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.