IPL 2026: ಇಲ್ಲಿಯವರೆಗೂ ಒಂದೇ ಒಂದು ವಿಕೆಟ್ ಪಡೆಯದ ವಿಶ್ವ ಪ್ರಸಿದ್ಧ ವೇಗಿ! ಹತಾಶೆಗೆ ಅಭಿಮಾನಿಗಳು ಶಾಕ್; Video
ಮುಂಬೈ ಇತ್ತೀಚಿಗೆ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಬೂಮ್ರಾ ಅವರ ಹತಾಶೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮುಂಬೈ: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದಾಗಿನಿಂದಲೂ ಮುಂಬೈ ಇಂಡಿಯನ್ಸ್ (MI) ವೇಗಿ ಜಸ್ಪ್ರೀತ್ ಬೂಮ್ರಾ ವಿಕೆಟ್ ಪಡೆಯಲು ಹೆಣಗಾಡುತ್ತಿದ್ದಾರೆ. ಇಲ್ಲಿಯವರೆಗೂ ಒಂದೇ ಒಂದು ವಿಕೆಟ್ ಪಡೆದಿಲ್ಲ. ಅಲ್ಲದೇ ಅವರ ಫ್ರಾಂಚೈಸಿಯೂ ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿಲ್ಲ.
ಮುಂಬೈ ಇತ್ತೀಚಿಗೆ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಬೂಮ್ರಾ ಅವರ ಹತಾಶೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರಪಂಚದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾದ ಬೂಮ್ರಾ ಅವರ ಮಾನಸಿಕ ಸ್ಥಿತಿಯ ಬಗ್ಗೆ ಅಭಿಮಾನಿಗಳು ಚಿಂತಿತರಾಗಿದ್ದಾರೆ.
ಹತಾಶೆಯಿಂದ ಬುಮ್ರಾ ಬೌಲಿಂಗ್ ಮಾರ್ಕರ್ ಅನ್ನು ಎತ್ತಿ ಎಸೆಯುತ್ತಾರೆ. ಬಳಿಕ ಬಾಗಿ ಕಿರುಚುವುದು ವಿಡಿಯೋದಲ್ಲಿದೆ. ಹಿಂಬದಿಯಲ್ಲಿ ಆರ್ ಸಿಬಿಯ ಟೀಮ್ ಡೇವಿಡ್ ಕಾಣಿಸುತ್ತಾರೆ. ಡೇವಿಡ್ ಮುಂಬೈ ಇಂಡಿಯನ್ಸ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಕೇವಲ 16 ಎಸೆತಗಳಲ್ಲಿ 34 ರನ್ ಗಳಿಸಿ ತಮ್ಮ ತಂಡ 240 ರನ್ ಗಳಿಸಲು ನೆರವಾದರು. ಇದಕ್ಕೆ ಪ್ರತಿಯಾಗಿ, ಮುಂಬೈ ಕೇವಲ 222 ರನ್ ಗಳಿಸಲು ಸಾಧ್ಯವಾಯಿತು.
ಪಂದ್ಯದ ವೇಳೆ ಬುಮ್ರಾ ಹೆಣಗಾಡಿದರು. ತಮ್ಮ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟರೂ, ಮತ್ತೆ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಯಾವಾಗಲೂ ಮುಖದಲ್ಲಿ ನಗುವನ್ನು ಹೊಂದಿರುವ ಬುಮ್ರಾ ಅವರನ್ನು ನೋಡಿ ಅಭಿಮಾನಿಗಳು ತೀವ್ರ ಆಘಾತಕ್ಕೊಳಗಾದರು.
ಬುಮ್ರಾ ಅವರ ವೈಫಲ್ಯದ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಅನೇಕ ಕಾರಣ ನೀಡಿದ್ದಾರೆ. ಪವರ್‌ಪ್ಲೇನಲ್ಲಿ ಇತರ ಬೌಲರ್‌ಗಳಿಂದ ಒತ್ತಡದ ಕೊರತೆಯು ಬುಮ್ರಾ ಅವರ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.

IPL 2026: 'ಹೀಗೆ ಮಾಡಿದರೆ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆಯುವುದು ಕಷ್ಟವಲ್ಲ'; ಮಾಜಿ ಆಟಗಾರ ಇರ್ಫಾನ್ ಪಠಾಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


