ಕ್ರಿಕೆಟ್

IPL 2026: ವೈಭವ್‌ ಸೂರ್ಯವಂಶಿ ಅಬ್ಬರ; RCB ವಿರುದ್ಧ RR ಗೆ 6 ವಿಕೆಟ್ ಗೆಲುವು

ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್​ಗಳಿಸಿತ್ತು. 202 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 18 ಓವರ್​ಗಳಲ್ಲಿ 4 ನಷ್ಟಕ್ಕೆ 202 ರನ್ ಗಳಿಸಿ ಗುರಿ ತಲುಪಿತು.

IPL 2026: ವೈಭವ್‌ ಸೂರ್ಯವಂಶಿ ಅಬ್ಬರ; RCB ವಿರುದ್ಧ RR ಗೆ 6 ವಿಕೆಟ್ ಗೆಲುವು
ವೈಭವ್ ಸೂರ್ಯವಂಶಿ — online desk
Published On :

ಗುವಾಹಟಿ: ಗುವಾಹಟಿಯಲ್ಲಿ ನಡೆದ 16 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್- ಆರ್ ಸಿಬಿ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮಿಂಚಿದ್ದು, ರಾಜಸ್ಥಾನ ತಂಡ 6 ವಿಕೆಟ್ ಗಳ ಜಯ ಗಳಿಸಿದೆ.

15ರ ಬಾಲಕ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್‌ ಅಬ್ಬರದ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌, ಹಾಲಿ ಚಾಂಪಿಯನ್ಸ್‌ ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸತತ 4ನೇ ಪಂದ್ಯ ಗೆದ್ದು, ಗೆಲುವಿನ ಓಟ ಮುಂದುವರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್​ಗಳಿಸಿತ್ತು. 202 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 18 ಓವರ್​ಗಳಲ್ಲಿ 4 ನಷ್ಟಕ್ಕೆ 202 ರನ್ ಗಳಿಸಿ ಗುರಿ ತಲುಪಿತು. ವೈಭವ್ ಸೂರ್ಯವಂಶಿ 78 ರನ್​ಗಳಿಸಿದರೆ, ಧ್ರುವ್ ಜುರೆಲ್ ಅಜೇಯ 81 ರನ್​ಗಳಿಸಿ ಗೆಲುವಿನ ರೂವಾರಿಗಳಾದರು.

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಅಬ್ಬರದ ಬ್ಯಾಟಿಂಗ್ ನಿಂದ ಐಪಿಎಲ್ 2026 ರಲ್ಲಿ ಎಲ್ಲರ ಗಮನಸೆಳೆದಿದ್ದಾರೆ. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ದಂತಕಥೆಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸದರು. ವೈಭವ್ ಸೂರ್ಯವಂಶಿ 353.33 ಸ್ಟ್ರೈಕ್ ರೇಟ್ ನೊಂದಿಗೆ 78 ರನ್ ಗಳಿಸಿದ್ದನ್ನು ವಿಶ್ಲೇಷಕರು ಆಶ್ಚರ್ಯಚಕಿತರಗಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಆರಂಭದಲ್ಲಿ ಆರ್‌ಸಿಬಿ ತಂಡ ಲಯ ಕಳೆದುಕೊಂಡು ಪದೇ ಪದೇ ವಿಕೆಟ್‌ ಕಳೆದುಕೊಂಡಿತು. ಪವರ್‌ಪ್ಲೇನಲ್ಲಿ ಬೆಂಗಳೂರಿನ ಅಗ್ರ ಕ್ರಮಾಂಕ ಕುಸಿಯಿತು. ಸಾಲ್ಟ್ ಮತ್ತು ಪಡಿಕ್ಕಲ್ ನಂತರ ವಿರಾಟ್ ಕೊಹ್ಲಿ ಕೂಡ ಕ್ಲೀನ್‌ ಬೋಲ್ಡ್‌ ಆಗಿ ಔಟಾದರು. ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 32 ರನ್‌ಗಳಿಗೆ ಔಟಾದರು, ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಪಂದ್ಯದಲ್ಲಿ ಟಿಮ್ ಡೇವಿಡ್ ಅತಿ ಬೇಗ ಔಟಾಗಿದ್ದು, ಆರ್‌ಸಿಬಿ ಅಭಿಮಾನಿಗಳಿ ನಿರಾಶೆ ಉಂಟು ಮಾಡಿತ್ತು. ನಾಯಕನ ಇನ್ನಿಂಗ್ಸ್ ಆಡಿದ ರಜತ್ ಪಾಟಿದಾರ್ (63 ರನ್) ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.