ನೀವ್ಯಾಕೆ ಕೊಹ್ಲಿಯಂತೆ ಮ್ಯಾಚ್ ಫಿನಿಶ್ ಮಾಡಲ್ಲ: ಪತ್ರಕರ್ತರ ಮೇಲೆ ಬಾಬರ್ ಅಜಮ್ ಫುಲ್ ಗರಂ! Video
ಪೇಶಾವರ ಝಲ್ಮಿ ಪರ ಆಡುತ್ತಿರುವ ಬಾಬರ್ ಅಜಮ್, ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 37 ಬಾಲ್’ನಲ್ಲಿ 43 ರನ್ ಹೊಡೆದಿದ್ದರು.

ಕರಾಚಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ ಪತ್ರಕರ್ತರ ಮೇಲೆ ಪಾಕಿಸ್ತಾನದ ಬ್ಯಾಟರ್ ಅಜಮ್ ಪುಲ್ ಗರಂ ಆಗಿದ್ದಾರೆ. 'ನೀವ್ಯಾಕೆ ಕೊಹ್ಲಿಯಂತೆ ಮ್ಯಾಚ್ ಫಿನಿಶ್ ಮಾಡಲ್ಲ ಎಂಬ ವರದಿಗಾರನೊಬ್ಬನ ಪ್ರಶ್ನೆಗೆ ಕೆರಳಿ ಕೆಂಡವಾಗಿದ್ದಾರೆ. PSL ಪಂದ್ಯಾವಳಿಯಲ್ಲಿ ಹೈದರಾಬಾದ್ ಕಿಂಗ್ಸ್ಮೆನ್ ವಿರುದ್ಧ ಪೇಶಾವರ್ ಝಾಲ್ಮಿ ರೋಚಕ ಗೆಲುವು ಸಾಧಿಸಿದ ನಡೆದ ಸುದ್ದಿಗೋಷ್ಠಿಯಲ್ಲಿ ಇದು ನಡೆದಿದೆ.
ಪೇಶಾವರ ಝಲ್ಮಿ ಪರ ಆಡುತ್ತಿರುವ ಬಾಬರ್ ಅಜಮ್, ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 37 ಬಾಲ್’ನಲ್ಲಿ 43 ರನ್ ಹೊಡೆದಿದ್ದರು. ಪಂದ್ಯದ ಕೊನೆಯ ಬಾಲ್’ನಲ್ಲಿ ಹೈದರಾಬಾದ್ ಕಿಂಗ್ಮೆನ್ ವಿರುದ್ದ ಪೇಶಾವರ ತಂಡ ಗೆಲುವು ಸಾಧಿಸಿತ್ತು. ಬಾಬರ್, ಉತ್ತವಾಗಿ ಆಡಿದ್ದರೂ, ಮ್ಯಾಚ್ ಫಿನಿಶ್ ಮಾಡಿದ್ದು ಇಫ್ತಿಕರ್ ಅಹ್ಮದ್. ಇದು ಕೊಹ್ಲಿ ಜೊತೆ ಹೋಲಿಕೆಗೆ ಕಾರಣವಾಯಿತು.
ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ಬಾಬರ್ ಅಜಮ್ ಅವರ ಸಾಮರ್ಥ್ಯಗಳನ್ನು ಪ್ರಶ್ನಿಸಿದರು, ಅಲ್ಲದೇ ಅವರನ್ನು ವಿರಾಟ್ ಕೊಹ್ಲಿ ಜೊತೆಗೆ ಹೋಲಿಕೆ ಮಾಡಿದರು. ಆದರೆ 'ನೀವ್ಯಾಕೆ ಕೊಹ್ಲಿಯಂತೆ ಮ್ಯಾಚ್ ಫಿನಿಶ್ ಮಾಡಲ್ಲ ಎಂದು ಕೇಳಿದರು. ಇದರಿಂದ ಕೆರಳಿದ ಬಾಬರ್ ಅಜಮ್, ಅದು ನಿಮ್ಮ ತಪ್ಪು ಕಲ್ಪನೆ ಅಷ್ಟೇ. ಆ ವಿಚಾರವನ್ನು ಬಿಟ್ಟುಬಿಡಿ ಎಂದು ಹೇಳಿದರು.
ವಿರಾಟ್ ಕೊಹ್ಲಿ ನಿಮ್ಮಂತೆಯೇ ಶಾಟ್ ಹೊಡೆಯುತ್ತಾರೆ. ಆದರೆ ಅವರು ಪಂದ್ಯವನ್ನು ಫಿನಿಶ್ ಮಾಡ್ತಾರೆ. ನೀವ್ಯಾಕೆ ಆ ರೀತಿ ಮ್ಯಾಚ್ ಫಿನಿಶ್ ಮಾಡಲ್ಲ. ಅವರೊಂದಿಗೆ ನಿಮ್ಮನ್ನು ಜನ ಹೋಲಿಕೆ ಮಾಡ್ತಾರೆ. ನಿಮ್ಮ ಅಭಿಪ್ರಾಯವೇನು? ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ.
ಇದರಿಂದ ಉರಿದುಬಿದ್ದ ಬಾಬರ್ ಅಜಮ್, ಈ ಪ್ರಶ್ನೆಯನ್ನು ನೀವೆ ಇಟ್ಟುಕೊಳ್ಳಿ. ಈ ಹೋಲಿಕೆಯನ್ನು ಅಂತ್ಯಗೊಳಿಸಿ, ಬಿಟ್ಟುಬಿಡಿ. ನಾನು ಮ್ಯಾಚ್ ಫಿನಿಶ್ ಮಾಡಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ ಎಂದಿದ್ದಾರೆ.
ಪಾಕಿಸ್ತಾನದ ಅತಿದೊಡ್ಡ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರೂ ಸಹ ಬಾಬರ್ ಅಜಮ್ ಹೀಗೆ ಆಗಾಗ್ಗೆ ಟೀಕೆಗಳಿಗೆ ಒಳಗಾಗುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


