Chennai: ಚೊಚ್ಚಲ ಟೆಸ್ಟ್ ವಿಜೇತ ಭಾರತ ತಂಡದ ಹಿರಿಯ ಆಟಗಾರ CD ಗೋಪಿನಾಥ್ ನಿಧನ!
ಮಾರ್ಚ್ 1, 1930 ರಂದು ಮದ್ರಾಸ್‌ನಲ್ಲಿ (ಈಗ ಚೆನ್ನೈ) ಜನಿಸಿದ ಚಿಂಗಲ್‌ಪುಟ್ ದುರೈಕಣ್ಣು ಗೋಪಿನಾಥ್ 1951 ರಲ್ಲಿ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು.

ಚೆನ್ನೈ: ಚೊಚ್ಚಲ ಟೆಸ್ಟ್ ವಿಜೇತ ಭಾರತ ತಂಡದ ಕೊನೆಯ ಆಟಗಾರರಾಗಿದ್ದ ಮಾಜಿ ಟೆಸ್ಟ್ ಕ್ರಿಕೆಟಿಗ ಸಿ ಡಿ ಗೋಪಿನಾಥ್ ಗುರುವಾರ ಚೆನ್ನೈನಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ಚಿರನಿದ್ರೆಗೆ ಜಾರಿದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಗೋಪಿನಾಥ್ ಅವರು ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರಾಗಿದ್ದರು ಹಾಗೂ ಆಸ್ಟ್ರೇಲಿಯಾದ ನೀಲ್ ಹಾರ್ವೆ ನಂತರ ವಿಶ್ವದ ಎರಡನೇ ಹಿರಿಯ ಆಟಗಾರರಾಗಿದ್ದರು. ಅವರ ಸಾವಿನೊಂದಿಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೊಂದು ಅಂತ್ಯಗೊಂಡಿದೆ.
ಮಾರ್ಚ್ 1, 1930 ರಂದು ಮದ್ರಾಸ್‌ನಲ್ಲಿ (ಈಗ ಚೆನ್ನೈ) ಜನಿಸಿದ ಚಿಂಗಲ್‌ಪುಟ್ ದುರೈಕಣ್ಣು ಗೋಪಿನಾಥ್ 1951 ರಲ್ಲಿ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು.
ನಂ. 8 ರಲ್ಲಿ ಬ್ಯಾಟಿಂಗ್ ಮಾಡಿದ ಅವರು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 50 ರನ್ ಗಳಿಸಿದರು. ಅದು ಅವರ ಅತ್ಯಧಿಕ ಟೆಸ್ಟ್ ಸ್ಕೋರ್. ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 42 ರನ್ ಗಳಿಸಿ ಭಾರತ ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವನ್ನು ಇನಿಂಗ್ಸ್ ಮತ್ತು ಎಂಟು ರನ್‌ಗಳಿಂದ ಸೋಲಿಸಿದ ಭಾರತ ತನ್ನ ಚೊಚ್ಚಲ ಟೆಸ್ಟ್ ಗೆದ್ದಿತ್ತು. ಆ ಐತಿಹಾಸಿಕ ಪಂದ್ಯದಲ್ಲಿ ಗೋಪಿನಾಥ್ 35 ರನ್ ಹೊಡೆದಿದ್ದರು.
ಭಾರತ ಪರ ಎಂಟು ಟೆಸ್ಟ್ ಪಂದ್ಯಗಳನ್ನಾಡಿದ CD ಗೋಪಿನಾಥ್, ಮದ್ರಾಸ್ ಪರ 83 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು. 1958-59 ರಲ್ಲಿ ಮೈಸೂರು ವಿರುದ್ಧ ಅತ್ಯಧಿಕ 234 ರನ್ ಗಳೊಂದಿಗೆ ರಣಜಿಯಲ್ಲಿ 2,349 ರನ್ ಗಳಿಸಿದ್ದರು. ನಂತರ ಅವರು 1955-56 ರಿಂದ 1962-63 ರವರೆಗೆ ಮದ್ರಾಸ್ ತಂಡದ ಕ್ಯಾಪ್ಟನ್ ಆಗಿದ್ದರು. ರಾಷ್ಟ್ರೀಯ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದರು ಮತ್ತು 1979 ರಲ್ಲಿ ಭಾರತ ತಂಡದ ಇಂಗ್ಲೆಂಡ್ ಪ್ರವಾಸವನ್ನು ನಿರ್ವಹಿಸಿದರು.

IPL 2026: ಗೆಲುವ ಪಂದ್ಯ ಕೈ ಚೆಲ್ಲಿದ್ದಕ್ಕೆ 'ಡ್ರೆಸ್ಸಿಂಗ್ ರೂಮ್' ನಲ್ಲಿ ಕಣ್ಣೀರಿಟ್ಟ ಡೇವಿಡ್ ಮಿಲ್ಲರ್! Video
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


