ಕ್ರಿಕೆಟ್

IPL ಅನ್ನೂ ಮೀರಿಸಿ PSL 'ವಿಶ್ವದ ನಂಬರ್ ಒನ್ ಲೀಗ್' ಆಗುತ್ತದೆ: Mohsin Naqvi

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಹೂಡಿಕೆಗೆ ಪ್ರಮುಖ ತಾಣವಾಗಿ ಮಾರ್ಪಟ್ಟಿದ್ದು, ಪಿಎಸ್‌ಎಲ್ ವಿಶ್ವದ ಅಗ್ರ ಲೀಗ್ ಆಗುವ ಹಾದಿಯಲ್ಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

IPL ಅನ್ನೂ ಮೀರಿಸಿ PSL 'ವಿಶ್ವದ ನಂಬರ್ ಒನ್ ಲೀಗ್' ಆಗುತ್ತದೆ: Mohsin Naqvi
ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ
Published On :

ಲಾಹೋರ್: ಭಾರತೀಯ ಪ್ರೀಮಿಯರ್ ಲೀಗ್ (IPL) ಅನ್ನೂ ಸೋಲಿಸಿ ಪಾಕಿಸ್ತಾನ ಸೂಪರ್ ಲೀಗ್ (PSL) ಜಗತ್ತಿನ ನಂಬರ್ ಒನ್ ಲೀಗ್ ಆಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಹೂಡಿಕೆಗೆ ಪ್ರಮುಖ ತಾಣವಾಗಿ ಮಾರ್ಪಟ್ಟಿದ್ದು, ಪಿಎಸ್‌ಎಲ್ ವಿಶ್ವದ ಅಗ್ರ ಲೀಗ್ ಆಗುವ ಹಾದಿಯಲ್ಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

ಪಿಸಿಬಿ ಆಡಳಿತ ಮಂಡಳಿಯ ಸಭೆಯಲ್ಲಿ, ಮಂಡಳಿಯು 2024-25ರ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳನ್ನು ಔಪಚಾರಿಕವಾಗಿ ಅನುಮೋದಿಸಿದೆ.

ಈ ವೇಳೆ ಮಾತನಾಡಿದ ಮೊಹ್ಸಿನ್ ನಖ್ವಿ, 'ಪಿಎಸ್‌ಎಲ್ ವಿಶ್ವದ ಅಗ್ರ ಲೀಗ್ ಆಗುವ ಹಾದಿಯಲ್ಲಿದೆ. ಅದು ಮುಂದಿನ ದಿನಗಳಲ್ಲಿ ನಡೆಯಲಿದೆ. ಪಿಎಸ್‌ಎಲ್ ವಿಶ್ವದ ನಂಬರ್ ಒನ್ ಲೀಗ್ ಆಗುವ ಸಮಯ ದೂರವಿಲ್ಲ. ಪಿಎಸ್‌ಎಲ್ ಈಗ ಹೂಡಿಕೆಗೆ ಅತ್ಯುತ್ತಮ ಮಾರುಕಟ್ಟೆಯಾಗಿದೆ ಎಂದು ಹೇಳಿದರು.

ಪಿಎಸ್‌ಎಲ್ 2026 ರ ದಾಖಲೆ ಮುರಿದ ಫ್ರಾಂಚೈಸಿ ಹರಾಜಿಗೆ ಆಡಳಿತ ಮಂಡಳಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಲೀಗ್‌ನ ಪಥದ ಬಗ್ಗೆ ತಮಗೆ ವಿಶ್ವಾಸವಿದೆ. ಹೂಡಿಕೆದಾರರ ಪ್ರತಿಕ್ರಿಯೆ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ನ ಉಜ್ವಲ ಭವಿಷ್ಯದ ಸ್ಪಷ್ಟ ಸಂಕೇತವಾಗಿದೆ ಎಂದು ಪಿಸಿಬಿ ಮುಖ್ಯಸ್ಥರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.