'ಆ ಹಸಿವು ಇನ್ನೂ ಇದೆ.. ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ': Virat kohli ಖಡಕ್ ಸಂದೇಶ! ಟೆಸ್ಟ್ ಕ್ರಿಕೆಟ್ ಗೆ ಕೊಹ್ಲಿ ವಾಪಸ್?
ರಾಂಚಿಯ ಜೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 17 ರನ್ ಗಳ ಅಂತರದಲ್ಲಿ ವಿರೋಚಿತ ಜಯ ದಾಖಲಿಸಿತು.

ರಾಂಚಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಖಡಕ್ ಸಂದೇಶ ರವಾನಿಸಿದ್ದಾರೆ.
ಹೌದು.. ರಾಂಚಿಯ ಜೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 17 ರನ್ ಗಳ ಅಂತರದಲ್ಲಿ ವಿರೋಚಿತ ಜಯ ದಾಖಲಿಸಿತು.
ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಇನ್ನಿಲ್ಲದಂತೆ ದಂಡಿಸಿದ ಭಾರತದ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ (135), ರೋಹಿತ್ ಶರ್ಮಾ (57) ಮತ್ತು ಕೆಎಲ್ ರಾಹುಲ್ (60) ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಭಾರತ ನೀಡಿದ್ದ 350 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 49.2 ಓವರ್ ನಲ್ಲಿ 332 ರನ್ ಗೇ ಆಲೌಟ್ ಆಯಿತು. ಆ ಮೂಲಕ ಕೇವಲ 12 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
ಈ ಪಂದ್ಯದಲ್ಲಿ ಭಾರತದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 120 ಎಸೆತಗಳನ್ನು ಎದುರಿಸಿ 7 ಸಿಕ್ಸರ್ ಮತ್ತು 11 ಬೌಂಡರಿಗಳ ಸಹಿತ 135 ರನ್ ಚಚ್ಚಿದರು. ಅಂತೆಯೇ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
'ಆ ಹಸಿವು ಇನ್ನೂ ಇದೆ.. ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ'
ಇನ್ನು ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ 'ಹಸಿವು ಇನ್ನೂ ಇದೆ.. ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ' ಎಂದು ಹೇಳುವ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.
'ನಾನು ಪರಿಸ್ಥಿತಿಗಳನ್ನು ಸ್ವಲ್ಪ ಅರ್ಥಮಾಡಿಕೊಳ್ಳಲು ಬಯಸಿದ್ದೆ. ನಾನು ಹಗಲು ಹೊತ್ತಿನಲ್ಲಿ ಕೆಲವು ಸೆಷನ್‌ಗಳನ್ನು ಮತ್ತು ನಂತರ ಸಂಜೆ ಒಂದು ಸೆಷನ್ ಅನ್ನು ಬ್ಯಾಟಿಂಗ್ ಮಾಡಿದೆ, ಮತ್ತು ನಂತರ ನನ್ನ ಸಿದ್ಧತೆ ಪೂರ್ಣಗೊಂಡಿತು.
'ಇಂದು ಆ ರೀತಿ ಆಟ ಆಡಲು ನಿಜಕ್ಕೂ ಸಂತೋಷವಾಯಿತು. ಮೊದಲ 20-25 ಓವರ್‌ಗಳಲ್ಲಿ ಪಿಚ್ ಸಾಕಷ್ಟು ಯೋಗ್ಯವಾಗಿತ್ತು. ನಂತರ ಅದು ನಿಧಾನಗತಿಯಾಗಿ ಪರಿವರ್ತಿಸಿತು. ಹೀಗಾಗಿ ನಾನು ಆ ಬಗ್ಗೆ ಹೆಚ್ಚು ಗಮನ ಹರಿಸಿದೆ. ಉತ್ತಮ ಎಸೆತಗಳಿಗಾಗಿ ಕಾಯುತ್ತಿದ್ದೆ' ಎಂದು ಹೇಳಿದರು.
ಟೆಸ್ಟ್ ಕ್ರಿಕೆಟ್ ಮರಳುವ ಕುರಿತು ಕೊಹ್ಲಿ ಮಹತ್ವದ ಹೇಳಿಕೆ
ಇದೇ ವೇಳೆ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ಮರಳುವ ಕುರಿತು ಮಾತನಾಡಿದ ಕೊಹ್ಲಿ, 'ನಾನು ಇನ್ನು ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಕ್ರಿಕೆಟ್ ಮಾತ್ರ ಆಡುತ್ತೇನೆ ಎಂದು ಹೇಳುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಹಿಂತಿರುಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
'ನನಗೆ 37 ವರ್ಷ, ಆದ್ದರಿಂದ ನಾನು ನನ್ನ ಚೇತರಿಕೆಯ ಬಗ್ಗೆ ಕಾಳಜಿ ವಹಿಸಬೇಕು. ಆದರೆ ವಿಷಯ ಏನೆಂದರೆ, ನಾನು ಆಟವನ್ನು ನನ್ನ ಮನಸ್ಸಿನಲ್ಲಿ ಬಹಳಷ್ಟು ದೃಶ್ಯೀಕರಿಸುತ್ತೇನೆ. ನಾನು ಆಟದ ಬಗ್ಗೆ ಯೋಚಿಸಿದಾಗಲೆಲ್ಲಾ, ನಾನು ಅದನ್ನು ದೃಶ್ಯೀಕರಿಸುವಾಗ, ನಾನು ನನ್ನನ್ನು ತೀವ್ರವಾಗಿ, ವೇಗವಾಗಿ, ಫೀಲ್ಡರ್‌ಗಳನ್ನು ಎದುರಿಸುತ್ತಾ, ಬೌಲರ್‌ಗಳನ್ನು ಎದುರಿಸುತ್ತಾ ನೋಡಿದರೆ, ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ ಮತ್ತು ನಾನು ಆರಾಮವಾಗಿ ಆಡಬಲ್ಲೆ ಎಂದು ನನಗೆ ತಿಳಿದಿದೆ ಎಂದು ಕೊಹ್ಲಿ ಹೇಳಿದರು.
ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಬಿಸಿಸಿಐ ಆದೇಶದ ಮೇರೆಗೆ ಅವರು ಟೆಸ್ಟ್ ಕ್ರಿಕೆಟ್‌ಗೆ ಮರಳಬಹುದು ಎಂಬ ವರದಿಗಳಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



