Cricket: ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಮೈದಾನಕ್ಕೆ ನುಗ್ಗಿದ Virat Kohli ಅಭಿಮಾನಿ! KL Rahul ಕಕ್ಕಾಬಿಕ್ಕಿ! Video
ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 17 ರನ್ ಗಳ ಅಂತರದಲ್ಲಿ ವಿರೋಚಿತ ಜಯ ದಾಖಲಿಸಿತು.

ರಾಂಚಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಗಂಭೀರ ಭದ್ರತಾ ಲೋಪವಾಗಿದ್ದು, ಅಭಿಮಾನಿಯೋರ್ವ ಭದ್ರತಾ ಸಿಬ್ಬಂದಿಗಳ ಕಣ್ಣುತಪ್ಪಿಸಿ ಮೈದಾನದೊಳಗೆ ನುಗ್ಗಿದ ಘಟನೆ ನಡೆದಿದೆ.
ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 17 ರನ್ ಗಳ ಅಂತರದಲ್ಲಿ ವಿರೋಚಿತ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅಬ್ಬರ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.
ಇದು ಅವರ ಏಕದಿನ ಕ್ರಿಕೆಟ್ ನ 52ನೇ ಶತಕವಾಗಿದ್ದು, ಈ ಶತಕ ಸಿಡಿಸುತ್ತಲೇ ಕೊಹ್ಲಿ ಸಂಭ್ರಮಿಸುತ್ತಿದ್ದರು. ಇದೇ ಸಂದರ್ಭದಲ್ಲೇ ಮೈದಾನದಲ್ಲಿ ಭದ್ರತಾ ಲೋಪವಾಗಿದ್ದು, ಅಭಿಮಾನಿಯೋರ್ವ ಸಿಬ್ಬಂದಿಗಳ ಕಣ್ಮುತಪ್ಪಿಸಿ ಮೈದಾನಕ್ಕೆ ನುಗ್ಗಿದ್ದಾನೆ.
ಈ ವೇಳೆ ಸಿಬ್ಬಂದಿಗಳು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆತ ವೇಗವಾಗಿ ಓಡುತ್ತಾ ವಿರಾಟ್ ಕೊಹ್ಲಿ ಬಳಿ ಬಂದು ಅವರ ಕಾಲಿಗೆರಗಿದ್ದಾರೆ. ಈ ವೇಳೆ ಸಿಬ್ಬಂದಿ ಅಭಿಮಾನಿಯನ್ನು ಹಿಡಿದು ಹೊರಕ್ಕೆ ಎಳೆದೊಯ್ದಿದ್ದಾರೆ.
KL Rahul ಕಕ್ಕಾಬಿಕ್ಕಿ!
ಇನ್ನು ಅಭಿಮಾನಿ ಕೊಹ್ಲಿಯತ್ತ ಓಡಿ ಬರುತ್ತಲೇ ಮತ್ತೊಂದು ಬದಿಯಲ್ಲಿದ್ದ ಕೆಎಲ್ ರಾಹುಲ್ ಅಭಿಮಾನಿಯ ನೋಡಿ ಕಕ್ಕಾಬಿಕ್ಕಿಯಾದರು. ಈ ವೇಳೆ ಕೊಹ್ಲಿಗೆ ಕೂಡ ಆತನ ಬರುವಿಕೆಯನ್ನು ತಿಳಿಸಿದರು. ಕೂಡಲೇ ಎಚ್ಚೆತ್ತ ಕೊಹ್ಲಿ ಆತನನ್ನು ಸಂಭಾಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



